ರಾಷ್ಟ್ರ ಸುದ್ದಿ

ಏರ್​ಸೆಲ್ ಮ್ಯಾಕ್ಸಿಸ್​ ಹಗರಣ: ಚಿದಂಬರಂ, ಪುತ್ರ ಕಾರ್ತಿಗೆ ಜ.11ರ ವರೆಗೆ ಮಧ್ಯಂತರ ರಕ್ಷಣೆ

ನವದೆಹಲಿ: ಏರ್​ಸೆಲ್​ ಮ್ಯಾಕ್ಸಿಸ್​ ಹಗರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಹಾಗೂ ಅವರ ಮಗ ಕಾರ್ತಿಯವರಿಗೆ ಮಧ್ಯಂತರ ರಕ್ಷಣಾ ಅವಧಿಯನ್ನು 2019ರ ಜನವರಿ 11ರವರೆಗೆ ವಿಸ್ತರಿಸಿ ದೆಹಲಿಯ ಪಟಿಯಾಲ ಹೌಸ್​ ನ್ಯಾಯಾಲಯ ಆದೇಶ ನೀಡಿದೆ.

ಕೋರ್ಟ್​ನ ಈ ಆದೇಶದ ಅನ್ವಯ ಏರ್​ಸೆಲ್ ಮ್ಯಾಕ್ಸಿಸ್​ ಹಗರಣದಲ್ಲಿ ಆರೋಪಿ ನಂ.1 ಆಗಿರುವ ಚಿದಂಬರಂ ಮತ್ತು ಅವರ ಪುತ್ರ ಕಾರ್ತಿಯವರನ್ನು ಜ.11ವರೆಗೆ ಬಂಧಿಸುವಂತಿಲ್ಲ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೂ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು ಅವುಗಳನ್ನು ಸರಿಯಾಗಿ ಗಮನಿಸಬೇಕು ಎಂದು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ (ಇ.ಡಿ.) ಮನವಿ ಸಲ್ಲಿಸಿದ ನಂತರ ನ್ಯಾಯಾಲಯ ಈ ಆದೇಶ ನೀಡಿದೆ.

ಏರ್​ಸೆಲ್-ಮ್ಯಾಕ್ಸಿಸ್​ ಹಗರಣದ ಕುರಿತು ಮಾಜಿ ಸಚಿವ ಚಿದಂಬರಂ ಅವರನ್ನು ವಿಚಾರಣೆ ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ನ.26ರಂದು ಪಟಿಯಾಲ ನ್ಯಾಯಾಲಯಕ್ಕೆ ಸಿಬಿಐ ತಿಳಿಸಿತ್ತು. ಕೇಂದ್ರ ತನಿಖಾ ದಳಮಾಡಿರುವ ಎಲ್ಲ ಆಪಾದನೆಗಳನ್ನೂ ಚಿದಂಬರಂ ನಿರಾಕರಿಸಿದ್ದಾರೆ.

About the author

ಕನ್ನಡ ಟುಡೆ

Leave a Comment