ಆಹಾರ

ಎಗ್ ಪೆಪ್ಪರ್ ಫ್ರೈ ರೆಸಿಪಿ

ಬೇಕಾಗುವ ಸಾಮಾಗ್ರಿಗಳು
1. ಮೊಟ್ಟೆ – 6
2. ಈರುಳ್ಳಿ-1

3. ಎಣ್ಣೆ – 2-3 ಚಮಚ
4. ಕಾಳು ಮೆಣಸು – 2 ಚಮಚ
5. ಉಪ್ಪು – ರುಚಿಗೆ ತಕ್ಕಷ್ಟು
5. ಕೊತ್ತಂಬರಿ ಸೊಪ್ಪು -ಸ್ವಲ್ಪ
7. ಅರಿಶಿಣ – ಚಿಟಿಕೆ
8. ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ
ಮಾಡುವ ವಿಧಾನ
  •  ಮೊದಲಿಗೆ ನಾಲ್ಕು ಮೊಟ್ಟೆಗಳನ್ನು ಒಂದು ಉಪ್ಪು, ನೀರು ಹಾಕಿ ಬೇಯಿಸಿಕೊಳ್ಳಿ.
  •  ಈಗ ಮೊಟ್ಟೆ ಬಿಡಿಸಿ ಒಂದು ಮೊಟ್ಟೆಯನ್ನು ಎರಡು ಭಾಗ ಮಾಡಿ ಕಟ್ ಮಾಡಿಕೊಳ್ಳಿ.
  •  ಬಳಿಕ ಒಂದು ಪ್ಯಾನ್ ಗೆ ಎರಡು ಚಮಚ ಎಣ್ಣೆ ಹಾಕಿ, ಬಿಸಿ ಆದ ಮೇಲೆ ಕಟ್ ಮಾಡಿದ್ದ ಮೊಟ್ಟೆಯನ್ನು ಇಟ್ಟು 1 ನಿಮಿಷ ಬೇಯಿಸಿಕೊಳ್ಳಿ.
  • ನಂತರ ಮೊಟ್ಟೆಯನ್ನು ಉಲ್ಟಾ ಮಾಡಿ ಸ್ವಲ್ಪ ಬ್ರೌನ್ ಬಣ್ಣ ಬರುವರೆಗೆ ಫ್ರೈ ಮಾಡಿ, ಮೊಟ್ಟೆಯನ್ನು ಒಂದು ಪ್ಲೇಟ್ ಗ ಎತ್ತಿಟ್ಟುಕೊಳ್ಳಿ
  •  ಈಗ ಅದೇ ಬಾಣಲೆಗೆ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿಕೊಳ್ಳಿ, ಅದಕ್ಕೆ ಉಪ್ಪು, ಚಿಟಿಕೆ ಅರಿಶಿಣ ಉದುರುಸಿ.
  • ನಂತರ 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ
  •  ಕಾಳು ಮೆಣಸಿನ ಪುಡಿ ಹಾಕಿ ಕಲೆಸಿರಿ, ಈಗ ಅದಕ್ಕೆ ಫ್ರೈ ಮಾಡಿಟ್ಟುಕೊಂಡ ಮೊಟ್ಟೆ ಹಾಕಿ ಎರಡು ಕಡೆ ಮೆಣಸಿನ ಪುಡಿ ಹಾಕಿ ಫ್ರೈ ಮಾಡಿ
  •  ನಂತರ ಸಣ್ಣಗೆ ಕಟ್ ಮಾಡಿದ್ದ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಸ್ಪೈಸಿ ಸ್ಪೈಸಿಯಾಗಿ ಎಗ್ ಪೆಪ್ಪರ್ ಫ್ರೈ ತಿನ್ನಲು ಸಿದ್ಧ.

About the author

ಕನ್ನಡ ಟುಡೆ

Leave a Comment