ದೇಶ ವಿದೇಶ

ಎಸ್.ಐ.ಟಿ ಯ ರೇಖಾಚಿತ್ರ ಹೋಲುವ ಬಿಜೆಪಿ ಶಾಸಕರ ಆಪ್ತ ಸಲಹೆಗಾರ

ತುಮಕೂರು: ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡರ ಆಪ್ತ ಸಹಾಯಕ ಪ್ರಭಾಕರ್ ರೇಖಾಚಿತ್ರದಲ್ಲಿರುವ ತಿಲಕವಿಟ್ಟ ವ್ಯಕ್ತಿಯ ಹಾಗೇಯೆ ಕಾಣುತ್ತಾರೆ. ಇದರಿಂದ ಸಂಕಷ್ಟಕ್ಕೆ ಒಳಗಾಗಿರುವ ಅವರು ರೇಖಾಚಿತ್ರಕ್ಕೂ, ನನಗೂ ಸಂಬಂಧವಿಲ್ಲ ಎಂದು ಸಾರಿ ಸಾರಿ ಹೇಳುತ್ತಿದ್ದಾರೆ.

ಎಸ್​ಐಟಿ ಬಿಡುಗಡೆ ಮಾಡಿರುವ ಪತ್ರಕರ್ತೆ ಗೌರಿ ಲಂಕೇಶ್​ ಹಂತಕರ ರೇಖಾಚಿತ್ರಕ್ಕೂ, ಇಲ್ಲಿನ ಬಿಜೆಪಿ ಮುಖಂಡರೊಬ್ಬರ ಮುಖಕ್ಕೂ ಸಾಮ್ಯತೆ ಕಂಡುಬಂದಿರುವುದು ಭಾರಿ ಚರ್ಚೆಗೆ ಒಳಗಾಗಿದೆ.

ರೇಖಾಚಿತ್ರ ಬಿಡುಗಡೆಯಾದ ನಂತರ ಪ್ರಭಾಕರ್​ ಅವರಿಗೆ ಒಂದೇ ಸಮನೆ ‘ದೂರು’ವಾಣಿ ಕರೆಗಳು ಬರಲು ಪ್ರಾರಂಭಿಸಿವೆ. ಇದರಿಂದ ಕಿರಿಕಿರಿಗೆ ಒಳಗಾದ ಅವರು ತಮ್ಮ ಫೇಸ್​ಬುಕ್​ ಗೋಡೆಯ ಮೇಲೆ ತಮಗೂ ಹಾಗೂ ರೇಖಾಚಿತ್ರಕ್ಕೂ ಸಂಭಂದವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಭಾಕರ್​ ಕೂಡ ಹಣೆಗೆ ತಿಲಕ ಇಡುತ್ತಾರೆ. ಇದರಿಂದಾಗಿಯೇ ರೇಖಾಚಿತ್ರಕ್ಕೂ ಹಾಗೂ ಅವರಿಗೂ ಸಾಮ್ಯತೆ ಕಂಡುಬಂದಿದೆ.

About the author

ಕನ್ನಡ ಟುಡೆ

Leave a Comment