ರಾಜಕೀಯ

ಉಮೇಶ್ ಜಾಧವ್ ಪಕ್ಷ ತೊರೆದಿದ್ದರಲ್ಲಿ ಆಶ್ಚರ್ಯವೇನಿಲ್ಲ: ಪ್ರಿಯಾಂಕ್ ಖರ್ಗೆ

ಕಲಬುರಗಿ: ಸಂಸದ ಮಲ್ಲಿಕಾರ್ಜುನ ಖರ್ಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಅವರ ಪುತ್ರ ಪ್ರಿಯಾಂಕ್ ಖರ್ಗೆ ತಂದೆಯ ಗೆಲುವಿಗಾಗಿ ಶ್ರಮಿಸಲು ಚುನವಾಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇದೇ ವೇಳೆ  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಂದರ್ಶನ ನೀಡಿದ್ದಾರೆ.

ಉಮೇಶ್ ಜಾಧವ್ ನಿರ್ಧಾರದ ಬಗ್ಗೆ ನಿಮ್ಮ ಅನಿಸಿಕೆ ಏನು? ಉಮೇಶ್ ಜಾಧವ್ ರಾಜೀನಾಮೆ ನನಗೆ ಅಶ್ಚರ್ಯ ತಂದಿಲ್ಲ, ಕಳೆದ ಎರಡು ತಿಂಗಳಿಂದ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ, ಕಾಂಗ್ರೆಸ್ ನಾಯಕರು ಮತ್ತು ಮಾಧ್ಯಮದವರಿಗೂ ಅವರ ಸಂಪರ್ಕಕ್ಕೆ ಸಿಕ್ಕಿಲ್ಲ, ಜಾಧವ್ ಸಹೋದರ ವಕ್ತಾರರಾಗಿದ್ದಾರೆ, ನನ್ನ ತಂದೆಯ ವಿರುದ್ಧ ಉಮೇಶ್ ಜಾಧವ್ ಸ್ಪರ್ಧಿಸುವುದಿಲ್ಲ ಎಂದು ಹಲವು ಬಾರಿ ಹೇಳಿದ್ದರು. ಯಾರೂ ಬೇಕಾದರೂ ಚುನಾವಣೆಗೆ ಸ್ಪರ್ದಿಸಬಹುದು, ಅವರು ಸ್ಪರ್ಧಿಸಲು ಜನಾದೇಶಳ ನೊಡೋಣ, ಜನ ಯಾರಿಗೆ ಮತ ನೀಡುತ್ತಾರೆ ನೋಡೋಣ.

ಉಮೇಶ್ ಜಾಧವ್ ಕಣಕ್ಕಿಳಿಯುವುದರಿಂದ ಮಲ್ಲಿಕಾರ್ಜುನ ಖರ್ಗೆ ಗೆಲ್ಲಲು ಸಮಸ್ಯೆಯಾಗುತ್ತಾ? ಕೆಲವು ಜನ ಉಮೇಶ್ ಜಾಧವ್ ಅವರನ್ನು ಇಷ್ಟ ಪಡಬಹುದು, ಕಾಂಗ್ರೆಸ್ ಗೆ ದೊಡ್ಡ ಇತಿಹಾಸವಿದೆ, ನನ್ನ ತಂದೆ ಪಕ್ಷದ ಶಿಸ್ತಿನ ಸಿಪಾಯಿ,  ಹೀಗಾಗಿ ನನ್ನ ತಂದೆ ಗೆಲುವು ಖಚಿತ, ಕಲಬುರಗಿಯಲ್ಲಿ  ಬಿಜೆಪಿ ವೋಟ್ ಬ್ಯಾಂಕ್ ಇರಬಹುದು, ಆದರೆ ಕಾಂಗ್ರೆಸ್ ಗೆ ಬಲವಾದ ಬುನಾದಿ ಇದೆ.

ಮಲ್ಲಿಕಾರ್ಜುನ ಖರ್ಗೆ ಚುನಾವಣೆಯಲ್ಲಿ ಗೆಲ್ಲಲು ಸಹಾಯ ಮಾಡುವ ಅಂಶಗಳಾವುವು?
ನಮ್ಮ ತಂದೆಯ ಸಾಧನೆಗಳೇ ನಮಗೆ ಪ್ಲಸ್ ಪಾಯಿಂಟ್, ನನ್ನ ತಂದೆಯ ಉತ್ತಮ ಕೆಲಸಗಳನ್ನು ನೋಡಿ ಮತ ನೀಡುವಂತೆ  ನಾವು ಜನರಲ್ಲಿ ಮನವಿ ಮಾಡುತ್ತೇವೆ, ಸಂವಿಧಾನದ ಕಲಂ 371ಜೆ ಅನ್ವಯ ಹೈದರಾಬಾದ್-ಕರ್ನಾಟಕ ಪ್ರದೇಶ ತಿದ್ದುಪಡಿ ಜಾರಿಗೆ ತರುವಲ್ಲಿ ನನ್ನ ತಂದೆಯ ಪಾತ್ರವಿದೆ, ನನ್ನ ತಂದೆಯ ಅವಧಿಯಲ್ಲಿ ಹಲವು ನೀರಾವರಿ ಕೆಲಸಗಳು ಪೂರ್ಣಗೊಂಡಿದೆ, ಕಲಬುರಗಿಯಲ್ಲಿ ಸೆಂಟ್ರಲ್ ಯೂನಿವರ್ಸಿಟಿ ತರಲು ಖರ್ಗೆ ಪ್ರಯತ್ನ ಅಪಾರವಾದದ್ದು, ಹೀಗಾಗಿ ಮತದಾರರು ನಮ್ಮ ತಂದೆಯ ಕೆಲಸಗಳನ್ನು ನೋಡಿಮತದಾರರು ನನ್ನ ತಂದೆಗೆ ಮತ ಹಾಕುತ್ತಾರೆ.

About the author

ಕನ್ನಡ ಟುಡೆ

Leave a Comment