ರಾಜ್ಯ

“ಉತ್ತಮ ಪ್ರಜಾಕೀಯ ಪಾರ್ಟಿ” ಹೊಸ ಪಕ್ಷ ಕಟ್ಟಿದ  ರಿಯಲ್ ಸ್ಟಾರ್ ಉಪೇಂದ್ರ

ಬೆಂಗಳೂರು: ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ (ಕೆಪಿಜೆಪಿ) ನಿಂದ ಹೊರಬಂದ ಬೆನ್ನಲ್ಲೇ ನಟ ಉಪೇಂದ್ರ ತಮ್ಮದೇ ಹೊಸ ಪಕ್ಷದ ಹೆಸರನ್ನು ಚುನಾವಣಾ ಆಯೋಗದ ಕೇಂದ್ರ ಕಚೇರಿಯಲ್ಲಿ ನೋಂದಣಿ ಮಾಡಿಸಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿರುವ ಉಪೇಂದ್ರ ತಮ್ಮ ನೂತನ ಪಕ್ಷ ‘ಉತ್ತಮ ಪ್ರಜಾಕೀಯ ಪಾರ್ಟಿ’ಯನ್ನು ನೋಂದಣಿ ಮಾಡಿಸಿರುವುದಾಗಿ ಟ್ವೀಟ್ ಮಾಡಿದ್ದಾರೆ. ದೆಹಲಿಯ ಕೇಂದ್ರ ಚುನಾವಣಾ ಆಯೋಗ ಕಚೇರಿಗೆ ತೆರಳಿರುವ ಉಪೇಂದ್ರ ‘ಉತ್ತಮ ಪ್ರಜಾಕೀಯ ಪಾರ್ಟಿ’ಯ ನೋಂದಣಿ ಪ್ರಕ್ರಿಯೆ ನಡೆಸುತ್ತಿದ್ದಾರೆ.

ಇನ್ನು ಉಪೇಂದ್ರ ಪಕ್ಷ ಸ್ಥಾಪನೆ ಮಾಡಿದ್ದರೂ ಕೂಡ ಹಾಲಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅವರ ಪಕ್ಷ ಸ್ಪರ್ಧಿಸುವ ಅವಕಾಶ ಕಳೆದುಕೊಂಡಿದೆ. ಈಗಾಗಲೇ ನಾಮಪತ್ರ ಸಲ್ಲಿಕೆಯ ಅಂತಿಮ ದಿನ ಮುಕ್ತಾಯವಾಗಿದ್ದು, ಈಗೇನಿದ್ದರೂ ನಟ ಉಪೇಂದ್ರ ಪಕ್ಷ ಸಂಘಟನೆಗೆ ಮಾತ್ರ ಒತ್ತು ನೀಡಬೇಕಿದೆ. ಹೊಸ ಪಕ್ಷ ಆರಂಭಿಸಲಿರುವ ಉಪೇಂದ್ರ, ಪಕ್ಷ ಸಂಘಟನೆಯ ಚಟುವಟಿಕೆಗೆ ಮುಂದಾಗಬೇಕಿದೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳಲಾಗುತ್ತಿದೆ ಎಂಬ ಕಾರಣಕ್ಕೆ ಉಪೇಂದ್ರ ಅವರೊಂದಿಗೆ ಕೆಪಿಜೆಪಿ ಸಂಸ್ಥಾಪಕ ಮಹೇಶ್ ಗೌಡ ಮುನಿಸಿಕೊಂಡಿದ್ದರು. ಈಗ ತಮ್ಮದೇ ಪಕ್ಷ ಸ್ಥಾಪಿಸುತ್ತಿರುವ ಉಪ್ಪಿ ಮುಂದೆ ಪಕ್ಷವನ್ನು ಹೇಗೆ ಕಟ್ಟುತ್ತಾರೆ ಎಂಬುದು ಮುಂದಿರುವ ಕುತೂಹಲವಾಗಿದೆ.

 

About the author

ಕನ್ನಡ ಟುಡೆ

Leave a Comment