ಅಂಕಣಗಳು

ಉತ್ತರ – ಜನ ಜೀವನದ ಅತಿದೊಡ್ಡ ಬೇಲಿ ಬಳ್ಳಾರಿ ಜಾಲಿ

ನಿಮಗೆಲ್ಲ ಆಶ್ಚರ್ಯ ಎನಿಸುತ್ತಿರಬಹುದಲ್ಲವೇ ? ಇದೇನಿದು ಮನುಷ್ಯ ಬಳ್ಳಾರಿ ಜಾಲಿಯನ್ನ ನಮ್ಮ ರೈತನ ಜೀವಕ್ಕೆ ಬೇಲಿ ಎನ್ನುತ್ತಿದ್ದಾನೆಹೌದು !! ನಮ್ಮ ಜಾಗತಿಕ ಮಟ್ಟದ ತಾಪಮಾನವನ್ನು ಕಡಿಮೆಗೊಳಿಸಲು ಇಡೀ ವಿಶ್ವದ ಮೂಲೆ ಮೂಲೆಗಳಲ್ಲಿ ಮುಂತಾದ ರೀತಿಯದ ಕಸರತ್ತುಗಳು ಪ್ರತಿದಿನ ನಡೆಯುತ್ತಲೇ ಇದೆನಮ್ಮ ರೈತರ  ಪರದಾಟ  ಪ್ರತಿ ವರ್ಷದಿಂದ ವರ್ಷಕ್ಕೆ ಮಳೆ ರಾಯನ ಆಗಮನಕ್ಕಾಗಿ ದಿನೆ ದಿನೇ ಹೆಚ್ಚುತ್ತಲೇ ಇದೆ. ಅದರಲ್ಲಿಯೂ ಮುಖ್ಯವಾದದ್ದೆಂದರೆ ನಮ್ಮ ಉತ್ತರ ಕರ್ನಾಟಕದ ಉಷ್ಣಾಂಶ ವಿಷಯ ಮಾತಂತೂ ಹೇಳ ತೀರದು ! ನಾವು ಉತ್ತರ ಕರ್ನಾಟಕದ ಜನ ಸ್ವಲ್ಪ ಸ್ವಾರ್ಥಿಗಳಾಗಿ ಯೋಚನೆ ಮಾಡಿ ನೋಡಿದಾಗ , ನಮ್ಮ ಪ್ರದೇಶದ  ಬಹುತೇಕ ಭಾಗ ಅತೀ ತಾಪಮಾನದಿಂದ ಒಳಗೊಂಡ ಪ್ರದೆಶವಾಗಿದ್ದುದ್ದಾಗಿದೆ.

ಇದಕ್ಕೆಲ್ಲ ಕಾರಣಗಳನ್ನ ಹುಡುಕುತ್ತಾ ಹೋದಾಗ ನಮಗೆ ಸಿಕ್ಕಿದ್ದು ಅತೀ ಪ್ರಭಲವಾದ ಕಾರಣಬಳ್ಳಾರಿ ಜಾಲಿ “(ಪ್ರೋಸೋಪಿಸ್ ಜುಲಿಫ್ಲೋರ). ಒಂದು ಮರದ ಬಗ್ಗೆ ಸ್ವಲ್ಪ ಅರಿತುಕೊಳ್ಳೋಣ !! ಪ್ರೋಸೋಪಿಸ್ ಜುಲಿಫ್ಲೋರ ಎಂಬುದು ಒಂದು ಜಾತಿಯ ಮರ. ಈ ಮರಕ್ಕೆ ಹಲವಾರು ನಾಮಗಳುಂಟು , ದೇವನೊಬ್ಬ ನಾಮ ಹಲವು” ಎಂಬಂತೆ ಈ ಮರಕ್ಕೂ ಕೂಡ ಜಾತಿ ಒಂದು ನಾಮ ಹಲವು ! ಈ ಮರವನ್ನು ನಾವು ದಕ್ಷಿಣ ಭಾರತದ ಮುಂತಾದ ರಾಜ್ಯಗಳನ್ನು  ಹಲವರ ಭಾಗಗಳಲ್ಲಿ ಆವರಿಸಿಕೊಂಡಿದೆ. ಕರ್ನಾಟಕದ ಅರ್ಧದಷ್ಟು ಭಾಗ ,ತಮಿಳುನಾಡು ,ಆಂಧ್ರಪ್ರದೇಶ ,ಒರಿಸ್ಸಾ ಹಾಗೂ ಮುಂತಾದ ಕೆಲವು ರಾಜ್ಯಗಳಲ್ಲಿ ಕಂಡು ಬರುತ್ತದೆ.

