ರಾಜಕೀಯ

ಉಪ ಚುನಾವಣೆ : ದೋಸ್ತಿಗೆ ಜೈ ಎಂದ ಮತದಾರ

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ ಮೂರು ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗಳು  ಭರ್ಜರಿ ಗೆಲುವು ಸಾಧಿಸಿದ್ದಾರೆ.
ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ದಾಖಲೆ ರೀತಿಯಲ್ಲಿ 5. 15. 179  ಮತಗಳನ್ನು ಪಡೆಯುವ ಮೂಲಕ ಭರ್ಜರಿ ಜಯಬೇರಿ ಬಾರಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೆ. ಶಾಂತ ಸೋಲಿಗೆ ಶರಣಾಗಿದ್ದಾರೆ. ಮಂಡ್ಯದಲ್ಲಿ  ಜೆಡಿಎಸ್ – ಕಾಂಗ್ರೆಸ್ ಅಭ್ಯರ್ಥಿ ಎಲ್. ಆರ್. ಶಿವರಾಮೇಗೌಡ 4.70.139 ಮತಗಳನ್ನು ಪಡೆದು  ಭರ್ಜರಿ ಗೆಲುವು ಸಾಧಿಸಿದ್ದು,  ಬಿಜೆಪಿ ಅಭ್ಯರ್ಥಿ ಡಾ. ಸಿದ್ದರಾಮಯ್ಯ ಸೋಲಿಗೆ ಶರಣಾಗಿದ್ದಾರೆ.
ಮಲೆನಾಡು ಶಿವಮೊಗ್ಗದಲ್ಲಿ  ಬಿಜೆಪಿ ಅಭ್ಯರ್ಥಿ ಬಿ. ವೈ. ರಾಘವೇಂದ್ರ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರಿಗಿಂತ ಮುನ್ನಡೆ ಕಾಯ್ದುಕೊಂಡಿದ್ದು, ಫಲಿತಾಂಶ ಇನ್ನೂ ಪ್ರಕಟಗೊಂಡಿಲ್ಲ.
ರಾಮನಗರದಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ, 1.08. 604 ಮತಗಳನ್ನು ಪಡೆದು  ಭರ್ಜರಿ ಗೆಲುವು ಸಾಧಿಸಿದರೆ, ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೊನೆಗೆ ಕಾಂಗ್ರೆಸ್ ಸೇರಿದ ಎಲ್. ಚಂದ್ರಶೇಖರ್ 13 ಸಾವಿರದ 249 ಮತಗಳನ್ನು ಪಡೆದು ಸೋಲಿಗೆ ಶರಣಾಗಿದ್ದಾರೆ.

ಜಮಖಂಡಿ ವಿಧಾನಸಭಾ  ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮೇಗೌಡ 96.968 ಮತಗಳನ್ನು ಪಡೆದು ಜಯಬೇರಿ ಬಾರಿಸಿದ್ದಾರೆ.  ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣೀ ಸೋಲಿಗೆ ಶರಣಾಗಿದ್ದಾರೆ.  ತಮ್ಮ ತಂದೆಯ ಕೆಲಸ ಹಾಗೂ ಅನುಕಂಪದ ಹಿನ್ನೆಲೆಯಲ್ಲಿ ತಾವು ಗೆಲುವು ಸಾಧಿಸಿರುವುದಾಗಿ ಆನಂದ್ ನ್ಯಾಮೇಗೌಡ ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment