ಆಹಾರ

ಏನಿದು ಇಂದಿರಾ ಕ್ಯಾಂಟೀನ್ ಯೋಜನೆ?

ಬೆಂಗಳೂರ; ಸರ್ಕಾರ ರಾಜ್ಯದ ಜನರನ್ನು ಹಸಿವು ಮುಕ್ತಗೊಳಿಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅನ್ನಭಾಗ್ಯ ಯೋಜನೆ ಬರಗಾಲದಲ್ಲೂ  ಜನರು ಹಸಿವಿನಿಂದ ನರಳದಂತೆ ಮಾಡಿದೆ. ಈಗ ಇದೇ ನಿಟ್ಟಿನಲ್ಲಿ ಕರ್ನಾಟಕವನ್ನು ಹಸಿವು ಮುಕ್ತಗೊಳಿಸಲು ಸರ್ಕಾರ ಜನ ಸಾಮಾನ್ಯರಿಗೆ ಕಡಿಮೆ ದರದಲ್ಲಿ ತಿಂಡಿ ಮತ್ತು ಊಟ ಪೂರೈಸುವ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಬಜೆಟ್ ನಲ್ಲಿ ಘೋಷಿಸಿದೆ.

04467b61-bd57-45e0-a963-50649f9d87c5

ರಾಜ್ಯ ಸರ್ಕಾರ ಪ್ರಾಯೋಗಿಕ ಹಂತವಾಗಿ ಯೋಜನೆಯನ್ನು ಬೆಂಗಳೂರು ನಗರದಲ್ಲಿ  ಜಾರಿಗೆ ತಂದಿದೆ. ಬಡಜನರ ಅನುಕೂಲಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿಯ ಬಜೆಟ್ ನಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಘೋಷಿಸಿದ್ದರು. ಬೃಹತ್ ಬೆಂಗಳೂರು ಮಹಾ ನಗರಪಾಲಿಕೆ ಪ್ರಥಮ ಹಂತದಲ್ಲಿ ಎಲ್ಲಾ ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟೀನ್ ಅನ್ನು ಆರಂಭಿಸುತ್ತಿದೆ.

ಎಲ್ಲೆಲ್ಲಿ?:

‘ಇಂದಿರಾ ಕ್ಯಾಂಟೀನ್’ ಆಗಸ್ಟ್ 15ರಿಂದ ಆರಂಭವಾಗಲಿದ್ದು. ಬೆಂಗಳೂರಿನ ಎಲ್ಲಾ 198 ವಾರ್ಡ್ ಗಳಲ್ಲಿ ಏಕ ಕಾಲಕ್ಕೆ ಇಂದಿರಾ ಕ್ಯಾಂಟೀನ್ ಆರಂಭಿಸುವಂತೆ ಬಿಬಿಎಂಪಿಗೆ ಸೂಚಿಸಲಾಗಿದೆ. ಅಲ್ಲದೆ ಆಹಾರದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ  ಎಂದು ಸ್ಷಷ್ಟನೆ ನೀಡಿದೆ.

ಇಂದಿರಾ ಕ್ಯಾಂಟೀನ್ ಯೋಜನೆಯನ್ನು ತೆರೆಯಲು ಸಮಿತಿಗಳನ್ನು ರಚಿಸಲಾಗಿದ್ದು ಎಲ್ಲಾ ವಾರ್ಡ್ ಗಳಲ್ಲಿ ಎರಡರಿಂದ ಮೂರು ಜಾಗಗಳನ್ನು ಗುರುತಿಸಲಾಗಿದೆ. 140 ವಾರ್ಡ್ ಗಳಲ್ಲಿ ಕ್ಯಾಂಟೀನ್ ಗಾಗಿ ಜಾಗವನ್ನು ಈಗಾಗಲೇ  ಅಳವಡಿಸಲಾಗಿದೆ.

ನಿರ್ವಹಣೆ ಹೇಗೆ? :

ee1f9992-e966-4f12-8002-01b39c646239

ಕೇಂದ್ರಿಕೃತ ಅಡುಗೆ ಮನೆ ಮೂಲಕ ಇಂದಿರಾ ಕ್ಯಾಂಟೀನ್ ಗಳಿಗೆ ಆಹಾರ ಪೂರೈಸಲಾಗುತ್ತದೆ. ಮತ್ತು  ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ಅಡುಗೆ ಮನೆ ನಿರ್ಮಿಸುವುದು .ಪ್ರತಿ ಇಂದಿರಾ ಕ್ಯಾಂಟೀನ್ ಗೆ 32 ಲಕ್ಷ ರುಪಾಯಿ ವೆಚ್ಚವಾಗುತ್ತಿದ್ದು, ಲ್ಯಾಂಡ್ ಆರ್ಮಿಯಿಂದ ಕಟ್ಟಡ ನಿರ್ಮಿಸಲಾಗುವುದು. ಸುಮಾರು 33ರಷ್ಟು ಅಡುಗೆ ಕೋಣೆಗಳನ್ನು ಸ್ರ್ತೀ ಶಕ್ತಿ ಸಂಘಗಳಿಗೆ ವಹಿಸಲು ನಿರ್ಧರಿಸಲಾಗಿದೆ. ಜೊತೆಗೆ 199 ಕ್ಯಾಂಟೀನ್ ಗಳನ್ನುನೋಡಿಕೊಳ್ಳಲು ಉನ್ನತ ಅಧಿಕಾರಿ ಸಮಿತಿ ನೇಮಕ ಮಾಡಲಾಗಿದೆ.