ಮೇಲಾಗಿ ನಮ್ಮ ಉತ್ತರ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಕಂಡು ಬರುತ್ತದೆ. ಈ ಮರದ ವಿಶೇಷತೆ ಏನೆಂದರೆ ನೀರಿಲ್ಲದೆ ಬೆಳೆಯುವ ಗುಣಧರ್ಮ  ಹಾಗೂ ವಾತಾವರಣದ ತೆವವಾಂಶವನ್ನು ಬಳಸಿಕೊಂಡು ಬೆಳೆಯುವ ಒಂದು ವಿಶಿಷ್ಟ ಜಾತಿಯ ಮರ. ಅಮೇರಿಕಾದಂತಹ ದೇಶಗಳು ಕೆಲವು ವಿಷಕಾರಿ ಸಸ್ಯಗಳು ಮತ್ತು ಮರಗಳು ಅಮೇರಿಕಾದ ಯಾವುದೇ ಭಾಗದಲ್ಲಿ ಬೆಳೆಯದಂತೆ ನಿಷೇಧಿಶಿದೆ.ಈ ಸಸ್ಯಗಳು ವಾಸ್ತವವಾಗಿ ಈ ಸಮಾಜದಲ್ಲಿ ಜೀವನಾಧಾರ ಸವಾಲೆಸೆಯುವ ಸ್ವತಃ ಬೆಳೆಯಲು  ತೇವಾಂಶ ಹೀರಿಕೊಳ್ಳುವ ಒಂದು ಅಸಾಧಾರಣ ಸಾಮರ್ಥ್ಯ ಹೊಂದಿದೆ. ಈ ಸಸ್ಯ ನೀರಿಲ್ಲದೆ ಬೆಳೆಯುವ ಸಸ್ಯಗಳಲ್ಲಿ ಒಂದು ಪ್ರಭಲವಾದ  ಮತ್ತು ಬೆಳೆವನಿಗೆಯು ಅತ್ಯಂತ ತೀವ್ರವಾಗಿರುತ್ತದೆ.

ಇದರಿಂದ ಮಣ್ಣು ತೇವಾಂಶವನ್ನು ಕಳೆದುಕೊಂಡು ಹಾಗೂ ಸುತ್ತಮುತ್ತಲಿನ ವಾತಾವರಣದಲ್ಲಿ  ನೀರಿನ ತೇವಾಂಶ ಕಡಿಮೆಯಾಗಿ ಉಷ್ಣತೆ ಹೆಚ್ಚಿರುತ್ತದೆ. ಒಂದು ಮಧ್ಯಮ ಗಾತ್ರದ ಸಸ್ಯಗಳು ದಿನಕ್ಕೆ ಬೆಳೆಯಲು ಸುಮಾರು 3L ನೀರನ್ನು ಹೀರಿಕೊಳ್ಳುತ್ತದೆ ಮತ್ತು ಎಲೆಗಳು ಯಾವಾಗಲೂ ಬೇಸಿಗೆಯಲ್ಲಿ ಹಸಿರಾಗಿರುತ್ತದೆ . ಈ ಸಸ್ಯಗಳನ್ನು ತಿನ್ನುವ  ಜಾನುವಾರು ಬಂಜೆತನ ಮತ್ತು ಹಿಂದುಳಿದ ಬೆಳವಣಿಗೆ ಪ್ರದರ್ಶಿಸುತ್ತವೆ. ಅಲ್ಲದೆ ಅಂತರ್ಜಲ ವಿಷಕಾರಿಯಗುತ್ತದೆ. ಈ ಸಸ್ಯಗಳು ದಿನ ಮತ್ತು ರಾತ್ರಿ ಸಮಯದಲ್ಲಿ ಹೆಚ್ಚು ಇಂಗಾಲದ ಡೈಆಕ್ಸೈಡ್ ನೀಡುವದರಿಂದ ಮತ್ತು ಹಗಲಿನಲ್ಲಿ ಆಮ್ಲಜನಕದ ಅತ್ಯಂತ ಕಡಿಮೆ ಶೇಕಡಾವಾರು ನೀದುವದರಿಂದ ಪಕ್ಷಿಗಳ ಗೂಡುಕಟ್ಟಲು  ನಿರುಪಯೋಗಕಾರಿಯಗಿದೆ. ಸಸ್ಯದ ಯಾವುದೇ ಭಾಗಗಳನ್ನು (ಸೀಡ್ಸ್, ಎಲೆಗಳು, ಹೂವುಗಳು …) ಉಪಯೋಗಕರಿಯದ ವಸ್ತುವಾಗಿ ಕಾಣಲು ಅಸಾದ್ಯ.

