ರಾಷ್ಟ್ರ

ಏಕಕಾಲ ಚುನಾವಣೆಗೆ ಕಾನೂನು ಆಯೋಗ ಬೆಂಬಲ

ಬೆಂಗಳೂರು : ಸರ್ಕಾರದ ಅತ್ಯುನ್ನತ ಕಾನೂನು ಸಲಹಾ ಸಂಸ್ಥೆ ಭಾರತೀಯ ಕಾನೂನು ಆಯೋಗ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವಂತೆ ಶಿಫಾರಸುಮಾಡಿದೆ. ಈ ಸಂಬಂಧ ಕರಡು ಪ್ರತಿಯನ್ನು ಕೂಡ ಅದು ಬಿಡುಗಡೆ ಮಾಡಿದೆ.ಸುಪ್ರೀಂಕೋರ್ಟ್‌ನ – ನಿವೃತ್ತ ನ್ಯಾಯಮೂರ್ತಿ ಚೌಹಾನ್ ನೇತೃತ್ವದ ಸಮಿತಿ ಈ ಸಂಬಂಧ ರಾಜಕೀಯ ಪಕ್ಷಗಳು ಸೇರಿದಂತೆ ಸಂಬಂಧಿತರ ಅಭಿಪ್ರಾಯಗಳನ್ನು ಸಂಗ್ರಹಿಸಲು ನಿರ್ಧರಿಸಿದೆ.ಭಾರತಕ್ಕೆ ಸ್ವಾತಂತ್ರ್ಯಸಿಕ್ಕಿದ ಬಳಿಕ ಎರಡು ದಶಕಗಳ ಕಾಲ ಅಂದರೆ 1967ರ ತನಕ ದೇಶದಲ್ಲಿ ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲಾಗಿತ್ತು ಎಂಬುದನ್ನು ಆಯೋಗ ಉಲ್ಲೇಖಿಸಿದೆ.

1968 ರಲ್ಲಿ ಕೆಲವು ವಿಧಾನಸಭೆಗಳ ವಿಸರ್ಜನೆ ಹಾಗೂ 1969ರಲ್ಲಿ ಲೋಕಸಭೆ ವಿಸರ್ಜನೆಯಿಂದಾಗಿ ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಕ್ರಿಯೆಗೆ ತೊಡಕಾಯಿತು.ಆದರೆ, ಪ್ರಜಾಪ್ರಾತಿನಿಧ್ಯ ಕಾಯ್ದೆ 1951ಹಾಗೂ ಲೋಕಸಭೆ, ರಾಜ್ಯ ವಿಧಾನಸಭಾ ಕಲಾಪಗಳ ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ಏಕಕಾಲದಲ್ಲಿ ಚುನಾವಣೆ ನಡೆಸಬಹುದು ಎಂದು ಸಲಹೆ ನೀಡಿದೆ. ಬಹುಮತ ಹೊಂದಿರುವ ಪಕ್ಷದ ನಾಯಕನನ್ನು ಮುಖ್ಯಮಂತ್ರಿ ಅಥವಾ ಪ್ರಧಾನಿಯಾಗಿ ಆಯ್ಕೆ ಮಾಡಬೇಕು. ಒಂದು ವೇಳೆ ಸರ್ಕಾರ ಅವಧಿ ಮುಗಿಯುವ ಮುನ್ನವೇ ಪತನವಾದರೆ ಹೊಸ ಸರ್ಕಾರ ಉಳಿದ ಅವಧಿಗಷ್ಟೇ ಅಧಿಕಾರದಲ್ಲಿರಬೇಕು ಎಂಬುದು ಆಯೋಗದ ಪ್ರಮುಖ ಶಿಫಾರಸು.ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದರೆ ವಿಶ್ವಾಸ – ಗೊತ್ತುವಳಿ ಮಂಡನೆಗೂ ಅವಕಾಶಕಲ್ಪಿಸಬೇಕು ಎಂದು ಅದು ಅಭಿಪ್ರಾಯಪಟ್ಟಿದೆ.

About the author

ಕನ್ನಡ ಟುಡೆ

Leave a Comment