ರಾಜಕೀಯ

ಉತ್ತಮ ಸಮಾಜಕ್ಕಾಗಿ ಉತ್ತಮ ಪ್ರಣಾಳಿಕೆ; ಉಪ್ಪಿ ಪಕ್ಷದ ಪ್ರಣಾಳಿಕೆ ಬಿಡುಗಡೆ

ಬೆಂಗಳೂರು: ಪ್ರಜಾಕೀಯ ಪಕ್ಷದ ಸಂಸ್ಥಾಪಕ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಟ್ವಿಟರ್ ನಲ್ಲಿ ಈ ಪ್ರಣಾಳಿಕೆ ಚರ್ಚೆಗಳನ್ನು ಹುಟ್ಟುಹಾಕಿದೆ.
ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಇದೀಗ ತಮ್ಮ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದು, ತಮ್ಮ ಟ್ವೀಟರ್ ಖಾತೆಯಲ್ಲಿ ಸಂಭಾವ್ಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೇ ಈ ಪ್ರಣಾಳಿಕೆಯ ಬಗ್ಗೆ ಅನಿಸಿಕೆ ತಿಳಿಸುವಂತೆ ಹಾಗೂ ಅದನ್ನು ಹೆಚ್ಚು ಹೆಚ್ಚು ಶೇರ್ ಮಾಡುವಂತೆ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ತಮ್ಮ ಪಕ್ಷ ಸಂಘಟನೆ ನಿಮಿತ್ತ ನಟನೆಯಿಂದ ನಟ ಉಪೇಂದ್ರ ಅವರು ಕೊಂಚ ಬ್ರೇಕ್ ಪಡೆದಿದ್ದು, ಪಕ್ಷದ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಈ ಹಿಂದೆ ಉಪೇಂದ್ರ “ಕೆಪಿಜೆಪಿ’ ಪಕ್ಷದ ಮೂಲಕ ರಾಜ್ಯದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದರು. ಬಳಿಕ ಭಿನ್ನಾಭಿಪ್ರಾಯದಿಂದ ಪಕ್ಷ ತೊರೆದು “ಯುಪಿಪಿ’ (ಉತ್ತಮ ಪ್ರಜಾಕೀಯ ಪಾರ್ಟಿ) ಪಕ್ಷ ಸ್ಥಾಪಿಸಿದ್ದು, ಈಗ ಪಕ್ಷ ಸಂಘಟನೆಗಾಗಿ ಪ್ರಣಾಳಿಕೆಯನ್ನು ಟ್ವೀಟರ್ ನಲ್ಲಿ ಬಿಡುಗಡೆ ಮಾಡಿದ್ದಾರೆ.

About the author

ಕನ್ನಡ ಟುಡೆ

Leave a Comment