ರಾಜ್ಯ ಸುದ್ದಿ

ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ವಾಚ್ ಕಟ್ಟಿಕೊಳ್ಳುವಂತಿಲ್ಲ: ರಾಜ್ಯ ಪ್ರೌಢ ಶಿಕ್ಷಣಾ ಪರೀಕ್ಷಾ ಮಂಡಳಿ

ಬೆಂಗಳೂರು:  2019 ಮಾರ್ಚ್- ಏಪ್ರಿಲ್ ತಿಂಗಳಲ್ಲಿ ನಡೆಯುವ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ವಾಚ್ ಕಟ್ಟಿಕೊಂಡು ಪರೀಕ್ಷಾ ಕೊಠಡಿ ಪ್ರವೇಶಿಸುವಂತಿಲ್ಲ. ಇಂದಿನ ಕಾಲದಲ್ಲಿ ರೇಕಾರ್ಡಿಂಗ್  ಮತ್ತಿತರ ಆಧುನಿಕ ವೈಶಿಷ್ಠ್ಯ ಹೊಂದಿರುವ ಸ್ಮಾರ್ಟ್ ವಾಚ್ ಗಳು ಬಂದಿರುವುದರಿಂದ  ವಿದ್ಯಾರ್ಥಿಗಳು ನಕಲು ಮಾಡಲು ನೆರವಾಗಬಹುದೆಂಬ ಕಾರಣದಿಂದಾಗಿ ಪರೀಕ್ಷಾ ಕೊಠಡಿಯೊಳಗೆ ವಾಚ್ ಕಟ್ಟುವುದನ್ನು ರಾಜ್ಯ ಪ್ರೌಢ ಶಿಕ್ಷಣಾ ಪರೀಕ್ಷಾ ಮಂಡಳಿ ನಿರ್ಬಂಧಿಸಿದೆ. ಈ ಮಧ್ಯೆ ವಿದ್ಯಾರ್ಥಿಗಳ ಸಮಯದ ಅನುಕೂಲಕ್ಕಾಗಿ ಎಲ್ಲಾ ಪಠೀಕ್ಷಾ ಕೊಠಡಿಗಳಲ್ಲಿ ಗೋಡೆ ಗಡಿಯಾರ ಹಾಕಲು ಮಂಡಳಿ ನಿರ್ಧರಿಸಿದೆ.   

ಅಕ್ರಮ ವ್ಯವಹಾರ ತಡೆಗಟ್ಟುವ ನಿಟ್ಟಿನಲ್ಲಿ  ವಿದ್ಯಾರ್ಥಿಗಳು ವಾಚ್ ಕಟ್ಟುವುದನ್ನು ನಿರ್ಬಂಧಿಸಲು ನಿರ್ಧರಿಸಲಾಗಿದೆ. ವೇಳಾಪಟ್ಟಿ ಪೂರ್ಣಗೊಂಡ ನಂತರ  ಸಂಪೂರ್ಣ ಸುತ್ತೂಲೆ ಹೊರಡಿಸಲಾಗುವುದು ಎಂದು ಕೆಎಸ್ ಇಇಬಿ ನಿರ್ದೇಶಕಿ ವಿ. ಸುಮಂಗಳಾ ತಿಳಿಸಿದ್ದಾರೆ.ಕಳೆದ ಬಾರಿಯ ಪರೀಕ್ಷೆ ಸಂದರ್ಭದಲ್ಲಿ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ, ಪರೀಕ್ಷಾ ಕೊಠಡಿಯಲ್ಲಿನ ಎಲ್ಲಾ ಸಹಾಯಕ ಸಿಬ್ಬಂದಿಗೂ ಗುರುತಿನ ಚೀಟಿ, ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಪೋನ್ ಗಳನ್ನು ನಿರ್ಬಂಧ ಮತ್ತಿತರ ಅನೇಕ ಸುಧಾರಣಾ ಕ್ರಮಗಳನ್ನು ಕೆಎಸ್ ಇಇಬಿ ಕೈಗೊಂಡಿತ್ತು.

About the author

ಕನ್ನಡ ಟುಡೆ

Leave a Comment