ರಾಜಕೀಯ

ಉತ್ತರ ಪ್ರದೇಶವನ್ನು ಗೆಲ್ಲಿಸಿದ್ದು ಒಬ್ಬ ಚಾಣಾಕ್ಯ! ಷಾ! ನಾ!??

ನವದೆಹಲಿ: ಮೋದಿ ಘರ್ಜನೆಗೆ ಉತ್ತರ ಪ್ರದೇಶ ನಲುಗಿ ಹೋಗಿದೆ. ಕಮಲದ ಅಬ್ಬರಕ್ಕೆ ಮದವೇರಿದ ಮದ್ದಾನೆಯೇ ನೆಲಕ್ಕುರುಳಿದೆ. ಅಖಿಲೇಶ್​ ಯಾದವ್​ ಸೈಕಲ್​ ಕೂಡ ಪಂಕ್ಚರ್​ ಆಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿಯ ಕೈ ಬಿಟ್ಟಿದ್ದ ಜನತೆ, ಉತ್ತರ ಪ್ರದೇಶದಲ್ಲೂ ರಾಹುಲ್ ಕೈ ಹಿಡೀಲಿಲ್ಲ. ಛಿದ್ರಗೊಂಡ ಉತ್ತರ ಪ್ರದೇಶದಲ್ಲಿ ಭದ್ರವಾಗಿ ಮತ್ತೊಮ್ಮೆ ಅಡಿಪಾಯ ಹಾಕಿದೆ ಬಿಜೆಪಿ. ಅದೂ 16 ವರ್ಷದ ಬಳಿಕ..

ಉತ್ತರ ಪ್ರದೇಶ  ದೇಶದ ಅತಿ ದೊಡ್ಡ ರಾಜ್ಯ.ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳಿರೋದು ಇಲ್ಲೇ. 403 ಕ್ಷೇತ್ರಗಳನ್ನು ಹೊಂದಿದ ಯುಪಿನಲ್ಲಿ ರಾಜಕೀಯ ದಂಗಲ್​ ಶುರುವಾಗಿತ್ತು. ಗಜಪಡೆಯನ್ನ ಕಟ್ಕೊಂಡು ಮಾಯಾವತಿ ಅಖಾಡಕ್ಕೆ ಇಳಿದಿದ್ದರು. ತಂದೆ ಜೊತೆ ಜಗಳವಾಡಿ ಪಕ್ಷದಲ್ಲಿ ಬಿರುಕು ಮೂಡಿಸಿಕೊಂಡಿದ್ದ ಅಖಿಲೇಶ್​ ಯಾದವ್​, ಮುರಿದ ಸೈಕಲ್ ಹತ್ತಿ ರೇಸ್​ನಲ್ಲಿ ನಿಂತ್ಕೊಂಡ್ರು. ರಾಹುಲ್​ ಗಾಂಧಿ ಅಖಿಲೇಶ್​ ಜೊತೆ ಕೈ ಜೋಡಿಸಿ, ಸೈಕಲ್​​​ನ ಹಿಂಬದಿಯ ಸೀಟ್​ನಲ್ಲಿ ಕೂತ್ಕೊಂಡ್ರು. ಆದರೆ ರಣರಂಗದಲ್ಲಿ ಅಂತಿಮವಾಗಿ ಗೆದ್ದಿದ್ದು ಕಮಲ.

ಮೋದಿ ಅಬ್ಬರದ ನಡುವೇ ಅಖಿಲೇಶ್​ ಯಾದವ್​ ಸೈಕಲ್​ ಪಂಕ್ಚರ್ ಆಗಿತ್ತು. ಮಾಯಾವತಿ ಆನೆನೂ ನೆಲಕ್ಕಚ್ಚಿತ್ತು. ಯುಪಿ ಹಣೆಬರವೇ ಬದಲಾಗಿತ್ತು. ಕಮಲ ಅರಳಿ ನಿಂತಿತ್ತು.

ಎಲ್ಲ ಪಕ್ಷಗಳಲ್ಲೂ ಶುರುವಾಗಿತ್ತು ರಾಲಿಗಳ ಸವಾರಿ

ಉತ್ತರ ಪ್ರದೇಶದಲ್ಲಿ, ಅಧಿಕಾರ ಹಿಡಿಯಬೇಕು ಅಂತ ಮಾಯಾವತಿ ನಿರ್ಧರಿಸಿದ್ದರು. ಅದಕ್ಕಾಗಿ ಆನೆಯನ್ನ ಬಲಗೊಳಿಸಲು ಪ್ರತಿ ದಿನ ಎರಡು ಮೂರು ರಾಲಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಅದರಂತೆ ಮಾಯಾವತಿ ಚುನಾವಣೆ ಟೈಮಲ್ಲಿ ಮಾಡಿದ್ದು  50 ರಾಲಿಗಳನ್ನು.

