ರಾಷ್ಟ್ರ ಸುದ್ದಿ

ಏರ್ ಸ್ಟ್ರೈಕ್ ಮಿಲಿಟರಿ ಕಾರ್ಯಾಚರಣೆಯಲ್ಲ, ನಾಗರಿಕರಿಗೆ ಯಾವುದೇ ಹಾನಿ ಆಗಿಲ್ಲ: ನಿರ್ಮಲಾ ಸೀತಾರಾಮನ್

ನವದೆಹಲಿ: ಕಳೆದ ವಾರ ಜೈಷ್ – ಇ- ಮೊಹಮ್ಮದ್ ಉಗ್ರರ ಅಡಗು ತಾಣಗಳನ್ನು ಗುರಿಯಾಗಿರಿಸಿ ಭಾರತೀಯ ವಾಯುಪಡೆ ನಡೆಸಿದ ಬಾಲಕೋಟ್ ಎರ್ ಸ್ಟ್ರೈಕ್  ಮಿಲಿಟರಿ ಕಾರ್ಯಾಚರಣೆ ಅಲ್ಲ, ಹೀಗಾಗಿ ಯಾವುದೇ ನಾಗರಿಕರಿಗೂ ಏನು ತೊಂದರೆಯಾಗಲಿಲ್ಲ ಎಂದು ರಕ್ಷಣೆ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ, ವಾಯುದಾಳಿ ಕುರಿತಂತೆ  ಕೇವಲ ಹೇಳಿಕೆ ಮಾತ್ರ ನೀಡಿದ್ದಾರೆ. ಆದರೆ, ದಾಳಿಯಿಂದಾದ ಹಾನಿ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ, ಅದು ಸರ್ಕಾರದ ಸ್ಥಿತಿಯಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.ಬಾಲಕೋಟ್ ನಲ್ಲಿ  ಜೈಷ್- ಇ- ಮೊಹಮ್ಮದ್ ಕ್ಯಾಂಪಿನ ಮೇಲೆ ನಡೆಸಿರುವ ದಾಳಿ ಮಿಲಿಟರಿಯೇತರ ದಾಳಿ ಆಗಿದೆ ಎಂದು ಗೋಖಲೆ ಕಳೆದ ಗುರುವಾರ ಹೇಳಿಕೆ ನೀಡಿದ್ದರು.ವಾಯುಪಡೆಯಿಂದಾದ ಸಾವಿನ ಸಂಖ್ಯೆ ಬಗ್ಗೆ ಮಾಹಿತಿ ನೀಡುವಂತೆ ಪ್ರತಿಪಕ್ಷಗಳು ಒತ್ತಾಯಿಸುತ್ತಿರುವ ಬೆನ್ನಲ್ಲೇ ನಿರ್ಮಲಾ ಸೀತಾರಾಮನ್  ಈ ಹೇಳಿಕೆ ನೀಡಿದ್ದಾರೆ.ವಾಯುಪಡೆಯ ವಾಯುದಾಳಿಯನ್ನು ಮುಂಬರುವ ಲೋಕಸಭಾ ಚುನಾವಣೆಯೊಂದಿಗೆ ಸೇರಿಸಿ ಮಾತನಾಡುವುದು ಸರಿಯಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾ

About the author

ಕನ್ನಡ ಟುಡೆ

Leave a Comment