ರಾಷ್ಟ್ರ

ಉತ್ತರಪ್ರದೇಶದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತನ ಹತ್ಯೆ

ಉತ್ತರಪ್ರದೇಶ: ಉತ್ತರಪ್ರದೇಶದ ಪೂರ್ವಭಾಗದಲ್ಲಿರುವ ಘಾಜಿಪುರದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರ ಹತ್ಯೆಯಾಗಿದೆ.

ಘಾಜಿಪುರದ ಬ್ರಹ್ಮನ್’ಪುರ ಚಟ್ಟಿ ಪ್ರದೇಶದಲ್ಲಿ ರಾಜೇಶ್ ಮಿಶ್ರಾ ಮತ್ತವನ ಸೋದರ ಅಮಿತೇಶ್ ಮಿಶ್ರಾ ಇಬ್ಬರೂ ತಮ್ಮ ಹಾರ್ಡ್’ವೇರ್ ಅಂಗಡಿ ಕುಳಿತಿರುತ್ತಾರೆ. ಈ ವೇಳೆ ಬೈಕ್’ನಲ್ಲಿ ಬಂದಿಳಿದ ಮೂವರು ಹಂತಕರಲ್ಲಿ ಒಬ್ಬಾತ ರಾಜೇಶ್ ಮಿಶ್ರಾನ ತಲೆಗೆ ಗುಂಡು ಹಾರಿಸುತ್ತಾನೆ. ಈ ವೇಳೆ, ಮಧ್ಯಪ್ರವೇಶಿಸಲು ಪ್ರಯತ್ನಿಸಿದ ಆತನ ಸೋದರ ಅಮಿತೇಶ್’ನ ಹೊಟ್ಟೆಗೆ ಗುಂಡು ಹಾರಿಸಿ ಪರಾರಿಯಾಗುತ್ತಾರೆ.

ಹತ್ಯೆಯಾದ ರಾಜೇಶ್ ಮಿಶ್ರಾ ಆರೆಸ್ಸೆಸ್ ಕಾರ್ಯಕರ್ತ ಹಾಗೂ ಪತ್ರಕರ್ತನಾಗಿದ್ದನೆನ್ನಲಾಗಿದೆ. ಬೈಕ್’ನಲ್ಲಿ ಬಂದ ಮೂವರು ಹಂತಕರು ಈ ಕೃತ್ಯ ಎಸಗಿರುವುದು ಗೊತ್ತಾಗಿದೆ. ಈ ಘಟನೆಯಲ್ಲಿ ರಾಜೇಶ್ ಮಿಶ್ರಾ ಸೋದರನೊಬ್ಬನಿಗೆ ಗಾಯವಾಗಿದೆ.

ಇನ್ನೂ ಕೂಡ ಆರೋಪಿಗಳ ಬಂಧನವಾಗಿಲ್ಲ. ಆರೋಪಿಗಳ ಸುಳಿವು ಸಿಕ್ಕಿದ್ದು ಶೀಘ್ರದಲ್ಲೇ ಹಂತಕರನ್ನು ಹಿಡಿಯಲಾಗುವುದು ಎಂದು ಉತ್ತರಪ್ರದೇಶ ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯರು ಕೂಡಲೇ ಇಬ್ಬರನ್ನೂ ಸ್ಥಳೀಯ ಸರಕಾರಿ ಆಸ್ಪತ್ರೆಗೆ ಸೇರಿಸುತ್ತಾರೆ. ಆದರೆ, ರಾಜೇಶ್ ಮಿಶ್ರಾ ಅದಾಗಲೇ ಸಾವನ್ನಪ್ಪಿರುತ್ತಾನೆ. ಗಂಭೀರವಾಗಿ ಗಾಯಗೊಂಡಿರುವ ಅಮಿತೇಶ್’ನನ್ನು ವಾರಾಣಸಿಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದೇ ವೇಳೆ, ಸರಿಯಾದ ಸಮಯಕ್ಕೆ ಪೊಲೀಸರು ಆಗಮಿಸಲಿಲ್ಲ ಎಂಬ ಸಿಟ್ಟಿನಲ್ಲಿ ಸ್ಥಳೀಯ ಜನರು ದಾಂಧಲೆ ನಡೆಸಿದ ಘಟನೆಯೂ ನಡೆದಿದೆ.

About the author

ಕನ್ನಡ ಟುಡೆ

Leave a Comment