ರಾಜ್ಯ ಸುದ್ದಿ

ಎಂಟು ದಶಕಗಳಿಂದ ಸಿದ್ದಗಂಗಾ ಶ್ರೀಗಳ ದಿನಚರಿ ಹೀಗಿತ್ತು

ತುಮಕೂರು: ಪಟ್ಟಾಧಿಕಾರ ಸ್ವೀಕರಿಸಿದ 1930ರಿಂದ ತೀರಾ ಇತ್ತೀಚಿಗೆ ಆಸ್ಪತ್ರೆ ಸೇರುವವರೆಗೂ ಶ್ರೀಗಳು ತಮ್ಮ ದಿನಚರಿಯಲ್ಲಿ ಕೊಂಚವೂ ವ್ಯತ್ಯಾಸ ಮಾಡಿಕೊಂಡವರಲ್ಲ. ನಿತ್ಯವೂ ತ್ರಿಕಾಲ ಪೂಜೆ, ಮಿತಾಹಾರ, ಯಂತ್ರಧಾರಣೆ, ಭಕ್ತರಿಗೆ ದರ್ಶನ, ಪಾದಪೂಜೆ, ಶಿವಪೂಜೆ, ಮಕ್ಕಳ ಯೋಗಕ್ಷೇಮ, ಪ್ರಸಾದ ವ್ಯವಸ್ಥೆ, ಗೋಪಾಲನೆ, ತೋಟ ಜಮೀನಿನ ಉಸ್ತುವಾರಿ ಕೆಲಸಗಳ ಬಗ್ಗೆ ಆಸಕ್ತಿಯಿಂದ ಭಾಗವಹಿಸುತ್ತಿದ್ದರು. ಚೆನ್ನೈನ ಆಸ್ಪತ್ರೆಯಲ್ಲಿದ್ದಾಗಲೂ ಲಿಂಗ ಪೂಜೆ ನಡೆಸಿದ್ದರು.

ಅವರ ದೈನಂದಿನ ದಿನಚರಿ ಹೀಗಿತ್ತು


ಮುಂಜಾನೆ 3 ಕ್ಕೆ ಎದ್ದು ಸ್ನಾನ

3.30ರಿಂದ 5.30ರವರೆಗೆ ಏಕಾಂತ ಪೂಜೆ

5.30ರಿಂದ 6ರವರೆಗೆ ಸಾಮೂಹಿಕ ಲಿಂಗ ಪೂಜೆ

6ಕ್ಕೆ ಪ್ರಸಾದ ಸ್ವೀಕಾರ ( ಒಂದೂವರೆ ಇಡ್ಲಿ, ಬೇಳೆಕಟ್ಟು, ಬೇವಿನ ಕಷಾಯ, ಹಾಲು, ಹಣ್ಣು ಸೇವನೆ)

6.30ಕ್ಕೆ ಕಚೇರಿಗೆ ಆಗಮನ, ದಿನಪತ್ರಿಕೆ ವಾಚನ, ಕಡತ ವಿಲೇವಾರಿ, ಭಕ್ತರ ದರ್ಶನ, ಸಮಸ್ಯೆ ಆಲಿಕೆ

8.30ಕ್ಕೆ ಭಕ್ತರ ಮನೆಗಳಲ್ಲಿ ಪಾದಪೂಜೆ, ಶಿವಪೂಜೆ

10ಕ್ಕೆ ಮಂಚದ ಮೇಲೆ ಕುಳಿತು ಯಂತ್ರಧಾರಣೆ

ಮಧ್ಯಾಹ್ನ 1.30ರಿಂದ 2.30ರವರೆಗೆ ಸ್ನಾನ, ಪೂಜೆ, ಪ್ರಸಾದ ಸ್ವೀಕಾರ (ತೆಳುವಾದ ರಾಗಿ ಮುದ್ದೆ/ಚಪಾತಿ ಅನ್ನ ಸಾರು)

3ಕ್ಕೆ ಮತ್ತೆ ಕಚೇರಿಗೆ ಆಗಮನ, ಕಾರ್ಯದಲ್ಲಿ ಮಗ್ನ

ಸಂಜೆ 5ಕ್ಕೆ ಹೊಲ, ಜಮೀನು, ಗೋಶಾಲೆಗೆ ಭೇಟಿ

6ಕ್ಕೆ ವಿದ್ಯಾರ್ಥಿಗಳ ಸಾಮೂಹಿಕ ಪ್ರಾರ್ಥನೆಯಲ್ಲಿ ಆರ್ಶೀರ್ವಚನ

7 ರಿಂದ 8.30ರವರೆಗೆ ಮಂಚದ ಮೇಲೆ ಕುಳಿತು ತಾಯತ/ ಯಂತ್ರಧಾರಣೆ

8.30ರಿಂದ 9 ಹಳೇ ಮಠಕ್ಕೆ ಆಗಮನ

9 ರಿಂದ 9.30ರವರೆಗೆ ಅಧ್ಯಯನ ಮತ್ತೆ ರಾತ್ರಿ ಪೂಜೆ ಹಾಗೂ ಚಪಾತಿ / ಉಪ್ಪಿಟ್ಟು ಪ್ರಸಾದ ಸ್ವೀಕಾರ

ರಾತ್ರಿ 11ಕ್ಕೆ ವಿಶ್ರಾಂತಿ

About the author

ಕನ್ನಡ ಟುಡೆ

Leave a Comment