ಇನ್ನು ಅಖಿಲೇಶ್​ ಯಾದವ್​​  ಏನೂ ಸುಮ್ಮನೇ ಕೂರಲಿಲ್ಲ. ಮತ್ತೆ ಅಧಿಕಾರಕ್ಕೆ ಬರಬೇಕು ಅಂತ ​ ಪ್ಲಾನ್ ಮಾಡಿದ್ದ ಅಖಿಲೇಶ್ ಯಾದವ್​, 205 ರಾಲಿಗಳನ್ನ ಮಾಡಿ, ಜನರ ಮನವೊಲಿಸಿದ್ದರು. ರಾಹುಲ್ ಗಾಂಧಿನೂ ಸಮಾಜವಾದಿ ಪಕ್ಷದ ಬೆನ್ನಿಗೆ ನಿಂತಿದ್ದರು. ಆದರೆ ಇವರೆಲ್ಲರಿಗಿಂತ ಹೆಚ್ಚು ರಾಲಿಗಳು, ಸಮಾವೇಶಗಳನ್ನ ಮಾಡಿದ್ದು ಬಿಜೆಪಿ. ಕೇಸರಿ ಪಕ್ಷ ಬಳಸಿದ್ದ ಟೆಕ್ನಿಕ್​ ಮಾತ್ರ ತುಂಬಾನೇ ಭಿನ್ನವಾಗಿತ್ತು.

350ಕ್ಕೂ ಹೆಚ್ಚು ರಾಲಿಗಳನ್ನು ಮಾಡಿತ್ತು ಬಿಜೆಪಿ

ಬಿಜೆಪಿ ಒಂದು ಟೀಂ ಮಾಡ್ಕೊಂಡು ರಾಲಿಗಳನ್ನು ಮಾಡಿತ್ತು. ಅಮಿತ್ ಷಾ ಒಂದು ಕಡೆ ರಾಲಿ ಮಾಡಿದ್ರೆ, ರಾಜನಾಥ್​ ಸಿಂಗ್​ ಮತ್ತು ಮೋದಿ ಮತ್ತೊಂದು ಕಡೆ ಮೋಡಿ ಮಾಡುತ್ತಿದ್ದರು. ಯುಪಿನಲ್ಲಿ  ಕಮಲ ಅರಳಿಸೋದಕ್ಕೆ ಅಮಿತ್ ಷಾ ಸುಮಾರು 153 ರಾಲಿಗಳನ್ನ ಮಾಡಿದ್ದರು. ಇನ್ನು ರಾಜನಾಥ್​ ಸಿಂಗ್​ ಕೂಡ 150ಕ್ಕೂ ಹೆಚ್ಚು ರಾಲಿಗಳಲ್ಲಿ  ಭಾಗವಹಿಸಿ, ಬಿಜೆಪಿ ಅಲೆಯನ್ನು ಹೆಚ್ಚಿಸಿದ್ದರು​. ಮೋದಿ ಕೂಡ ಯುಪಿ ಅಖಾಡಕ್ಕೆ ಧುಮುಕಿದ್ದು, ಕಾಶಿವಿಶ್ವನಾಥನ ಅನುಗ್ರಹ, ಕಾಲಭೈರವನ ಆಶೀರ್ವಾದದ ಜೊತೆಗೆ ಸುಮಾರು 30 ರಾಲಿಗಳನ್ನು ಮಾಡಿ, ಜನರನ್ನು ಬಿಜೆಪಿ ಕಡೆ ಸೆಳೆದಿದ್ರು. ಹೀಗೆ ಬಿಜೆಪಿ ಮಾಡಿದ್ದ ಮಾಸ್ಟರ್​ ಪ್ಲಾನ್​ನಿಂದ, ಈಗ ಯುಪಿನಲ್ಲಿ ಅರಳಿ ನಿಂತಿದೆ ಕಮಲ.