ಕ್ಯಾಂಟೀನ್ ನ ಲಾಂಛನ ಮತ್ತು ಕ್ಯಾಂಟೀನ್ ಒಳಾಂಗಣ ವಾಸ್ತು ಶಿಲ್ಪ ವಿನ್ಯಾಸ ರೂಪಿಸಿ ಕಳುಹಿಸುವಂತೆ ಬಿಬಿಎಂಪಿ ಸಾರ್ವಜನಿಕರಿಗೆ ಮನವಿ ಮಾಡಿತ್ತು.

ಸಮಿತಿ ರಚನೆ:

ಇದರ ಒಟ್ಟು ವೆಚ್ಚ 15 ಕೋಟಿ ರು.ಗಳು

ವಿಚಾರಗಳ ಬಗ್ಗೆ ಚರ್ಚಿಸಿ ತೀರ್ಮಾಣ ಕೈಗೊಳ್ಳಲು ಸಮಿತಿಯನ್ನು ಈಗಾಗಲೇ ರಚಿಸಲಾಗಿದೆ. ಸಮಿತಿಯ ಅಧ್ಯಕ್ಷತೆಯನ್ನು ಸಚಿವ ಜಾರ್ಜ್ ಅವರಿಗೆ ವಹಿಸಲಾಗಿದೆ. ಸಮಿತಿಯಲ್ಲಿ  ಬಿಬಿಎಂಪಿ ಮೇಯರ್, ಉಪ ಮೇಯರ್, ಆಯುಕ್ತರು, ಆಹಾರ ಸಚಿವರು, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳು  ಜೊತೆ ಇರುತ್ತಾರೆ.

ಮೆನು ಏನು?

21019287-44cc-4873-9ef5-0e887760ade7

ಇಂದಿರಾ ಕ್ಯಾಂಟೀನ್ ಯೋಜನೆಯಡಿಯಲ್ಲಿ ಮೂರು ಹೊತ್ತು ಊಟ ತಿಂಡಿ ನೀಡಲಾಗುತ್ತದೆ. 5 ರೂಪಾಯಿಗೆ ತಿಂಡಿ ಹಾಗೂ 10 ರೂಪಾಯಿಗೆ ಊಟ ನೀಡಲಾಗುತ್ತದೆ. ಇದಕ್ಕಾಗಿ ಮೆನು ಕೂಡ ತಯಾರಾಗಿದ್ದು ಮೆನು ಹೀಗಿದೆ.

ಬೆಳಗ್ಗಿನ ಉಪಹಾರ ಇಡ್ಲಿ ಸಾಂಬಾರ್, ರೈಸ್ ಬಾತ್,ಅವಲಕ್ಕಿ ಉಪ್ಪಿಟ್ಟು, ಖಾರ ಉಪ್ಪಿಟ್ಟು ಖಾರ ಪೊಂಗಲ್, (ವಾರದಲ್ಲಿ ಒಂದರಂತೆ,).ಮಧ್ಯಾಹ್ನ  ಮತ್ತು ರಾತ್ರಿ  ಊಟ ಅನ್ನ ಸಾರು, ಉಪ್ಪಿನಕಾಯಿ, ಹಪ್ಪಳ. ಭಾನುವಾರ ಬಿಸಿಬೇಲೆ ಬಾತ್, ತರಕಾರಿ, ಅನ್ನ, ಪುಳಿಯೊಗರೆ ಜೀರಿಗೆ ಅನ್ನ (ಪ್ರತೀ ವಾರದಲ್ಲಿ ಒಂದು).

ಜನರ ಅನುಕೂಲಕ್ಕಾಗಿ ಸರ್ಕಾರ ಜಾರಿಗೆ  ತಂದಿರುವ ಇಂದಿರಾ ಕ್ಯಾಂಟೀನ್ ಯೋಜನೆ ಬೆಂಗಳೂರಿನಲ್ಲಿ ಅದರ ಯಶಸ್ಸು ಆಧರಿಸಿ ಮುಂದಿನ ದಿನಗಳಲ್ಲಿ ಈ ಸೌಲಭ್ಯವನ್ನು ರಾಜ್ಯದಾದ್ಯಂತ ವಿಸ್ತರಿಸಬೇಕೆನ್ನುವುದು ಸರ್ಕಾರದ ಯೋಚನೆಯಾಗಿದೆ.

About the author

ಕನ್ನಡ ಟುಡೆ

Leave a Comment