ರಾಜ್ಯ ಸುದ್ದಿ

ಲಿಂಗಸುಗೂರು : ಎ ಪಿ ಎಮ್ ಸಿ ಯಾರ್ಡ್ ನಲ್ಲಿ ಸರಣಿ ಕಳ್ಳತನ

ಲಿಂಗಸುಗೂರು : ಪಟ್ಟಣದ ಎ ಪಿ ಎಮ್ ಸಿ ಯಾರ್ಡ್ ನಲ್ಲಿ ನಿನ್ನೆ ನಸುಕಿನಲ್ಲಿ ಒಂಭತ್ತು ದಲ್ಲಾಳಿ ಅಂಗಡಿಗಳ ಶೆಟರ್ಸ್ ಮುರಿದ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಅಮರದೀಪ ಟ್ರೇಡಿಂಗ್ ಕಂ, ಮೂರುಗುಡಿ ಬಸವೇಶ್ವರ ಟ್ರೇಡಿಂಗ್ ಕಂ, ಮಲ್ಲಿಕಾರ್ಜುನ ಟ್ರೇಡಿಂಗ್ ಕಂ, ಸಿದ್ಧಲಿಂಗೇಶ್ವರ ಟ್ರೇಡಿಂಗ್ ಕಂ, ನಾಗರಾಜ ಟ್ರೇಡಿಂಗ್ ಕಂ, ಗುರು ವೀರೇಶ್ವರ ಟ್ರೇಡಿಂಗ್ ಕಂ, ಶಂಕರ ಟ್ರೇಡಿಂಗ್ ಕಂ, ಸುರೇಶ ಟ್ರೇಡಿಂಗ್ ಕಂ, ಸೂಗುರೇಶ್ವರ ಟ್ರೇಡಿಂಗ್ ಕಂ, ಈ ಅಂಗಡಿಗಳಲ್ಲಿ ನುಗ್ಗಿದ ಕಳ್ಳರು ಸಿಕ್ಕ ದುಡ್ಡನ್ನು ಬಾಚಿ ಪರಾರಿಯಾಗಿದ್ದಾರೆ. ಡಿವೈಎಸ್ಪಿ ಶರಣಪ್ಪ ಸುಬೇದಾರ,  ಸಿಪಿಐ ವಿ ಎಸ್ ಹಿರೇಮಠ, ಪಿಎಸ್ಐ ದಾದಾವಲಿ ಜೊತೆಗೆ ಬೆರಳಚ್ಚು ತಜ್ಞರು ಮತ್ತು ಶ್ವಾನದಳದವರು ಆಗಮಿಸಿ ಪರಿಶೀಲನೆ ನಡೆಸಿದರು. ವರ್ತಕರ ಒತ್ತಾಯ: ಇದೇ ಸಂದರ್ಭದಲ್ಲಿ  ನಿತ್ಯವೂ ನೂರಾರು ವಾಹನ, ವ್ಯಾಪಾರಸ್ಥರು ಮತ್ತು ರೈತರು ವ್ಯವಹಾರ ಮಾಡುವ ಈ  ಎ ಪಿ ಎಮ್ ಸಿ ಯಲ್ಲಿ ಸಜ್ಜಿತ ಕಾಂಪೌಂಡ್,   ಸಿ ಸಿ ಕ್ಯಾಮೆರಾ, ವಾಚ್ ಮನ್ ಗಳ ನೇಮಕ, ಸುರಕ್ಷಿತ  ವ್ಯವಸ್ಥೆಗೆ ಒತ್ತಾಯಿಸಿದರು.

About the author

ಕನ್ನಡ ಟುಡೆ

Leave a Comment