ಉತ್ತರ ಪ್ರದೇಶದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂದಿದ್ದು 37 ವರ್ಷಗಳ ಹಿಂದೆ. 2000ದಲ್ಲಿ ಇತರೇ ಪಕ್ಷದ ಸಹಾಯ ಪಡೆದು ಅಧಿಕಾರಕ್ಕೆ ಬಂದಿತ್ತು . ಆದರೆ 16 ವರ್ಷಗಳ ನಂತರ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. 37 ವರ್ಷಗಳ ಬಳಿಕ ಇದೇ ಮೊಟ್ಟ ಮೊದಲ ಬಾರಿಗೆ ಸ್ಪಷ್ಟ ಬಹುಮತದೊಂದಿಗೆ ಯುಪಿನಲ್ಲಿ ಸರ್ಕಾರ ರಚಿಸಲಿದೆ  ಬಿಜೆಪಿ.

ಗೆಲುವಿಗೆ ಮೋದಿ, ಷಾ ಕಾರಣರಲ್ಲ, ಎಲ್ಲರ ಹಿಂದಿದ್ದಾರೆ ಒಬ್ಬ ಅನಾಮಿಕ

ಬಿಜೆಪಿಯ ಈ ಗೆಲುವಿಗೆ ಮೋದಿನೇ ಕಾರಣ. ಅಮಿತ್ ಷಾ ಪ್ಲಾನ್​ಗಳೇ ಕಾರಣ ಅಂತ ಮಾತಾಡಿಕೊಳ್ತಿದ್ದಾರೆ. ಆದರೆ ಇಲ್ಲೇ ಇರೋದು ನೋಡಿ ಕಹಾನಿಮೆ ಟ್ವಿಸ್ಟ್. ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು  ಮೋದಿಯಿಂದ ಅಲ್ಲ. ಯುಪಿನಲ್ಲಿ ಮೋದಿ ಅಲೆ ಇದ್ದಿರಬಹುದು. ಆದರೆ ಗೆಲುವಿನ ರುವಾರಿ ಬೇರೇನೇ ಇದ್ದಾರೆ. ಇಡೀ ದೇಶದಲ್ಲಿ ಕಮಲ ಅರಳಿಸಿದ್ದ ಚಾಣಕ್ಯನೇ ಯುಪಿ ಭವಿಷ್ಯ ಬುಡಮೇಲು ಮಾಡಿದ್ರು ಅನ್ನೋದು ನಿಜವಲ್ಲ. ಯಾಕಂದರೆ ಈ ಚುನಾವಣೆಯಲ್ಲಿ ಮೋದಿ ಬರೀ ಫೇಸ್​ ಆಗಿದ್ರು. ಅಮಿತ್ ಶಾ ಸಂಘಟಕರಾಗಿ ಕೆಲಸ ಮಾಡಿದ್ದರು. ಆದರೆ ಯುಪಿಯಲ್ಲಿ ಬಿಜೆಪಿಯನ್ನು ಗೆಲ್ಲಿಸೋದಕ್ಕೆ ಪ್ಲಾನ್ ರೂಪಿಸಿದ್ದು ಓರ್ವ ಅನಾಮಿಕ ವ್ಯಕ್ತಿ.

ಅನಾಮಿಕ ವ್ಯಕ್ತಿ ಯಾರು ಗೊತ್ತಾ?  

ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಭರ್ಜರಿಯಾಗಿ ಗೆಲ್ಲಿಸಿದ ರಣಧೀರ. ಬಿಜೆಪಿ ಉತ್ತರ ಪ್ರದೇಶದಲ್ಲಿ ಈ ಮಟ್ಟದಲ್ಲಿ ಗೆಲುವು ಸಾಧಿಸಿದ್ದು, ಅಖಿಲೇಶ್​ ಯಾದವ್​ ಮತ್ತು ರಾಹುಲ್ ಗಾಂಧಿ ಒಟ್ಟಾಗಿ ಮಾಡಿದ್ದ ಪ್ಲಾನ್​ಗಳನ್ನು ಉಲ್ಟಾ ಮಾಡಿದ್ದು, ಚುನಾವಣೆಯ ಫಲಿತಾಂಶವನ್ನೇ ಬುಡಮೇಲು ಮಾಡಿದ್ದು ಇದೇ ಮಾಸ್ಟರ್​ ಮೈಂಡ್​. ಅಂದ್ಹಾಗೆ ಈತನಹೆಸರು ಏನು ಗೊತ್ತಾ? ಸುನೀಲ್ಬನ್ಸಾಲ್​.

