ರಾಜ್ಯ ಸುದ್ದಿ

ಎಸ್​ಎಸ್​ಎಲ್​ಸಿ ಗಣಿತ ಪ್ರಶ್ನೆಪತ್ರಿಕೆ ಸೋರಿಕೆ, ಸಿಂದಗಿ ತಾಲೂಕಿನಲ್ಲಿ ದುಷ್ಕೃತ್ಯ ಶಂಕೆ

ವಿಜಯಪುರ: ಸಿಂದಗಿ ತಾಲೂಕಿನ ಪರೀಕ್ಷಾ ಕೇಂದ್ರವೊಂದರಲ್ಲಿ ಎಸ್​ಎಸ್​ಎಲ್​ಸಿ ಗಣಿತ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ಬೆಳಗ್ಗೆ 11.30ರಲ್ಲಿ ಪರೀಕ್ಷೆ ನಡೆಯುತ್ತಿರುವಾಗಲೇ ಪ್ರಶ್ನೆಪತ್ರಿಕೆಯ ಪ್ರತಿ ವಾಟ್ಸ್​ಆ್ಯಪ್​ ಸೇರಿ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿತ್ತು ಎನ್ನಲಾಗಿದೆ.

ಸಿಂದಗಿ ತಾಲೂಕಿನ ಮೋರುಟಗಿ ಗ್ರಾಮ ಕಲ್ಪವೃಕ್ಷ ಶಿಕ್ಷಣ ಸಂಸ್ಥೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿರಬಹುದು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ದೌಡಾಯಿಸಿರುವ ಡಿಡಿಪಿಐ ಪ್ರಸನ್ನಕುಮಾರ್​ ಪರಿಶೀಲಿಸುತ್ತಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ನಿಜ. ಆದರೆ, ಪ್ರಶ್ನೆಪತ್ರಿಕೆ ಮೋರುಟಗಿ ಗ್ರಾಮದ ಶಾಲೆಯಿಂದಲೇ ಸೋರಿಕೆಯಾಗಿದೆಯೇ ಅಥವಾ ಬೇರೆ ಕೇಂದ್ರದಲ್ಲಿ ಆಗಿದೆಯೇ ಎಂಬುದನ್ನು ಪರಿಶೀಲಿಸಿ, ಖಚಿತಪಡಿಸಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment