ಅ೦ತರಾಷ್ಟ್ರೀಯ

ಉಕ್ರೇನ್ ಹಡಗುಗಳನ್ನು ಬಿಡುಗಡೆಗೊಳಿಸದ ರಷ್ಯಾ: ಅರ್ಜೆಂಟೈನಾದಲ್ಲಿ ಪುಟಿನ್ ಭೇಟಿಯನ್ನು ರದ್ದು ಮಾಡಿದ ಟ್ರಂಪ್

ಬ್ಯೂರಿಸ್ ಐರಿಸ್: ರಾಷ್ಯಾ ಉಕ್ರೇನ್ ನ ಅಹಡಗುಗಳನ್ನು ವಶಕ್ಕೆ ಪಡೆದಿರುವ ಕಾರಣ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆಗಿನ ತಮ್ಮ ನಿಯೋಜಿತ ಮಾತುಕತೆಯನ್ನು ರದ್ದುಗೊಳಿಸಿರುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅರ್ಜೆಂಟೈನಾದಲ್ಲಿ  ನಡೆಯಲಿರುವ ವಿಶ್ವ ನಾಯಕರ ಶೃಂಗಸಭೆಗಾಗಿ ವಾಷಿಂಗ್ಟನ್ ನಿಂದ ಹೊರಡುವ ಮುನ್ನ ಟ್ರಂಪ್ ಈ ಕುರಿತಂತೆ ಟ್ವಿಟ್ಟರ್ ನಲ್ಲಿ ಸ್ಪಷ್ಟಪಡಿಸಿದ್ದಾರೆ. ಹಡಗುಗಳು ಹಾಗೂ ನಾವಿಕರು ರಷ್ಯಾದಿಂದ ಉಕ್ರೇನ್ ಗೆ ಹಿಂತಿರುಗಿಲ್ಲ ಎನ್ನುವುದನ್ನು ನಾನು ಅರಿತಿರುವೆ. ಈ ಅಂಶವನ್ನಾಧರಿಸಿ ಅರ್ಜಂಟೈನಾದಲ್ಲಿ ರಷ್ಯಾ ಅಧ್ಯಕ್ಷರೊಡನೆ ನನ್ನ ಭೇಟಿಯನ್ನು ರದ್ದುಗೊಳಿಸಲು ನಿರ್ಧರಿಸಿದ್ದೇನೆ. ಇದು ಸಂಬಂಧಪಟ್ಟ ಎಲ್ಲಾ ಪಕ್ಷಗಳಿಗೆ ಸಮ್ಮತವೆಂದು ನಾನು ಭಾವಿಸುವೆ, ಸಧ್ಯದ ಪರಿಸ್ಥಿತಿ ತಿಳಿಯಾದ ತಕ್ಷಣ ನಾವು ಮತ್ತೆ ಭೇಟಿಯಾಗುವವರಿದ್ದೇವೆ ಎನ್ನುವುದು ನನ್ನ ಆಶಯ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.
ರಷ್ಯಾ ಇತ್ತೀಚೆಗೆ ಉಕ್ರೇನ್ ಗೆ ಸೇರಿದ್ದ ಮೂರು ಹಡಗುಗಳು ಹಾಗೂ ಸಿಬ್ಬಂಣ್ದಿಗಳನ್ನು ವಶಕ್ಕೆ ಪಡೆದುಕೊಂಡಿದೆ.ಉಕ್ರೇನ್ ಗೆ ತನ್ನ ಮುಖ್ಯ ಭೂಮಿಕೆಯಲ್ಲಿ ಹಾಗೂ ತನ್ನ ವ್ಯಾಪ್ತಿಯ ಸಾಗರ ಹಾದು ಹೋಗಲು ಅನುಮತಿ ಇಲ್ಲ ಎಂದು ರಷ್ಯಾ ಹೇಳಿದ್ದರೆ ಉಕ್ರೇನ್ ತಮ್ಮ ಹಡಗುಗಳು ಹಾಗೂ ಸಿಬ್ಬಂದಿ ಅಂತರಾಷ್ಟ್ರೀಯ ಕಡಲಿನ ಕಾನೂನಿಗೆ ಬದ್ದವಾಗಿದ್ದಾರೆ ಎಂದು ವಾದಿಸಿದೆ.

About the author

ಕನ್ನಡ ಟುಡೆ

Leave a Comment