ಉತ್ತರ ಪ್ರದೇಶದಲ್ಲಿ ಕಮಲ ಅರಳಿಸುವ ಬಹುದೊಡ್ಡ  ಜವಾಬ್ದಾರಿಯನ್ನು ಸುನೀಲ್​ ಬನ್ಸಾಲ್​ಗೆ ನೀಡಲಾಗಿತ್ತು. ಅದೂ 2 ವರೆ ವರ್ಷಗಳ ಹಿಂದೆ. ಆಗಿಂದಲೇ ಪ್ಲಾನ್​ ಮಾಡಿದ್ದ ಸುನೀಲ್​ ಬನ್ಸಾಲ್​ ದೀರ್ಘಾವಧಿಯ ಪ್ಲಾನ್​ ರೂಪಿಸ್ತಾರೆ. ಆ ಪ್ಲಾನ್​ ಹೇಗಿತ್ತು ಅಂದ್ರೆ, ಯಾವುದೇ ಕಾರಣಕ್ಕೂ ಮಿಷನ್​ 250 ಮಿಸ್ಸಾಗಬಾರದು ಅಂತ ನಿರ್ಧರಿಸಿದ್ರು. ಆದ್ರೆ ಸುನೀಲ್​ ಬನ್ಸಾಲ್​ ಮಾಡಿದ್ದ ಪ್ಲಾನ್​ಗೆ, ಬರೀ 250 ಸೀಟ್​ ಅಲ್ಲ.. 300ಕ್ಕೂ ಹೆಚ್ಚು ಸೀಟ್​ಗಳನ್ನ ಬಾಚಿಕೊಂಡಿದೆ ಬಿಜೆಪಿ. ಇಷ್ಟೋಂದು ಭರ್ಜರಿ ಗೆಲುವನ್ನು ತಂದುಕೊಟ್ಟು, ಎದುರಾಳಿಗಳನ್ನು ಧೂಳೀಪಟ ಮಾಡಿದ್ದು ಮೋದಿ ಅಲ್ಲ.. ಅಮಿತ್ ಶಾನೂ ಅಲ್ಲ.. ಇದೇ ಸನೀಲ್​ ಬನ್ಸಾಲ್​..

ಉತ್ತರ ಪ್ರದೇಶದಲ್ಲಿ ಮುಸ್ಲೀಮರ ಓಟುಗಳೂ ಪ್ರಮುಖ ಪಾತ್ರವಹಿಸುತ್ತವೆ. ಹಿಂದುಳಿದ ವರ್ಗಗಳ ಮತಗಳು, ಚನಾವಣಾ ಫಲಿತಾಂಶವನ್ನೇ ಬುಡಮೇಲು ಮಾಡುತ್ತವೆ. ಅದರಲ್ಲೂ ಮೋದಿ ಮಾಡಿದ್ದ ನೋಟ್​ ಬ್ಯಾನ್​ ಎಫೆಕ್ಟ್​ನಿಂದ, ಉತ್ತರ ಪ್ರದೇಶದಲ್ಲಿ ಮೋದಿಗೆ ಹಿನ್ನಡೆ ಅಗಬಹುದು ಅಂತ ಕೆಲವರು ಲೆಕ್ಕಾಚಾರ ಹಾಕಿದ್ರು. ಆದ್ರೆ ಅವರ ಲೆಕ್ಕಾಚಾರವೆಲ್ಲಾ ಬುಡಮೇಲಾಗಿತ್ತು. ಇಡೀ ದೇಶವೇ ಊಹಿಸಲಾಗದ ಗೆಲುವು ಬಿಜೆಪಿಗೆ ದಕ್ಕಿತ್ತು. ಆ ಗೆಲುವಿನ ಹಿಂದಿರೋ ನಿಜವಾದ ವ್ಯಕ್ತಿ ಸುನೀಲ್​ ಬನ್ಸಾಲ್​..

ಕಳೆದ ಲೋಕಸಭಾ ಚುನಾವಣೆ ಟೈಮಲ್ಲಿ, ಮೋದಿ ಹಿಂದೆ ಅಮಿತ್ ಷಾ ಅನ್ನೋ ಚಾಣಕ್ಯನಿದ್ದ. ಆ ಚಾಣಕ್ಯನ ಟೀಂ ಲೀಡರ್ ಆಗಿದ್ದು, ಪ್ರಶಾಂತ್​ ಕಿಶೋರ್​ ಅಂತ.. ಆದ್ರೆ ಆ ಪ್ರಶಾಂತ್​ ಕಿಶೋರ್​ ಈಗ ಮೋದಿ ಜೊತೆಗಿಲ್ಲ.. ಹೀಗಿರುವಾಗ ಬಿಜೆಪಿಯನ್ನು ಯುಪಿನಲ್ಲಿ ಹೇಗಪ್ಪಾ ಗೆಲ್ಲಿಸೋದು ಅನ್ನೋ ಆಲೋಚನೆ ಸುರುವಾಗಿತ್ತು. ಆಗ ಕಾಣಿಸಿದ್ದೇ ಸುನೀಲ್​ ಬನ್ಸಾಲ್​..

