ರಾಷ್ಟ್ರ ಸುದ್ದಿ

ಎನ್’ಸಿಪಿ ಮಾಜಿ ಮುಖಂಡ ತರೀಖ್ ಅನ್ವಾರ್ ಕಾಂಗ್ರೆಸ್’ಗೆ ಸೇರ್ಪಡೆ

ನವದೆಹಲಿ: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಬೆನ್ನಲ್ಲೇ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಎನ್’ಸಿಪಿ ಮಾಜಿ ಮುಖಂಡ ತರೀಖ್ ಅನ್ವಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಶನಿವಾರ ಸೇರ್ಪಡೆಗೊಂಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ತರೀಖ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆಂದು ತಿಳಿದುಬಂದಿದೆ. ಇಂದು ಬೆಳಿಗ್ಗೆ ತುಘಲಕ್ ಲೇನ್ ನಲ್ಲಿರುವ ರಾಹುಲ್ ಗಾಂಧಿಯವರ ನಿವಾಸಕ್ಕೆ ಭೇಟಿ ನೀಡಿದ ಅನ್ವಾರ್ ಹಾಗೂ ಅವರ ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರುಎಂದು ವರದಿಗಳು ತಿಳಿಸಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದವನ್ನು ಶರದ್ ಪವಾರ್ ಅವರು ಸಮರ್ಥಿಸಿಕೊಂಡ ಹಿನ್ನಲೆಯಲ್ಲಿ ಸೆ.28 ರಂದು ಪಕ್ಷ ತೊರೆಯುವುದಾಗಿ ಅನ್ವಾರ್ ಅವರು ಹೇಳಿದ್ದರು. ಅನ್ವಾರ್ ಅವರು 1980ರಲ್ಲಿ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿದ್ದರು. ಅಲ್ಲದೇ ಕಾಟಿಹಾರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲವು ಸಾಧಿಸಿ ಸಂಸದರಾಗಿದ್ದರು. 1999ರಲ್ಲಿ ಪವಾರ್ ಹಾಗೂ ಮೇಘಾಲಯದ ದಿವಂಗತ ಪಿ.ಎ. ಸಂಗ್ಮಾ ಜೊತೆಗೂಡಿ ಎನ್’ಸಿಪಿ ಸ್ಥಾಪಿಸಲು ಕೈಜೋಡಿಸಿದ್ದರು.

About the author

ಕನ್ನಡ ಟುಡೆ

Leave a Comment