ಸಿನಿ ಸಮಾಚಾರ

ಎರಡೇ ಗಂಟೆಗಳಲ್ಲಿ ನಟಸಾರ್ವಭೌಮ ಟ್ರೈಲರ್ ವೈರಲ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ ನಾಯಕತ್ವದ ‘ನಟಸಾರ್ವಭೌಮ’ ಸಿನಿಮಾದ ಟ್ರೈಲರ್ ಇಂದು, ಜನವರಿ 25 ರಂದು ಯೂ ಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ರಿಲೀಸ್ ಆದ ಎರಡೇ ಗಂಟೆಗಳಲ್ಲಿ ಟ್ರೈಲರ್ ಬರೋಬ್ಬರಿ ನಾಲ್ಕೂವರೆ ಲಕ್ಷಗಳಿಗಿಂತ ಹೆಚ್ಚು ವ್ಯೂಸ್ ಪಡೆದಿದೆ. ಪುನೀತ್ ಅಭಿಮಾನಿಗಳು ಭಾರೀ ನಿರೀಕ್ಷೆಯಿಂದ ಕಾಯುತ್ತಿರುವ ನಟಸಾರ್ವಭೌಮ ಚಿತ್ರದ ಟ್ರೈಲರ್ ಸ್ಯಾಂಡಲ್‌ವುಡ್‌ನಲ್ಲಿ ಹೊಸ ದಾಖಲೆ ಬರೆದರೂ ಅಚ್ಚರಿಯಿಲ್ಲ. ಈ ಚಿತ್ರವನ್ನು ಪವನ್ ಒಡೆಯರ್ ನಿರ್ದೇಶಿಸಿದ್ದು ರಾಕ್‌ಲೈನ್ ವೆಂಕಟೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಬಿಡುಗಡೆಯಾಗಿರುವ ನಟಸಾರ್ವಭೌಮ ಚಿತ್ರದ ಟ್ರೈಲರ್ ಮೇಕಿಂಗ್ ಅದ್ಭುತ ಎನಿಸುವಂತಿದೆ. ಪುನೀತ್ ಕೈಗೆ ಕಟ್ಟಿರುವ ತಾಯಿತ, ಲುಕ್ ಹಾಗೂ ಪೋಷಕ ನಟರುಗಳ ಹಾವ-ಭಾವಗಳು ಈ ಚಿತ್ರದಲ್ಲಿ ಹಾರರ್ ಫೀಲ್ ಇದೆ ಎನ್ನುವಂತಿದೆ. ಜೊತೆಗೆ, ಪುನೀತ್ ಸಾಹಸ ದೃಶ್ಯಗಳು ಚಿತ್ರದಲ್ಲಿ ಆಕ್ಷನ್‌ಗೂ ಕೊರತೆಯಿಲ್ಲ ಎಂದೂ ಹೇಳುವಂತಿವೆ. ಒಟ್ಟಿನಲ್ಲಿ ಚಿತ್ರದ ಬಗ್ಗೆ ಒಂದೇ ಒಪಿನಿಯನ್ ಕೊಡಲು ಅಸಾಧ್ಯವಾದರೂ ಈ ಚಿತ್ರವು ಹಾರರ್-ಥ್ರಿಲ್ಲರ್ ಹಾಗೂ ಆಕ್ಷನ್ ಸಂಗಮಗಳ ವಿಭಿನ್ನ ಕಥಾ ಹಂದರ ಹೊಂದಿರಬಹುದು ಎನ್ನುವಂತಿದೆ.

ಪವನ್-ಪುನೀತ್ ಜೋಡಿಯ ನಟಸಾರ್ವಭೌಮ ಚಿತ್ರದ ಬಗ್ಗೆ ಎಲ್ಲ ಕಡೆ ಬಹಳ ನಿರೀಕ್ಷೆ ಹುಟ್ಟಿದೆ. ಸ್ವತಃ ಪುನೀತ್ ಈ ವಿಷಯವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಪುನೀತ್ ರಾಜ್ ಮತ್ತು ಪವನ್ ಒಡೆಯರ್ ಇಬ್ಬರೂ “ಈ ಚಿತ್ರವು ಸಂಪೂರ್ಣವಾಗಿ ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್ . ಇಡೀ ಫ್ಯಾಮಿಲಿ ಕುಳಿತು ನೋಡಬಹುದಾದ ಈ ಚಿತ್ರಕ್ಕೆ ಸೆನ್ಸಾರ್ ಕೂಡ ‘ಯು/ಎ’ ಸರ್ಟಿಫಿಕೇಟ್ ನೀಡಿದೆ” ಎಂದಿದ್ದಾರೆ.

About the author

ಕನ್ನಡ ಟುಡೆ

Leave a Comment