ಇದರ ಬೆಂಕಿ ಕಾಡಿನಲ್ಲಿ ಬಳಸಿದಾಗ ಇದು ವಿಷಕಾರಿ ಅನಿಲಗಳು ಉತ್ಪಾದಿಸುತ್ತದೆ.ಈ ಮರದ ೧೦ ಕಟ್ಟಿಗೆಗಳನ್ನ್ನು ಸುಟ್ಟಾಗ ಬರುವ ವಿಷಕಾರಿ ಅನಿಲ ೧೪೦ ಸಿಗರೆಟ್ ಸೇದುವದರಿಂದ ನಿರ್ಮಾನವಗುವ ಧೂಮಪಾನದ ಸಮನಾಗಿರುತ್ತದೆ. ಹಿಂತಹ ವಿಷಕಾರ್ಯಾದ , ನಿರುಪಯೋಗಿ ,ನಿಸರ್ಗ ಹಾನಿಕಾರಿ  ಅತ್ತ್ಯಂತ ಪ್ರಮುಕವಾದುದೆಂದರೆ ನಮ್ಮ ರೈತನ ಬೆನ್ನಿಗೆ ಚ್ಹೊರಿ ಹಾಕುವಂತಹ ಅಪಾಯಕಾರಿ ಸಸ್ಯ ನಮ್ಮ ಸುತ್ತಮುತ್ತಲು ಅವರಿಸಿಕೊಂಡರೂ ನಾವೆಲ್ಲ ಸಹಿಸಿಕೊಂಡು ಕುಳಿತುಕೊಳ್ಳಬೇಕೆ ?. ಈಗಾಗಲೇ ಕೆಲವು ರಾಜ್ಯಗಳು ಈ ಸಸ್ಸ್ಯದ ಬಗ್ಗೆ ಗಂಭೀರವಾಗಿ ಪರಿಗಣಿಸಿ ಶಮನ ಮಾಡುವ ನಿರ್ಧಿಷ್ಟ ನಿರ್ಧಾರವನ್ನು ಮಾಡಿಕೊಂಡಿವೆ.