ಕಣ್ಣಿಗೆ ಗ್ಲಾಸ್​ ಹಾಕೊಂಡಿದ್ದಾನಲ್ಲಾ. ಈತನ ಹೆಸರು ಪ್ರಶಾಂತ್​ ಕಿಶೋರ್​ ಅಂತ.. ಈತ ಸಾಮಾನ್ಯವಾದ ವ್ಯಕ್ತಿಯಲ್ಲ.. ಈತನನ್ನ ಎಲ್ಲರೂ ಪೊಲಿಟಿಕಲ್ ಗುರು ಅಂತಲೇ ಕರೀತಾರೆ. ಯಾಕಂದ್ರೆ, ಈತನ ಲೆಕ್ಕಾಚಾರ ರಾಜಕೀಯದಲ್ಲಿ ತುಂಬಾನೇ ಇಂಪಾರ್ಟೆಂಟ್​.. ಕಳೆದ ಲೋಕಸಭಾ ಚುನಾವಣೆಯಲ್ಲಿ, ಮೋದಿ ಟೀಂನಲ್ಲಿದ್ದ ಪ್ರಶಾಂತ್​ ಕಿಶೋರ್​, ಕಾಂಗ್ರೆಸ್​ ಅನ್ನ ಧೂಳೀಪಟ ಮಾಡಿ, ಕೇಂದ್ರದಲ್ಲಿ ಕಮಲ ಅರಳಿಸಿದ್ರು.. ಮೋದಿಯನ್ನ ಪಿಎಂ ಮಾಡಿದ್ದು ಈತನೇ..

ಮೋದಿ ಟೀಂನಲ್ಲಿ ಇದ್ದುಕೊಂಡು, ಅತ್ಯಾಧುನಿಕ ಚುನಾವಣಾ ತಂತ್ರಗಳನ್ನು ಬಳಸಿಕೊಂಡು ಮೋದಿಯನ್ನು ಗೆಲ್ಲಿಸಿ ಪಿಎಂ ಮಾಡಿದ್ರು ಪ್ರಶಾಂತ್ ಕಿಶೋರ್​. ಆದ್ರೆ ಗೆದ್ದ ನಂತರ ಏನಾಯ್ತೋ ಏನೋ, ಮೋದಿ ಟೀಂ ಬಿಟ್ಟು ಹೊರ ಬಂದಿದ್ರು ಪ್ರಶಾಂತ್​. ಆಗ ಈ ಪ್ರಶಾಂತ್​ರನ್ನು ಬರಸೆಳೇದು ಅಪ್ಪಿಕೊಂಡಿದ್ದು ಬಿಹಾರದ ರಾಜಕಾರಣಿಗಳು.

ಪ್ರಶಾಂತ್ ಕಿಶೋರ್​ ಬಿಹಾರಕ್ಕೆ ಕಾಲಿಟ್ಟಿದ್ದೇ ತಡ, ನಿತೀಶ್’​ ಕುಮಾರ್​ ಮತ್ತು ಲಾಲೂ ಪ್ರಸಾದ್​ ಯಾದವ್​​ಗೆ ಬಲ ಬಂದಂತಾಗಿತ್ತು. ಕಳೆದ ಬಿಹಾರ ಚುನಾವಣೆಯಲ್ಲಿ ಬಿಜೆಪಿಯನ್ನು ನೆಲಕ್ಕುರುಳಿಸಿ, ನಿತೀಶ್​​ಗೆ ಗೆಲುವು ತಂದು ಕೊಟ್ಟಿದ್ರು ಪ್ರಶಾಂತ್​​.

