ಕ್ರೀಡೆ

ಉಗ್ರವಾದಿಗಳೊಡನೆ ಸಂಬಂಧವಿದೆ ಎಂದು ಪಾಕಿಸ್ತಾನವನ್ನು ದೂರವಿಡಲು ಆಗಲ್ಲ: ಬಿಸಿಸಿಐಗೆ ಐಸಿಸಿ ಸ್ಪಷ್ಟನೆ

ನವದೆಹಲಿ: ಭಯೋತ್ಪಾದನೆಯೊಡನೆ ಸಂಬಂಧ ಹೊಂದಿರುವ ರಾಷ್ಟ್ರ, ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುವ ರಾಷ್ಟ್ರವೆನ್ನುವ ಕಾರಣಕ್ಕೆ  ಪಾಕಿಸ್ತಾನದೊಡನೆ ಸಂಬಂಧ ಕಡಿದುಕೊಳ್ಲುವುದು ಸಾಧ್ಯವಿಲ್ಲ, ಅದು ನಮ್ಮ ಕೆಲಸವಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ (ಐಸಿಸಿ) ಹೇಳಿದೆ. ಈ ಮೂಲಕ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮನವಿಯನ್ನು ತಿರಸ್ಕರಿಸಿದೆ. ಪುಲ್ವಾಮಾದಲ್ಲಿ ನಡೆದ ಉಗ್ರದಾಳಿಯಲ್ಲಿ ಭಾರತದ ನಲವತ್ತಕ್ಕೆ ಹೆಚ್ಚು ಯೋಧರು ಹುತಾತ್ಮರಾಗಿದ್ದ ನಂತರ ಬಿಸಿಸಿಐ ಪಾಕಿಸ್ತಾನ ಉಗ್ರರಿಗೆ ಸಹಕಾರ ನಿಡುತ್ತಿದೆ, ಹೀಗಾಗಿ ಐಸಿಸಿ ಅದರೋಡನೆ ಸಂಬಂಧ ಕಡಿದುಕೊಳ್ಲಬೇಕೆಂದು ಸೂಚಿಸಿ ಪತ್ರ ಬರೆದಿತ್ತು. ಆದರೆ ಬಿಸಿಸಿಐ ಮನವಿಯನ್ನು ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಈಗ ತಳ್ಳಿ ಹಾಕಿದೆ. “ಐಸಿಸಿ ಅಧ್ಯಕ್ಷರ ಮಟ್ಟದಲ್ಲಿ ಇಂತಹಾ ನಿರ್ಣಯ ತೆಗೆದುಕೊಳ್ಲಲು ಯಾವುದೇ ಕಾರಣದಲ್ಲಿ ಅವಕಾಶವಿಲ್ಲ.ಯಾವುದೇ ರಾಷ್ಟ್ರದ ವಿರುದ್ಧ ಆಡದೆ ಇರುವುದು ಆಯಾ ರಾಷ್ಟ್ರಗಳ ಸರ್ಕಾರದ ಸಂಬಂಧಕ್ಕೆ ಬಿಟ್ಟ ವಿಚಾರ. ಇಂತಹಾ ವಿಚಾರದಲ್ಲಿ ಕ್ರಮ ತೆಗೆದುಕೊಳ್ಲಲು ಐಸಿಸಿ ಯಾವುದೇ ನೀತಿ ಹೊಂದಿಲ್ಲ ಎಂದು ಐಸಿಸಿ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.

About the author

ಕನ್ನಡ ಟುಡೆ

Leave a Comment