ಕವಿತೆಗಳು

ಎನ್ನ ಮನ ಉಯ್ಯಾಲೆಯಾದಾಗ…!

ಎಲ್ಲೋ ಕೂತು ಏನೋ ಮಾಡಿದೆ
ಮನದ ಕಲ್ಯಾಣಿ ಅಲೆ ಎದ್ದಿದೆ
ಕೂತರೂ,ನಿಂತರೂ ತಿಳಿಗೊಳ್ಳದು
ಏನೆಂದು,ಏಕೆಂದು ಅರಿಯದು

ಶಾಂತ ಚಿತ್ತ ಮೌನಿ ನಾನು
ಅನಿರೀಕ್ಷಿತ ಗೊಂದಲ ಏನು
ಯಾವುದೋ ಗುಂಗಿನಲಿ
ಮೈ ಮರೆತು ಬಸವಳಿದ
ಗೊಂಬೆ ಯಂತಾದೆನು

ಮಾತಿಲ್ಲ ಕಥೆ ಇಲ್ಲ ಕೇಳುವವರ
ಮಾತಿಗೆ ಉತ್ತರವು ನನ್ನಲ್ಲಿಲ್ಲ
ಕಲ್ಪನಾ ಲೋಕದಲಿ ವಿಹಾರಿಪೆನಲ್ಲ
ಏನು ಮಾಡಿದೆ ನೀನು ನನಗಂತೂ
ಅರಿವಾಗಿಲ್ಲ,ಹೇಳಲು ನೀ ಬಳಿ ಇಲ್ಲ

ಸುಮ್ಮನೆ ಕುಳಿತೆ ಸಂತೆಯಲೂ ಚಿಂತೆ
ಕಂಡು ಕೇಳರಿಯದ ಕಾಯಿಲೆ
ಮನವೊಂದು ಆಯಿತು ಉಯ್ಯಾಲೆ
ತೂಗುವ ಮನವ ಹಿಡಿವರಾರು
ತಂಪು ನೀಡಿ ಹರುಷ ತರುವರಾರು

ಸುರಭಿ ಲತಾ

About the author

ಕನ್ನಡ ಟುಡೆ

Leave a Comment