ಸುದ್ದಿ

ಎಮ್.ಎನ್.ಕೆ.ವಜ್ಜಲ್ ಅಭಿಮಾನಿಗಳಿಂದ ಸಾಮೂಹಿಕ ವಿವಾಹಗಳ ಪೂರ್ವಭಾವಿ ಸಭೆ

ಲಿಂಗಸ್ಗೂರು:  ಮಾನ್ಯ ಶಾಸಕರಾದ ಮಾನಪ್ಪ ಡಿ ವಜ್ಜಲ್ ರವರು ಅವರ ಅಭಿಮಾನಿ ಬಳಗದಿಂದ 501 ಸಾಮೂಹಿಕ ವಿವಾಹ ಸಿದ್ಧತೆಗೆ ಪೂರ್ವ ಸಭೆ ಕರೆದಿದ್ದರು ಸಭೆಯನ್ನ ಉದ್ದೇಶಿಸಿ ಮಾತನಾಡಿದ ಶಾಸಕರು ಪಕ್ಷದ ಮುಖಂಡರು ಹಾಗೂ ಎಮ್.ಎನ್.ಕೆ.ವಿ ಸಂಘದ ಸದಸ್ಯರಿಗೆ ಹಲವು ಕಾರ್ಯ ಸಿದ್ದತೆಗಳನ್ನ ವಹಿಸಿಕೊಂಡು ವಿವಾಹ ಮಹೋತ್ಸವವನ್ನ ಯಶಸ್ವಿ ಗೊಳಿಸಬೇಕು ಪ್ರತಿಯೊಬ್ಬರಿಗೂ ನೀಡುವ ಕಾರ್ಯಗಳನ್ನು ಜವಬ್ದಾರಿಯುತವಾಗಿ ನಿರ್ವಹಿಸಬೇಕು ಎಂದು ಕೋರಿಕೊಂಡರು

ನಾವು 500 ವಿವಾಹಗಳನ್ನ ನೆರವೇರಿಸಲು ನಿರ್ಧರಿಸಿದ್ದೆವು ಆದರೆ ಹೆಚ್ಚಾಗಿ ಬಂದ ಬಡಜನರನ್ನು ನಿರಾಶರನ್ನಾಗಿ ಮಾಡದೇ ಎಷ್ಟೇ ಬರಲಿ 1000 ಜೋಡಿಗಳು ಬಂದರೂ ಸಹ ನಾವು ನೆರವೇರಿಸಲು ಸಿದ್ದರಿದ್ದೇವೆ ಎಂದು ಮುಖಂಡರೆಲ್ಲರು ಭರವಸೆ ನೀಡಿದ್ದಾರೆ ಎಂದು ಹೇಳಿದರು

ಲಿಂಗಸ್ಗೂರು ಕ್ಷೇತ್ರದವರಿಗಷ್ಟೆ ಅವಕಾಶವಿತ್ತು ಆದರೆ ಬೇರೆ ತಾಲೂಕಿನ ಬಡ ಜನ ನಮ್ಮನ್ನು ನಂಬಿ ಬಂದವರಿಗೂ ಕೂಡ ನಾವು ನಿರಾಶೆ ಮಾಡುವುದಿಲ್ಲ ಅವರಿಗೂ ಅವಕಾಶ ಮಾಡಿಕೊಡಲಾಗುತ್ತದೆ

ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮಗಳ ಪದ್ದತಿಯ ಪ್ರಕಾರ ವಿವಾಹಗಳನ್ನ ನೆರವೇರಿಸುತ್ತೇವೆ ಎಂದು ಹೇಳಿದರು

About the author

ಕನ್ನಡ ಟುಡೆ

Leave a Comment