ರಾಷ್ಟ್ರ ಸುದ್ದಿ

ಎಸ್‌ಬಿಐ ಗ್ರಾಹಕರು ಈಗ ಕಾರ್ಡ್‌ ಬಳಸದೆಯೇ ಎಟಿಎಂ ಹಣ ಡ್ರಾ ಮಾಡಬಹುದು

ಮುಂಬಯಿ : ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ನಿನ್ನೆ ಗುರುವಾರ ಮಾರ್ಚ್‌ 15ರಿಂದ ತನ್ನ ಗ್ರಾಹಕರಿಗೆ, ಕಾರ್ಡ್‌ ಬಳಸದೆಯೇ ಎಟಿಎಂ ನಿಂದ ಹಣ ಡ್ರಾ ಮಾಡುವ “Yono cash”  ಎಂಬ ಹೊಸ ಅವಕಾಶವನ್ನು ತನ್ನ ಮೊಬೈಲ್‌ ಅಪ್ಲಿಕೇಶನ್‌ ಮೂಲಕ ಆರಂಭಿಸಿದೆ.

ಎಟಿಎಂ ಕಾರ್ಡ್‌ ಬಳಸದೆಯೇ ಎಟಿಎಂ ಬೂತ್‌ ನಿಂದ ಹಣ ಡ್ರಾ ಮಾಡಲು ಎಸ್‌ಬಿಐ ಗ್ರಾಹಕರು ತಮ್ಮ ಮೊಬೈಲ್‌ ಮೂಲಕ ಆರು ಅಂಕಿಗಳ ಪಿನ್‌ ಮತ್ತು ಟ್ರಾನ್‌ಸ್ಯಾಕ್ಷನ್‌ ಪಿನ್‌ ಅನ್ನು ಎಸ್‌ಎಂಎಸ್‌ ಮೂಲಕ ಪಡೆದುಕೊಳ್ಳಬೇಕು. ಈ ರೀತಿಯ ಎರಡು ಫ್ಯಾಕ್ಟರ್‌ ಗಳ ಅಥೆಂಟಿಕೇಶನ್‌ ನಿಂದ ಗ್ರಾಹಕರ ಎಟಿಎಂ ವಹಿವಾಟು ಸುಭದ್ರವಾಗಿರುತ್ತದೆ.

ಎಸ್‌ಬಿಐ ಅಧ್ಯಕ್ಷ ರಜನೀಶ್‌ ಕುಮಾರ್‌ ಅವರು, “ದೀರ್ಘಾವಧಿಯಲ್ಲಿ ನಾವು ಕಾರ್ಡ್‌ ಬಳಕೆಯನ್ನು ನಿಲ್ಲಿಸಲು ಉದ್ದೇಶಿಸಿದ್ದೇವೆ. “Yono cash”ಸೌಕರ್ಯವು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಇದು ಅವಲಂಬಿಸುತ್ತದೆ‌’ ಎಂದು ಹೇಳಿದ್ದಾರೆ.

ಈಚಿನ ದಿನಗಳಲ್ಲಿ ಎಟಿಎಂ ಕಾರ್ಡ್‌ ಬಳಕೆದಾರರಿಗೆ ಸ್ಕಿಮ್ಮಿಂಗ್‌ ಮತ್ತು ಕ್ಲೋನಿಂಗ್‌ ನಿಂದಾಗಿ ತಮ್ಮ ಹಣ ಕಳೆದುಕೊಳ್ಳುವ ಅಪಾಯ ವ್ಯಾಪಕವಾಗಿರುವುದರಿಂದ ಕಾರ್ಡ್‌ ಬಳಸದೆಯೇ ಮೊಬೈಲ್‌ ಅಪ್ಲಿಕೇಶನ್‌ ಮೂಲಕ ಎಟಿಎಂ ನಿಂದ ಹಣ ಡ್ರಾ ಮಾಡುವ “Yono cash” ಸೌಕರ್ಯವನ್ನು ಎಸ್‌ಬಿಐ ಜಾರಿಗೆ ತಂದಿದೆ.

ಮೊಬೈಲ್‌ ಅಪ್ಲಿಕೇಶನ್‌ ಸೌಕರ್ಯದ ಮೂಲಕ SBI ಗ್ರಾಹಕರು ಕಾರ್ಡ್‌ ಬಳಸದೆಯೇ ದಿನಕ್ಕೆ ಎರಡು ಬಾರಿ ತಲಾ 10,000 ರೂ. ಡ್ರಾ ಮಾಡಬಹುದಾಗಿದ. ಎಸ್‌ಬಿಐ ಮತ್ತು ಇತರ ಬ್ಯಾಂಕ್‌ಗಳ ಎಟಿಎಂ ಗಳಲ್ಲಿ ಕಾರ್ಡ್‌ ಬಳಕೆ ಮೂಲಕ ಹಣ ಡ್ರಾ ಮಾಡುವ ಮಿತಿಗಿಂತಲೂ ಇದು ಜಾಸ್ತಿ ಇದೆ.

ಎಸ್‌ಬಿಐ ಎಟಿಎಂ ಗಳಲ್ಲಿ ಗ್ರಾಹಕರು ಐದಕ್ಕಿಂತ ಹೆಚ್ಚು ಬಾರಿ ಹಾಗೂ ಇತರ ಬ್ಯಾಂಕುಗಳ ಎಟಿಎಂಗಳಲ್ಲಿ ಐದಕ್ಕಿಂತ ಹೆಚ್ಚು ಬಾರಿ ಮಾಡುವ ವ್ಯವಹಾರಗಳಿಗೆ ಬ್ಯಾಂಕ್‌ ಶುಲ್ಕ ವಿಧಿಸುತ್ತದೆ.

ಕಾರ್ಡ್‌ ರಹಿತವಾಗಿ ಎಟಿಎಂ ನಿಂದ ಹಣ ಮಾಡುವ “Yono cash” ಸೌಕರ್ಯವನ್ನು ಎಸ್‌ಬಿಐ ಈಗಿನ್ನು ನ್ಯಾಶನಲ್‌ ಪೇಮೆಂಟ್‌ ಕಾರ್ಪೊರೇಶನ್‌ ಆಫ್ ಇಂಡಿಯಾ (ಎನ್‌ಪಿಸಿಐ) ಅಭಿವೃದ್ಧಿಪಡಿಸಿರುವ ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌ (ಯುಪಿಐ) ಗೂ ವಿಸ್ತರಿಸುವ ಕೆಲಸವನ್ನು ಮಾಡುತ್ತಿದೆ. ಇದರಿಂದಾಗಿ ಮೊಬೈಲ್‌ ನಂಬರ್‌ ಮಾತ್ರವೇ ಬಳಸಿಕೊಂಡು ಹಣ ವರ್ಗಾವಣೆ ಮಾಡುವುದೂ ಸೇರಿದಂತೆ ಇನ್ನೂ ಹೆಚ್ಚಿನ ಬಗೆಯ ಸೌಕರ್ಯಗಳನ್ನು ಇದು ಒದಗಿಸುತ್ತದೆ.

 

About the author

ಕನ್ನಡ ಟುಡೆ

Leave a Comment