ರಾಷ್ಟ್ರ ಸುದ್ದಿ

ಎಲ್ಲಾ ಅವಿವೇಕಿಗಳಿಗೆ ಈಗ ಒಂದೇ ಸ್ಥಳ ಉಳಿದಿದೆ, ಅದುವೇ ಕಾಂಗ್ರೆಸ್: ರಾಷ್ಟ್ರಾಧ್ಯಕ್ಷ ಅಮಿತ್ ಶಾ

ನವದೆಹಲಿ: ಮಾವೋವಾದಿಗಳು, ನಕಲಿ ಹೋರಾಟಗಾರರು, ಭ್ರಷ್ಠಾಚಾರಿಗಳಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಾ ಬಂದಿದ್ದು ಎಲ್ಲಾ ಬಗೆಯ ಅವಿವೇಕಿಗಳಿಗೆ ಒಂದೇ ಕಡೆ ಸ್ಥಾನವಿದೆ, ಅದು ಕಾಂಗ್ರೆಸ್ ಮಾತ್ರ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಭೀಮಾ-ಕೊರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ  ಮಹಾರಾಷ್ಟ್ರ ಪೊಲೀಸರು ಬಂಧಿಸಿರುವ ಐವರು ಸಾಮಾಜಿಕ ಹೋರಾಟಗಾರರ ಬಂಧನ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದ ಸುಪ್ರೀಂ ತೀರ್ಪಿನ ಬಳಿಕ ಅಮಿತ್ ಶಾ ಈ ಹೇಳಿಕೆ ಬಂದಿದೆ.ಎಲ್ಲಾ ಬಗೆಯ ಅವಿವೇಕಿಗಳಿಗೆ ಈಗ ಒಂದೇ ಸ್ಥಳ ಉಳಿದಿದೆ, ಮತ್ತು ಅದುವೇ ಕಾಂಗ್ರೆಸ್ ಆಗಿರುತ್ತದೆ.ಕಾಂಗ್ರೆಸ್ ಒಂದು ’ಬ್ರೇಕ್ ಇಂಡಿಯಾ ಗ್ಯಾಂಗ್’ ಆಗಿದ್ದು ಮಾವೋವಾದಿಗಳು, ನಕಲಿ ಹೋರಾಟಗಾರರು, ಮತ್ತು ಭ್ರಷ್ಟಾಚಾರಿಗಳಿಗೆ ಸದಾ ರಕ್ಷಣೆ ನಿಡುತ್ತದೆ. ಇಂತಹಾ ರಾಹುಲ್ ಗಾಂಧಿಯ ಕಾಂಗ್ರೆಸ್ ಗೆ ಸ್ವಾಗತ ಎಂದು ಅಮಿತ್ ಶಾ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

About the author

ಕನ್ನಡ ಟುಡೆ

Leave a Comment