ರಾಷ್ಟ್ರ ಸುದ್ದಿ

ಉಗ್ರ ಹುಲಿಗಳನ್ನು ಕೊಂದು ಹಾಕಬೇಕು: ಶೂಟರ್ ನವಾಬ್ ಶಫತ್ ಅಲಿ ಖಾನ್

ಹೈದರಾಬಾದ್: ನರ ಭಕ್ಷಕ ಹುಲಿಗಳು ಭಯೋತ್ಪಾದಕರಂತೆ, ಅವುಗಳನ್ನು ನಿರ್ಮೂಲನೆ ಮಾಡಬೇಕು ಎಂದು ಶೂಟರ್  ನವಾಬ್ ಶಫತ್ ಅಲಿ ಖಾನ್ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.

ನಂಪಾಲಿಯಲ್ಲಿರುವ ಹೈದರಾಬಾದ್ ಮೆಟ್ರೋಪಾಲಿಟನ್ ಕ್ರಿಮಿನಲ್ ಕೋರ್ಟ್‌ನ ಬಾರ್ ಅಸೋಸಿಯೇಶನ್ ಅಹ್ವಾನದ ಮೇರೆಗೆ ಗುರುವಾರ ಮಧ್ಯಾಹ್ನ ವಕೀಲರ ಜತೆ ನಡೆದ ಸಂವಹನ ನಡೆಸಿದ ನವಾಬ್, ಸಂರಕ್ಷಣೆಯ ಭಾಗವಾಗಿ ಭಯೋತ್ಪಾದಕ ಹುಲಿಗಳನ್ನು ಅರಿವಳಿಕೆ ನೀಡಿ ಸೆರೆ ಹಿಡಿಯಬೇಕು ಇಲ್ಲವೇ ಅವುಗಳನ್ನು ಕೊಂದು ಹಾಕಬೇಕು ಎಂದು ಹೇಳಿದ್ದಾರೆ.

‘ಇದುವರೆಗೂ ನಾನು 7 ನರಭಕ್ಷಕ ಹುಲಿ  ಹಾಗೂ ಚಿರತೆಗಳನ್ನು ಶೂಟ್ ಮಾಡಿದ್ದೇನೆ. ಗ್ವಾಲಿಯರ್‌ನಲ್ಲಿ ನಡೆದ ಬೃಹತ್ ಕಾರ್ಯಚರಣೆಯಲ್ಲಿ 17,400 ಮತ್ತು ಬಿಹಾರದಲ್ಲಿ 7000 ಕಾಡು ಹಂದಿಗಳನ್ನು ಹೊಡೆದು ಹಾಕಿರುವುದಲ್ಲಿ ಹೆಮ್ಮೆಪಡುತ್ತೇನೆ’ ಎಂದಿದ್ದಾರೆ ಖಾನ್.

ಹುಲಿಗಳ ಒಟ್ಟು ಜನಸಂಖ್ಯೆಯಲ್ಲಿ ಕೇವಲ 0.1ರಷ್ಟು ಮಾತ್ರ ನರಭಕ್ಷಕ ಹುಲಿಗಳಿವೆ. ಇದು ದೊಡ್ಡ ಸಮಸ್ಯೆಯ ಅಲ್ಲ. ನರಭಕ್ಷಕ ಹುಲಿ ಮತ್ತು ಚಿರತೆಗಳ ಸಮಸ್ಯೆಗೆ ಮುಕ್ತಿ ಕೊಡಲು ಅರವಳಿಕೆ ಪ್ರಯೋಗಿಸುವುದರಲ್ಲಿ ಮತ್ತು ಶೂಟ್ ಮಾಡುವುದರಲ್ಲಿ ಪರಿಣಿತರಾಗಿರುವ ವೃತ್ತಿಪರರ ಅಗತ್ಯವಿದೆ. ಸದ್ಯ ದೇಶದಲ್ಲಿರುವ ಪರಿಣಿತ ಶೂಟರ್ ಎಂದರೆ ನಾನೊಬ್ಬ ಮಾತ್ರ ಎಂದು ಅವರು ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment