ದೇಶ ವಿದೇಶ

ಉತ್ತರ ಪ್ರದೇಶದ ಸೋಲಾರ್ ಪವರ್ ಪ್ಲಾಂಟ್ ಉದ್ಘಾಟನೆ ಮಾಡಿದರು ಮೋದಿ ಮತ್ತು ಮ್ಯಾಕ್ರನ್

ಉತ್ತರಪ್ರದೇಶ: ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಪ್ರವಾಸದಲ್ಲಿರುವ ಫ್ರೇಚ್ ಅಧ್ಯಕ್ಷ ಇಮ್ಯಾನುಲ್ ಮ್ಯಾಕ್ರನ್ ಅವರು ಇಂದು ಸೋಮವಾರ ಉತ್ತರ ಪ್ರದೇಶದ  ಅತೀ ದೊಡ್ಡ ಸೌರ ವಿದ್ಯುತ್ ಉತ್ಪಾದನಾ ಘಟಕವನ್ನು ಮಿರ್ಚಾಪುರ ಜಿಲ್ಲೆಯ ಛಾನ್ ವೀ ಬ್ಲಾಕ್ ನಲ್ಲಿ ಉದ್ಘಾಟಿಸಿದರು.

ಪ್ರಧಾನಿ ಮೋದಿ ಮತ್ತು ಉ.ಪ್ರದೇಶದ ರಾಜ್ಯಪಾಲ ರಾಮನಾಯ್ಕ ಮತ್ತು ಮುಖ್ಯಮಂತ್ರಿ ಯೋಗಿ ನಾಥ್ ಅವರು ಫ್ರೆಂಚ್ ಅಧ್ಯಕ್ಷ ಮತ್ತು ಅವರ ಪತ್ನಿ ಬ್ರಿಗೆಟ್ ಅವರನ್ನು  ಏರಸ್ಟ್ರಿಪ್ ನಲ್ಲಿ ಸ್ವಾಗತಿಸಿ ಬರಮಾಡಿಕೊಂಡರು.

ಪ್ರಧನಿ ಮೋದಿ ಮತ್ತು ಮ್ಯಾಕ್ರನ್ ಅವರು ಬಟನ್ ಒತ್ತುವ ಮೂಲಕ ಸೋಲಾರ್ ಪ್ಯಾನಲ್ ಗಳನ್ನು ಕ್ರಿಯಾಶೀಲ್ ಗೊಳಿಸಿ 75 ಮೆಗಾ  ವ್ಯಾಟ್ ಸಾಮರ್ಥ್ಯದ ಈ ಘಟಕವನ್ನು ಲೋಕಾರ್ಪಣೆ ಮಾಡಿದರು.

About the author

ಕನ್ನಡ ಟುಡೆ

Leave a Comment