ನಮ್ಮ ಕರ್ನಾಟಕದ ಒಂದು ಅವಲೋಕನ ಮಾಡಿದಾಗ ಈ ಸಸ್ಸ್ಯ ಇರುವದು ಮಾತ್ರ ನಮ್ಮ ಉತ್ತರ ಕರ್ನಾಟಕದ ಬಹುತೇಕ ಭಾಗ ಅಥವಾ “ಉಷ್ಣ ಕರ್ನಾಟಕ ” ಅಂತಾ ಕರೆದರೂ ತಪ್ಪಾಗಲಾರದು. ಮಂಗಳೂರು ,ಶಿವಮೊಗ್ಗೆ , ಬೆಂಗಳೂರು , ಬೆಳಗಾವಿ , ಮೈಸೂರು  ದಂತಹ ಮುಂತಾದ ಪ್ರದೇಶಗಳಲ್ಲಿ ಈ ಜುಲಿಫ್ಲೋರ ಮರ ಇರುವಿಕೆ ಅತೀ ವಿರಳ ಅದ್ದರಿಂದು ಅಲ್ಲಿಯ ವಾತಾವರಣವನ್ನು ವಿಶ್ಲೇಷಣೆ ಮಾಡಿ ನೋಡಿದಾಗ ಎಲ್ಲ ಶ್ರೀ ಸಾಮಾನ್ಯರಿಗೂ ಈ ಮರದ ಪರಿಣಾಮ ಅರಿವಾಗದಿರಲಾರದು . ಕರ್ನಾಟಕದ ಕೆಲವು ಭಾಗಗಳಲ್ಲಿ ಈ ಸಸ್ಸ್ಯದ ಪರೀಚಯವೆ ಇಲ್ಲದಿರುದರಿಂದ ಅಲ್ಲಿನ ಜನ , ರೈತರು ಸ್ವಲ್ಪ ಒಳ್ಳೆಯ ವಾತಾವರಣ, ಕಾಲನುಕ್ರಮ ಮಳೆಯರಾಯನ ಆಗಮನದಿಂದ ನಿಟ್ಟುಸಿರು ಬಿಟ್ಟು ಜೀವನ ಸಾಗಿಸುತ್ತಿದ್ದಾರೆ. ಈಗ ನಾವು ನೀವೆಲ್ಲ ಉತ್ತರ ಕರ್ನಾಟಕದ ಎಲ್ಲ ಜನ ಒಂದಾಗಿ ಈ ವಿಷಯವನ್ನು ಗಂಭಿರವಾಗಿ ಪರಿಗಣಿಸಬೇಕೆಂದು ನನ್ನ ಹಾಗೂ ಇನ್ನುಳಿದ ಯಾವುದೇ 

ರೈತ ಪ್ರೇಮಿ ಅಥವಾ ಪರಿಸರ ಪ್ರೇಮಿಗಳ ವತಿಯಿಂದ ಕಳಕಳಿಯವಾಗಿ ವಿನಂತಿಯನ್ನ ಹಂಬಲಿಸುತ್ತೇನೆ. ಇದಕ್ಕೆ ಸರಕಾರದ ಆಸರೆ ಅತ್ತ್ಯಂತ ಮುಕ್ಯವಾದ್ದದ್ದು. ಕೆಲವೇ ದಿನಗಳಲ್ಲಿ ನಾವು ಈ ಸಸ್ಸ್ಯದ ವಿನಾಶದ ಅಭಿಯಾನವನ್ನು ಹಮ್ಮಿಕೊಲ್ಲಲಿದ್ದೇವೆ.

ಈ ಅಭಿಯಾನದ ಉದ್ದೇಶ ಒಂದೇ “ಉಷ್ಣ ಕರ್ನಾಟಕ” ವನ್ನು ಸಂಮ್ರುದ್ದಿಯ “ಉತ್ತ(ಮ)ರ ಕರ್ನಾಟಕ” ವಾಗಿ ಮರ್ಪಾಡಿಸುವದು. ಈ ಒಂದು ಲೇಖನಿಯ ಮೂಲಕ ಸಾರುವದೆನೆಂದರೆ ನಮ್ಮ ಎಲ್ಲ ಕರ್ನಾಟಕದ ಪ್ರತಿಯೊಬ್ಬ ನಾಗರಿಕರಿಗೂ  ಬಳ್ಳಾರಿ ಜ್ಯಾಲಿ ಎಂಬ ರೈತ ಹಾನಿಕಾರಿ ಮರದ ಬಗ್ಗೆ ಅರಿವನ್ನು ಮೂಡಿಸಿ , ಅದರ ವಿನಾಶದ ಯೋಜನೆಗಳಿಗೆ ಪ್ರತಿ ಸಂಘ ಸಂಸ್ಥೆಗಳು , ಸರಕಾರ , ಪರಿಸರ ಪ್ರೇಮಿಗಳು. ಮುಂತಾದ ರೀತಿಯಾದ ರೀತಿಯಲ್ಲಿ ಪಾಲ್ಗೊಂಡು  ಸಮೃದ್ಧ ಹಾಗು ಸಂಪತ್ಭರಿತ ಕರ್ನಾಟಕವನ್ನಾಗಿ ಮಾಡಲು ಫನತೋದಬೇಕಾಗಿ ವಿನಯಪೂರ್ವಕ ಕೋರಿಕೆ.

