ರಾಷ್ಟ್ರ

ಎಎಪಿ ಪಂಜಾಬ್ ಘಟಕದ ಅಧ್ಯಕ್ಷ ಭಗವಂತ್ ಮನ್ ರಾಜೀನಾಮೆ

ನವದೆಹಲಿ: ಆಮ್ ಆದ್ಮಿ ಪಕ್ಷ ದ ಪಂಜಾಬ್ ರಾಜ್ಯ ಘಟಕ ಅಧ್ಯಕ್ಷ ಮತ್ತು ಸಂಗರೂರ್ ಸಂಸದರಾದ ಭಗವಂತ್ ಮನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಪಂಜಾಬ್ ನ ಮಾಜಿ ಸಚಿವ ಮಜಿಥಿಯಾ ಕ್ಷಮೆ ಕೋರಿದ ಒಂದು ದಿನದ ತರುವಾಯ ಭಗವಂತ್ ಅಧ್ಯಕ್ಷ ಪದವಿ ತ್ಯಾಗ ಮಾಡಿದ್ದಾರೆ.

“ನಾನು ಪಂಜಾಬ್ ಎಎಪಿ ರಾಜ್ಯ ಘಟಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಆದರೆ ಪಂಜಾಬಿನಲ್ಲಿ ನಡೆಯುತ್ತಿರುವ ಎಲ್ಲಾ ವಿಧದ ಭ್ರಷ್ಟಾಚಾರದ ವಿರುದ್ಧ ನನ್ನ ಹೋರಾಟ ಮುಂದುವರಿಯುತ್ತದೆ. ಪಂಜಾಬಿನ ಓರ್ವ ಆಮ್ ಆದ್ಮಿಯಾಗಿ ನಾನು ಮುಂದುವರಿಯುತ್ತೇನೆ.” ಮನ್ ಟ್ವೀಟ್ ನಲ್ಲಿ ಹೇಳಿದ್ದಾರೆ.

 

 

About the author

ಕನ್ನಡ ಟುಡೆ

Leave a Comment