ಕ್ರೀಡೆ

ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಸ್ವಪ್ನಾ ಬರ್ಮಾನ್ ಗೆ ಏಳು ಜೊತೆ ಮಾರ್ಪಡಿಸಿದ್ದ ಶೂ

ನವದೆಹಲಿ: ಏಷ್ಯನ್  ಗೇಮ್ಸ್ ಚಿನ್ನದ ಪದಕ ವಿಜೇತೆ ಸ್ವಪ್ನಾ ಬರ್ಮನ್  ಹೆಪ್ಟಾಥೊಲಾನ್ ಕ್ರೀಡೆಯ ಎಲ್ಲಾ ಏಳು ವಿಭಾಗಗಳಿಗೂ ಬಳಸುವಂತಹ ಬೇರೆ ಬೇರೆಯಾದ ಏಳು ಜೊತೆಯ ಮಾರ್ಪಡಿಸಿದ  ಶೂಗಳನ್ನು ಪಡೆಯಲಿದ್ದಾರೆ ