ರಾಜ್ಯ ಸುದ್ದಿ

ಎಸಿಬಿ ದಾಳಿ: ಉಡುಪಿ ಸೇರಿ ವಿವಿಧೆಡೆ ಅಧಿಕಾರಿಗಳಿಗೆ ಶಾಕ್‌

ಬೆಂಗಳೂರು: ಎಸಿಬಿ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ರಾಜ್ಯದ ವಿವಿಧೆಡೆ ಏಕಕಾಲಕ್ಕೆ ದಾಳಿ ನಡೆಸಿ ಹಲವು ಅಧಿಕಾರಿಗಳಿಗೆ ಶಾಕ್‌ ನೀಡಿದ್ದಾರೆ. ಬೆಂಗಳೂರು ನಗರ, ಚಿಂತಾಮಣಿ, ಉಡುಪಿ, ಮೈಸೂರು , ಧಾರವಾಡದಲ್ಲಿ ಅಧಿಕಾರಿಗಳು  ಏಕಕಾಲಗಳಲ್ಲಿ ಭ್ರಷ್ಟ ಅಧಿಕಾರಿಗಳ ನಿವಾಸಗಳು ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಉಡುಪಿಯಲ್ಲಿ  ಮಂಗಳೂರಿನ ಸರ್ಕಾರಿ ಶಿಕ್ಷಕ ತರಬೇತಿ ಕೇಂದ್ರದ ಅಧಿಕಾರಿ ಮಂಜುನಾಥಯ್ಯ ಅವರ ಮಣಿಪಾಲದ ಫ್ಲ್ಯಾಟ್‌ ಮತ್ತು ಶಿವಮೊಗ್ಗದ ಸಂಬಂಧಿಕರ ನಿವಾಸದ ಮೇಲೆ ದಾಳಿ ನಡೆಸಲಾಗಿದ್ದು ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.

ಬೇಲೂರಿನ ಸಹಕಾರಿ ಬ್ಯಾಂಕ್ ಅಧಿಕಾರಿ ಆರ್. ಶ್ರೀಧರ್, ಯೋಜನಾ ಆಯೋಗದ ಸಹಾಯಕ ನಿರ್ದೇಶಕ ಬೇಸತ್ತಪ್ಪ, ದಾವಣಗೆರೆಯ ಹೆಚ್ಚುವರಿ ಕೃಷಿ ನಿದೇರ್ಶಕಿ ಹಂಸವೇಣಿ, ಮೈಸೂರು  ಮುಡಾ ಅಧಿಕಾರಿ ಕೆ. ಮಣಿ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

 

About the author

ಕನ್ನಡ ಟುಡೆ

Leave a Comment