ಕ್ರೀಡೆ

ಎಬಿ ಡಿವಿಲಿಯರ್ಸ್ : ವೇದ ಕೃಷ್ಣಮೂರ್ತಿಯೊಂದಿಗೆ ಸಂದರ್ಶನ

ಇಂಡಿಯನ್‌‌ ಪ್ರೀಮಿಯರ್‌‌‌ ಲೀಗ್‌‌ನಲ್ಲಿ ರಾಯಲ್‌‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಕಣಕ್ಕಿಳಿಯುವ ಸ್ಪೋಟಕ ಬ್ಯಾಟ್ಸಮನ್‌‌ ಎಬಿ ಡಿವಿಲಿಯರ್ಸ್‌‌‌ ಕನ್ನಡತಿ ಹಾಗೂ ಮಹಿಳಾ ಕ್ರಿಕೆಟ್‌‌ ತಂಡದ ಆಟಗಾರ್ತಿ ವೇದ ಕೃಷ್ಣಮೂರ್ತಿಯೊಂದಿಗೆ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ.ಈಗಾಗಲೇ ಅನೇಕ ಸಲ ಕನ್ನಡ ಪ್ರೇಮದ ಬಗ್ಗೆ ಮಾತನಾಡಿರುವ ಮಿ. 360 ಎಬಿ ಡಿವಿಲಿಯರ್ಸ್‌‌ ವೇದಾ ಕೃಷ್ಣಮೂರ್ತಿಯೊಂದಿಗೆ ಸಂದರ್ಶನದಲ್ಲಿ ಭಾಗಿಯಾಗಿದ್ದು, ಮಹಿಳಾ ಕ್ರಿಕೆಟ್‌ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಮಹಿಳಾ ಕ್ರಿಕೆಟರ್ಸ್‌‌ ಫಾಲೋವರ್‌ ಆಗಿರುವ ಎಬಿಡಿ, ಬಿಗ್‌ ಬ್ಯಾಷ್‌ ಹಾಗೂ ಐಪಿಎಲ್‌‌ನಲ್ಲಿ ಅನೇಕ ಮಹಿಳೆಯರು ಕಾಮೆಂಟರ್‌ ಆಗಿ ಕಾರ್ಯ ನಿರ್ವಹಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದ್ದಾರೆ. ಕಳೆದ ಕೆಲ ವರ್ಷಗಳಿಂದ ನಾನು ಮಹಿಳಾ ಕ್ರಿಕೆಟ್‌‌ ಪಂದ್ಯಗಳ ವೀಕ್ಷಣೆ ಮಾಡುತ್ತಿದ್ದು, ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದಾಗ ಸದ್ಯ ಮಹಿಳಾ ಕ್ರಿಕೆಟ್‌ ಬಹಳಷ್ಟು ಮುಂದುವರೆದಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಅವರಿಗೂ ಉತ್ತಮ ವಾತಾವರಣ ಲಭ್ಯವಾದರೆ, ನಿಜವಾಗಲೂ ಪುರುಷರ ಕ್ರಿಕೆಟ್‌‌ನಷ್ಟೇ ಪ್ರೋತ್ಸಾಹ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಎಬಿಡಿ ಕನ್ನಡದ ಪ್ರೇಮದ ಕಾಣಿಕೆ ಚಿತ್ರದ ಹಾಡು ಮೌತ್‌ಆರ್ಗನ್‌ನಲ್ಲಿ ನುಡಿಸಿ ಕನ್ನಡಿಗರ ಮನಗೆದ್ದಿದ್ದರು.

About the author

ಕನ್ನಡ ಟುಡೆ

Leave a Comment