ದೇಶ ವಿದೇಶ

ಉಭಯ ರಾಷ್ಚ್ರಗಳ ನಡುವೆ ಪ್ರಕ್ಷುಬ್ದ ವಾತಾವರಣ: ಸಂಜೋತಾ ಎಕ್ಸ್ ಪ್ರೆಸ್ ರೈಲು ಸಂಚಾರ ರದ್ದು

ಲಾಹೋರ್: ಭಾರತ ಮತ್ತು ಪಾಕಿಸ್ತಾನ ನಡುವೆ ಪ್ರಕ್ಷುಬ್ದ ಪರಿಸ್ಥಿತಿ ಉಂಟಾಗಿದ್ದು, ಲಾಹೋರ್-ದೆಹಲಿ ನಡುವಿನ ಸಂಜೋತಾ ಎಕ್ಸ್ ಪ್ರೆಸ್ ರೈಲು ಪ್ರಯಾಣ ರದ್ದುಗೊಳಿಸಲಾಗಿದೆ.
ಇಂದು ಬೆಳಗ್ಗೆ 8ಗಂಟೆಗೆ ಸಂಜೋತಾ ಎಕ್ಸ್ ಪ್ರೆಸ್ ಲಾಹೋರ್ ರೈಲ್ವೆ ನಿಲ್ದಾಣದಿಂದ ಹೊರಡಬೇಕಿತ್ತು,  ಆದರೆ ಗಡಿಯಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿರುವುದರಿಂದ ಸಂಜೋತಾ ಎಕ್ಸ್ ಪ್ರೆಸ್ ಸಂಚಾರ ರದ್ದುಗೊಳಿಸಲಾಗಿದೆ. ಮುಂಜಾಗರೂಕತಾ ಕ್ರಮವಾಗಿ ರೈಲು ಸಂಚಾರ ರದ್ಧುಗೊಳಿಸಿದ್ದಾಗಿ ರೈಲ್ವೆ ಮ್ಯಾನೇಜರ್ ಜುಬೈರ್ ಶಫಿ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment