ಸುದ್ದಿ

ಎಪಿಎಂಸಿ ಅಧಿಕಾರಿಯಿಂದಲೇ ಅಘೋಷಿತ ಸಂಚಾರ ನಿರ್ಭಂದ

ರಾಯಚೂರು; ಉತ್ಪನ್ನ ಮಾರುಕಟ್ಟೆ ಅಭಿವೃಧ್ದಿ ಚಟುವಟಿಕೆಯಲ್ಲಿ ತಲ್ಲೀನರಾಗಬೇಕಾದ ಅಢಳಿತ ಮಂಡಳಿಯೇ ಕೃಷಿಕರ ಉತ್ಪನ್ನ ಸರಬರಾಜಿನ ಸುಗಮ ಸಂಚಾರಕ್ಕೆ ಕಂಟಕವಾಗಿ ಪರಿಣಮಿಸಿರುವುದು ಕೃಷಿಕ ವರ್ಗವನ್ನು ಇನ್ನಿಲ್ಲದ ಸಂಕಟಕ್ಕೆ ದೂಡಿದೆ.

ರೈತರು ಬೆಳೆದ ಫಸಲು ಮಾರಾಟಕ್ಕೆ ಹೆಣಗಾಟ ಒಂದೆಡೆಯಾದರೇ, ಮತ್ತೊಂದೆಡೆ ಕೃಷಿಕರು ಬೆಳೆದ ಉತ್ಪನ್ನ ಮಾರಾಟದ ಸುಗಮ ಸಂಚಾರಕ್ಕಾಗಿ ಲಕ್ಷಾಂತರ ವೆಚ್ಚದಡಿ ನಿರ್ಮಾಣ ಮಾಡಿರುವ ಪ್ರವೇಶದ್ವಾರಕ್ಕೆ ಜಿಡ್ಡುಗಟ್ಟಿದ ಎಪಿಎಂಸಿ ಅಧಿಕಾರಿ ವರ್ಗವೇ ಬೀಗಜಡೆವ ವಿನೂತನ ನಿಯಮ ಪಾಲನೆ ಮನೋಸ್ಥಿತಿ ಅನಕ್ಷರಸ್ಥ ರೈತಾಪಿವರ್ಗವನ್ನು ಚಕಿತಗೊಳಿಸಿದೆ.
ನಗರ ಸೇರಿ ಬಹುತೇಕ ಗ್ರಾಮಗಳ ನೂರಾರು ಸಂಚಾರಿ ವಾಸಿಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ
ರಸ್ತೆಯ ಪ್ರವೇಶ ದ್ವಾರಕ್ಕೆ ಅಘೋಷಿತ ನಿರ್ಭಂಧವೇರುವ ಸಂಬಂಧಪಟ್ಟವರ ನಡೆ ಸ್ಥಳೀಯರನ್ನು ಮೂಕ ವಿಸ್ಮಯಗೊಳಿಸಿದೆ.
ಸಂಚಾರ ದುರ್ಗಮ ವಿಶಿಷ್ಠ ನಿಯಮಾವಳಿ ಶತಮಾನಗಳಿಂದ ಅಡಕತ್ತರಿಯ ಅವಸ್ಥೆಗೆ ಸಿಲುಕಿ ಉತ್ನನ್ನ ಮಾರಾಟಕ್ಕಾಗಿ ಹೆಣಗಾಡುತ್ತಿರುವ ಕೃಷಿಕ ವರ್ಗಕ್ಕೆ ಒದಗಿರುವ ಶೋಷಣೆಯೇ ಎನ್ನುವ ಪ್ರಶ್ನೆ ಬಡಪಾಯಿಗಳಿಂದ ವ್ಯಕ್ತಗೊಳ್ಳುವಂತಾಗಿದೆ.
ದಿನನಿತ್ಯದ ಈ ಅವಸ್ಥೆ ಕಣ್ಣಿಗೆ ರಾಚುವಂತಾಗಿದ್ದರೂ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವ ಮಾರುಕಟ್ಟೆ ನಿರ್ವಾಹಣಾಧಿಕಾರಿಗಳಿಗೆ ಎಲ್ಲಿಲ್ಲದ ಅನ್ನದಾತರ ಸಂಕಟ ಗಮನಕ್ಕಿಲ್ಲವೇ? .
ಇದ್ದರೂ ಏಕಮಾತ್ರ ಪ್ರವೇಶ ದ್ವಾರ ವ್ಯತಿರಿಕ್ತ ಪರಿಣಾಮದಿಂದಾಗಿ ಯಾರು ಸತ್ತರೇನು? ಬಿಟ್ಟರೇನು ತಾವು ಹೇಳಿದ್ದೇ ಶಾಸನವೆನ್ನುವ ಮೊಂಡುತನ ಪ್ರದರ್ಶಿಸಲಾಗುತ್ತಿದೆಯೇ.ಶತಮಾನದ ಇತಿಹಾಸ ಹೊಂದಿರುವ ರಾಜೇಂದ್ರ ಗಂಜ್ ಪ್ರಾಂಗಣದಲ್ಲಿ ಉತ್ಪನ್ನ ಮಾರಾಟಕ್ಕೆ ಏಕಮಾತ್ರ ಸಂಚಾರ ವ್ಯವಸ್ಥೆ ವಾಹನ ದಟ್ಟಣೆಯಿಂದಾಗಿ ಸವಾರರ ಪಾಲಿಗೆ ಸುಗಮ ಸಂಚಾರ ನಕ್ಷತ್ರ ಮಿನುಗಿನಂತಾಗಿ ಪರಿಣಮಿಸಿದೆ.
ಮಾರುಕಟ್ಟೆ ಸಮಿತಿ ಅಭಿವೃಧ್ದಿಗೆ ತುಟೀ ಬಿಚ್ಚದ ಮೇಲಾಢಳಿತದ ಪ್ರವೇಶ ದ್ವಾರ ನಿರ್ಬಂಧ ಜನ ವಿರೋಧಿ ನೀತಿಯ ಮೃಧೂ ದೋರಣೆ ಮೊಂಡು ಪೃವೃತ್ತಿಗೆ ಮಾರು ಹೋಗಿರುವುದು ಅನ್ನದಾತ ವರ್ಗದ ಉತ್ಪನ್ನ ಸರಬರಾಜಿಗೆ ಕಂಟಕವಾಗಿ ಪರಿಣಮಿಸಿದ್ದು, ಗಾಢ ನಿದ್ರೆಗೆ ಜಾರಿರುವ ಎಪಿಎಂಸಿ ಆಡಳಿತ ವರ್ಗ ಇನ್ನಾದರೂ ಜಾಗೃತ ವಹಿಸಿ ಪ್ರವೇಶ ಮುಖ್ಯದ್ವಾರಕ್ಕೆ ಜಡೆದಿರುವ ಬೀಗ ತೆಗೆದು ಮಾರುಕಟ್ಟೆಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬ ಒತ್ತಾಸೆ ಹತ್ತಾರು ರೈತರಿಂದ ವ್ಯಕ್ತಗೊಂಡಿದೆ.

About the author

ಕನ್ನಡ ಟುಡೆ

Leave a Comment