ಸುದ್ದಿ

ಏರ್ಟೆಲ್ ಹೊಸ ಆಫರ್ ; ಜಿಯೋಗೆ ಸೆಡ್ಡು

ಏರ್ಟೆಲ್ ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ ಹೊಸದೊಂದು ಕೊಡುಗೆಯನ್ನು ಘೋಷಿಸಿದೆ. ಈ ಕೊಡುಗೆ ರಿಲಯನ್ಸ್ ಜಿಯೋನ ರೂ.399 ಪ್ಲಾನ್ ನಂತೆಯೇ ಇದೆ. ರೂ.399 ರ ಪ್ಲಾನ್ ರೀಚಾರ್ಜ್ ಮಾಡಿಕೊಂಡಲ್ಲಿ ಏರ್ ಟೆಲ್ ಗ್ರಾಹಕರು ಪ್ರತಿ ದಿನ 1 ಜಿಬಿ ಡಾಟಾ ದಂತೆ 84 ದಿನಗಳ ಕಾಲ ಇದರ ಪ್ರಯೋಜನವನ್ನು ಪಡೆಯಬಹುದು.

ಈ ಕೊಡುಗೆ ಕೇವಲ 4ಜಿ ಸಿಮ್ ಬಳಸುತ್ತಿರುವವರಿಗೆ ಅನ್ವಯವಾಗುತ್ತವೆ. ಡಾಟಾ ಜೊತೆಗೆ ಯಾವುದೇ ನೆಟ್ವರ್ಕ್ ಗೆ ಉಚಿತ ಅನಿಯಮಿತ ಕರೆ ಮಾಡಬಹುದು.
ಅಷ್ಟೇ ಅಲ್ಲದೆ ಮತ್ತೊಂದು ಪ್ಲಾನ್ ಕೂಡಾ ಇದೆ. ರೂ.244 ರೀಚಾರ್ಜ್ ಮಾಡಿಕೊಂಡರೆ 70 ದಿನಗಳ ಕಾಲ ಪ್ರತಿದಿನ 1 ಜಿಬಿ ಡಾಟಾ ನೀಡುವುದಾಗಿ ಹೇಳಿದೆ. ಈ ಕೊಡುಗೆಯಡಿ ಕೇವಲ ಏರ್ಟೆಲ್ ನಿಂದ ಏರ್ಟೆಲ್ ಗ್ರಾಹಕರಿಗೆ ಮಾತ್ರ ಉಚಿತ ಕರೆ ಮಾಡಿಕೊಳ್ಳಬಹುದು.

About the author

ಕನ್ನಡ ಟುಡೆ

Leave a Comment