ಅಮೇರಿಕಾದಲ್ಲಿ ಕೆಲವಂದು ಮರಗಳ ಬೆಳವಣಿಗೆಗೆ ತಡೆಯಾಜ್ಞೆಯನ್ನ ಹೇರಲಾಗಿದೆ ಆ ಮರಗಳ ಸಾಲಿನಲ್ಲಿ  ನಮ್ಮ ಬಳ್ಳಾರಿ ಜ್ಯಾಲಿ ಕೂಡ ಒಂದು (ಜುಲಿಫ್ಲೋರ), ಹೀಗೆ ಮುಂತಾದ ದೇಶಗಳಲ್ಲಿ ಈ ಮರದ ತಡೆಗೆ ಪ್ರಯತ್ನ ಸದಾ ನಡೆದಿದೆ. ಆಫ್ರಿಕ , ಯೂರೊಪಿನ ಕೆಲವು ರಾಷ್ಟ್ರಗಳಲ್ಲಿ ಇದಕ್ಕೆ ತಡೆಯಾಜ್ಞೆ ಹೇರಲಾಗಿದೆ. ಭಾರತದ ಈಗಾಗಲೇ ಕೆಲವು ರಾಜ್ಯಗಳಲ್ಲಿ ಸರಕಾರದ ಜುಲಿಫ್ಲೋರ ಸಸ್ಸ್ಯದ ವಿನಾಶಕ್ಕಾಗಿ ಆದೇಶ ಹೊರಡಿಸಲಾಗಿದೆ. ತಮಿಳುನಾಡಿನ ಮದುರೈ ಉಚ್ಚ ನ್ಯಾಯಾಲಯವು 2013 ರಲ್ಲಿ  ನಗರದ ಯಾವುದೇ ಖಾಸಗಿ ಪ್ರಧೆಶಗಳಲ್ಲಿ ಜುಲಿಫ್ಲೋರ ಮರದ ಬೆಳವಣಿಗೆಗೆ ತಡೆಯಾಜ್ಞೆಯನ್ನು ಹೊರಡಿಸಲಾಗಿದೆ ಹಾಗೂ ತಮಿಳುನಾಡಿನ ಮುಂತಾದ ಪ್ರದೇಶಗಳಲ್ಲಿ “Juliflora Tree Abolishnment Moment” ಎಂಬ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿ ನಿರ್ಧರಿಸಲಾಗಿದೆ . ಇದಕ್ಕೆ ಕೆಲವು NGO’s, ಸಂಘ ಸಂಸ್ಥೆಗಳು, ಪರಿಸರ ಪ್ರೇಮಿಗಳು , ಸರಕಾರ ಮುಂತಾದ ರೀತಿಯಲ್ಲಿ ಕೈಜೋಡಿಸಿ 2020  ಹೊತ್ತಿಗೆ ಜುಲಿಫ್ಲೋರ ಮುಕ್ತ ರಾಜ್ಯವನ್ನಾಗಿ ಮಾಡಲು ವಿವಧ ರೀತಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ .

 

By:

ವೀರೇಶ್  ಬಿರಾದಾರ

ವಿಜಯಪುರ .

https://www.facebook.com/veeresh.biradar.18  

About the author

ಕನ್ನಡ ಟುಡೆ

Leave a Comment