 

ಪ್ರಶಾಂತ್ ಕಿಶೋರ್​ ಮೋದಿ ಕೈ ಬಿಟ್ಟ ನಂತರ, ಗೆಲುವಿನ ಜೊತೆ ಸೋಲೂ ಕಾಣಿಸಿಕೊಂಡಿದ್ವು. ಇದರ ನಡುವಲ್ಲೇ ಪಂಚರಾಜ್ಯಗಳ ಚುನಾವಣೆ ಕಣ್ಮುಂದೆ ಬಂದಿತ್ತು. ಅದರಲ್ಲೂ ಉತ್ತರ ಪ್ರದೇಶ ಮೋದಿಗೆ ಪ್ರತಿಷ್ಠೆಯ ಸಂಕೇತವಾಗಿತ್ತು. ಇಲ್ಲಿ ಹೇಗೆ  ಕಮಲ ಅರಳಿಸೋದು ಅಂತ ಆಲೋಚನೆ ಮಾಡ್ತಿದ್ದಾಗಲೇ, ಮೋದಿ ಮತ್ತು ಅಮಿತ್ ಶಾ ಕಣ್ಣಿಗೆ ಬಿದ್ದಿದ್ರು ಸುನೀಲ್ ಬನ್ಸಾಲ್​.

ಸುನೀಲ್​ ಬನ್ಸಾಲ್​ ಒಬ್ಬ ಬರಹಗಾರ. ಅದ್ಭುತ ಸ್ಕ್ರಿಪ್ಟ್​ ರೈಟರ್​. ಅನೇಕ ಪುಸ್ತಕಗಳನ್ನೂ ಬರೆದಿದ್ದಾರೆ. ರಾಜಸ್ಥಾನ ಮೂಲದ ಸುನೀಲ್​ ಬನ್ಸಾಲ್ ಎಬಿವಿಪಿಯಲ್ಲಿ ಗುರ್ತಿಸಿಕೊಂಡಿದ್ದರು. ಆರ್​ಎಸ್​​ಎಸ್​ನಲ್ಲೂ ಸಕ್ರಿಯರಾಗಿದ್ರು. ನಂಥರ ಬಿಜೆಪಿಗೆ ಬಂದ್ರು. ಇವ್ರ ಬರಹಗಳು, ಮತ್ತು ಎಬಿವಿಪಿನಲ್ಲಿ ಮಾಡಿದ ಹೋರಾಟಗಳನ್ನು ಕಂಡ ಮೋದಿ ಮತ್ತು ಅಮಿತ್ ಶಾ, ​ ಉತ್ತರ ಪ್ರದೇಶದಲ್ಲಿ ಕಮಲ ಅರಳಿಸುವ ಜವಾಬ್ದಾರಿಯನ್ನು ಸುನೀಲ್​ ಬನ್ಸಾಲ್​ಗೆ ನೀಡಿದ್ರು. ಅದೂ 2014 ರಲ್ಲಿ.. ಆಗಿಂದಲೇ ಪ್ಲಾನ್​ ಮಾಡಿದ್ದ ಸುನೀಲ್​ ಬನ್ಸಾಲ್​ ದೀರ್ಘಾವಧಿಯ ಬ್ಲೂಪ್ರಿಂಟ್​​ ರೆಡಿ ಮಾಡಿದ್ರು. ಆ ಬ್ಲೂಪ್ರಿಂಟ್​​​ ಹೇಗಿತ್ತು ಅಂದ್ರೆ, ಉತ್ತರ ಪ್ರದೇಶದಲ್ಲಿ ಮಿಷನ್​250 ಟಾರ್ಗೆಟ್ ಆಗಿತ್ತು. ಆದ್ರೆ ಸುನೀಲ್​ ಬನ್ಸಾಲ್​ ತಂತ್ರಗಾರಿಕೆ ಎಷ್ಟು ಪರಿಣಾಮಕಾರಿಯಾಗಿತ್ತು ಅಂದ್ರೆ, ಬರೀ 250 ಸೀಟ್​ ಅಲ್ಲ.. 300ಕ್ಕೂ ಹೆಚ್ಚು ಸೀಟ್​ಗಳನ್ನ ಬಾಚಿಕೊಂಡಿದೆ ಬಿಜೆಪಿ. ಇಷ್ಟೋಂದು ಭರ್ಜರಿ ಗೆಲುವನ್ನು ತಂದುಕೊಟ್ಟು, ಎದುರಾಳಿಗಳನ್ನು ಛೂಳೀಪಟ ಮಾಡಿದ್ದು ಮೋದಿ ಅಲ್ಲ.. ಅಮಿತ್ ಶಾನೂ ಅಲ್ಲ.. ಇದೇ ಸನೀಲ್​ ಬನ್ಸಾಲ್​..

About the author

ಕನ್ನಡ ಟುಡೆ

Leave a Comment