ರಾಷ್ಟ್ರ ಸುದ್ದಿ

ಏಳು ದಿನ ಆಹಾರ, ನೀರು ತ್ಯಜಿಸಿ ಸಲ್ಲೇಖನ ಸಮಾಧಿ ಹೊಂದಿದ ಜೈನ ಮಹಿಳೆ

ವೆಲ್ಲೂರು(ತಮಿಳುನಾಡು): 72 ವರ್ಷದ ಜೈನ ಮಹಿಳೆಯೊಬ್ಬರು ಗುರುವಾರ ಸಂಜೆ ಸಲ್ಲೇಖನ ಸಮಾಧಿಯನ್ನು ಹೊಂದಿದ್ದಾರೆ. ಸಲ್ಲೇಖನ ವ್ರತ ಕೈಗೊಂಡು ಏಳು ದಿನಗಳ ಬಳಿಕ ಅವರು ಈ ಭೂಮಿಯನ್ನು ಬಿಟ್ಟು ಹೊರಟಿದ್ದಾರೆ.
ರಾಜಸ್ಥಾನದಿಂಡ ಬಂದಿದ್ದ ಶ್ರೀ ಸುಗುಂತನ್ಮತಿ ಮಾತಾಜಿ ಫೆಬ್ರವರಿ 1ರಿಂದ ಸಲ್ಲೇಖನ ವ್ರತ ಪ್ರಾರಂಭಿಸಿದ್ದರು.ತಿರುವಣ್ಣಾಮಲೈ ಜಿಲ್ಲೆಯ ತಿರುಮಲೈ ಅರುಣಿ ಎಂಬಲಿನ ಅರಿಹಂತಗಿರಿ ದಿಗಂಬರ ಜೈನ ಮಠದಲ್ಲಿ ಆಕೆ ಉಪವಾಸ ವ್ರತ ಪ್ರಾರಂಭಿಸಿದ್ದರು. ಏಳು ದಿನಗಳ ಖಾಲ ಅನ್ನ, ಆಹಾರ, ನೀರನ್ನು ಸೇವಿಸದೆ ಇದ್ದ ಆಕೆ ಗುರುವಾರ ಸಂಜೆ ಸಲ್ಲೇಖನ ಸಮಾಧಿಯಾಗಿದ್ದಾರೆ.
ಆಕೆಯ ಪರೀಕ್ಷೆ ನಡೆಸಲು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವೈದ್ಯರನ್ನು ಕರೆಸಲಾಗಿ ಆಕೆಯ ದೇಹದ ಪ್ರಮುಖ ಅಂಗಗಳ ಕಾರ್ಯವು ಸ್ಥಗಿತವಾಗಿರುವುದನ್ನು ಅವರು ಘೋಷಿಸಿದ್ದಾರೆ. ಮತ್ತು ಆ ಕಾರಣಕ್ಕೆ ಆಕೆ ಮರಣಿಸಿದರೆಂದು ವೈದ್ಯರು ಹೇಳಿದ್ದಾರೆ. ಮೃತರ ಪಾರ್ಥಿವ ಶರೀರಕ್ಕೆ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳಿಂದ ಪೂಜಿಸಿ ಬಳಿಕ ಸಮಾಧಿ ಮಾಡಲಾಗಿದೆ.

About the author

ಕನ್ನಡ ಟುಡೆ

Leave a Comment