ರಾಜ್ಯ ಸುದ್ದಿ

ಈ ಬಾರಿಯ ಎಸ್ಸೆಸ್ಸೆಲ್ಸಿ ಟಾಪರ್ಸ್‌ಗೆ ಉಚಿತ ಲ್ಯಾಪ್‌ಟಾಪ್‌

ಬೆಂಗಳೂರು: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸುವ ಸರಕಾರಿ ಶಾಲೆಗಳ ಐವರು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ನೀಡುವುದಾಗಿ ಸರಕಾರಿ ಶಾಲೆ ಉಳಿಸಿ ಆಂದೋಲನ ತಿಳಿಸಿದೆ. ಆಂದೋಲನದ ಶಿಕ್ಷಣ ರಾಯಭಾರಿ ನಟಿ ಪ್ರಣೀತಾ ಸುಭಾಷ್‌ ಅವರು ಲ್ಯಾಪ್‌ಟಾಪ್‌ಗಳನ್ನು ಕೊಡುಗೆ ನೀಡಲಿದ್ದಾರೆ. ಜತೆಗೆ, ಈ ಮಕ್ಕಳಿಗಾಗಿ ವಿಶೇಷ ಔತಣಕೂಟವನ್ನು ಸಹ ಆಯೋಜಿಸಲಿದ್ದಾರೆ.

ಅನಿಲ್‌ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಸರಕಾರಿ ಶಾಲೆ ಉಳಿಸಿ ಆಂದೋಲನಕ್ಕೆ ಹಲವು ನಟ, ನಟಿಯರು ಹಾಗೂ ಗಣ್ಯರು ಕೈಜೋಡಿಸಿದ್ದು, ರಾಜ್ಯಾದ್ಯಂತ 15ಕ್ಕೂ ಹೆಚ್ಚು ಶಾಲೆಗಳ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment