ರಾಜಕೀಯ

ಎಚ್​ಡಿಕೆಯನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಕೈ ನಾಯಕರ ಸಂಚು: ಬಿ.ವೈ. ವಿಜಯೇಂದ್ರ

ತುಮಕೂರು: ಎಚ್​.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್​ನ ಮೂವರು ಹಿರಿಯ ನಾಯಕರು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಅವರು ಮೂವರು ಕಾಂಗ್ರೆಸ್​ ನಾಯಕರು ಆಪರೇಷನ್​ ಕಮಲ ಎಂಬ ಬೆದರುಬೊಂಬೆ ಇಟ್ಟುಕೊಂಡು ಹುನ್ನಾರ ನಡೆಸುತ್ತಿದ್ದಾರೆ. ಆ ಮೂಲಕ ಅವರು ಜೆಡಿಎಸ್​ ಮುಖಂಡರನ್ನು ಹೆದರಿಸುತ್ತಿದ್ದಾರೆ. ಮೂವರು ನಾಯಕರಲ್ಲಿ ಒಬ್ಬರು ಸಚಿವರು ಮತ್ತು ಇನ್ನಿಬ್ಬರು ಸಚಿವ ಸ್ಥಾನದ ಆಕಾಂಕ್ಷಿಗಳು. ಇವರು ಯಾರು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ವಿಜಯೇಂದ್ರ ತಿಳಿಸಿದರು.

About the author

ಕನ್ನಡ ಟುಡೆ

Leave a Comment