ರಾಷ್ಟ್ರ ಸುದ್ದಿ

ಉಗ್ರರ ಗುಂಡೇಟಿಗೆ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದ ಇಬ್ಬರು ಕಾರ್ಯಕರ್ತರು ಬಲಿ

ಶ್ರೀನಗರ: ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದ ಇಬ್ಬರು ಕಾರ್ಯಕರ್ತರು ಶ್ರೀನಗರದಲ್ಲಿ ಉಗ್ರರು ನಡೆಸಿದ ಫೈರಿಂಗ್‌ಗೆ ಬಲಿಯಾಗಿದ್ದಾರೆ. ನಾಜಿರ್‌ ಭಟ್‌ ಮತ್ತು ಮುಸ್ತಾಖ್‌ ವಾನಿ ಎಂಬವರು ಮೃತಪಟ್ಟಿದ್ದು, ಪಕ್ಷದ ಮತ್ತೋರ್ವ ಕಾರ್ಯಕರ್ತನಿಗೆ ಗಂಭೀರ ಗಾಯಗಳಾಗಿವೆ. ಘಟನೆಯನ್ನು ನ್ಯಾಷನಲ್‌ ಕಾನ್ಫರೆನ್ಸ್‌(NC) ಮುಖ್ಯಸ್ಥ ಒಮರ್‌ ಅಬ್ದುಲ್ಲಾ ಮತ್ತು ಪೀಪಲ್ಸ್‌ ಡೆಮಾಕ್ರಟಿಕ್‌ ಪಕ್ಷ (PDP) ಮುಖ್ಯಸ್ಥೆ ಮುಫ್ತಿ ಮೆಹಬೂಬ ಹತ್ಯೆಯನ್ನು ಖಂಡಿಸಿದ್ದಾರೆ.

About the author

ಕನ್ನಡ ಟುಡೆ

Leave a Comment