ಸಿನಿ ಸಮಾಚಾರ

ಉರಿ ಚಿತ್ರ ವೀಕ್ಷಿಸಿದ ಉಪರಾಷ್ಟ್ರಪತಿ, ಟ್ವೀಟ್‌ ಮೂಲಕ ಹೊಗಳಿದ ವೆಂಕಯ್ಯ ನಾಯ್ಡು

ಉರಿ ದಿ ಸರ್ಜಿಕಲ್ ಸ್ಟ್ರೈಕ್‌’ ಚಿತ್ರ ಯಶಸ್ಸಿನ ವೈಭವದಲ್ಲಿ ಮುನ್ನಡೆಯುತ್ತಿದೆ. ವಿಕ್ಕಿ ಕೌಶಲ್ ಹಾಗೂ ಯಾಮಿ ಗೌತಮ್ ಅಭಿನಯದ ಚಿತ್ರಕ್ಕೆ ದೇಶದ ಮೂಲೆ ಮೂಲೆಗಳಿಂದ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದ್ದು, ಚಪ್ಪಾಳೆಗಳ ಸುರಿಮಳೆಯೇ ಸಿಗುತ್ತಿದೆ.

ಇನ್ನು, ಭಾರತೀಯ ಸೇನೆಯ ಶೌರ್ಯವನ್ನು ತೋರಿಸಿದ ಈ ಚಿತ್ರವನ್ನು ನೋಡಿದ ದೇಶದ ಅನೇಕ ಗಣ್ಯರು ಸಹ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್‌’ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಸಹ ಈ ಚಿತ್ರವನ್ನು ಮೆಚ್ಚಿಕೊಂಡಿದ್ದರು. ಸಿನಿಮಾದ ರಾಷ್ಟ್ರೀಯ ಮ್ಯೂಸಿಯಂ ಅನ್ನು ಉದ್ಘಾಟಿಸಿದ ವೇಳೆ ಪ್ರಧಾನಿ ”ಜೋಷ್ ಹೇಗಿದೆ” ಎಂಬ ಚಿತ್ರದ ಫೇಮಸ್ ಡೈಲಾಗ್ ಅನ್ನು ಹೇಳಿದ್ದರು. ಇದಕ್ಕೆ ಬಾಲಿವುಡ್ ಸೆಲೆಬ್ರಿಟಿಗಳ ಮೆಚ್ಚುಗೆಗೆ ಪಾತ್ರವಾಗಿದ್ದರು. ಇದೇ ರೀತಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಹ ಬೆಂಗಳೂರಿನಲ್ಲಿ ‘ಉರಿ’ ಚಿತ್ರ ವೀಕ್ಷಿಸಿ, ಮೆಚ್ಚಿಕೊಂಡಿದ್ದರು. ಅವರು ಕೂಡ ”ಜೋಷ್ ಹೇಗಿದೆ” ಎಂದು ಹೇಳಿ ಮೆಚ್ಚುಗೆಗೆ ಪಾತ್ರವಾಗಿದ್ದರು. ಇದರಿಂದ ಚಿತ್ರದ ಪ್ರಮುಖ ನಟರಾದ ವಿಕ್ಕಿ ಕೌಶಲ್ ಹಾಗೂ ಯಾಮಿ ಗೌತಮ್ ಸಹ ತೀವ್ರ ಹರ್ಷ ವ್ಯಕ್ತಪಡಿಸಿದ್ದರು. ಹೀಗೆ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುರವರಿಗೂ ಸಹ ‘ಉರಿ’ ಚಿತ್ರದ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಅಲ್ಲದೆ, ಐಟಿಬಿಪಿ ಸಿಬ್ಬಂದಿ ಜೊತೆಗೆ ಚಿತ್ರ ವೀಕ್ಷಿಸಿದ ವೆಂಕಯ್ಯ ನಾಯ್ಡು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.

ಈ ಬಗ್ಗೆ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡು ಟ್ವೀಟ್ ಮಾಡಿರುವ ಉಪರಾಷ್ಟ್ರಪತಿ  ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್‌’ ಚಿತ್ರ ನೋಡಿ ಖುಷಿಯಾಯಿತು. ಹೊಸದಿಲ್ಲಿಯ ಉಪರಾಷ್ಟ್ರಪತಿ ನಿವಾಸಕ್ಕೆ ಭದ್ರತೆ ನೀಡುವ ಐಟಿಬಿಪಿ ಸಿಬ್ಬಂದಿಯೊಂದಿಗೆ ಈ ಚಿತ್ರವನ್ನು ವೀಕ್ಷಿಸಿದೆ. ಅವರಿಗೂ ಕೂಡ ಚಿತ್ರವನ್ನು ನೋಡಿ ಸ್ಫೂರ್ತಿಯಾಗಿರಬೇಕು. ಅದು ಸ್ಫೂರ್ತಿದಾಯಕ ಚಿತ್ರವಾಗಿದ್ದು, ನಾನು ‘ಉರಿ’ ಚಿತ್ರದ ನಟರು ಹಾಗೂ ಚಿತ್ರತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ” ಎಂದು ವೆಂಕಯ್ಯ ನಾಯ್ಡು ಟ್ವೀಟ್ ಮಾಡಿದ್ದಾರೆ.

About the author

ಕನ್ನಡ ಟುಡೆ

Leave a Comment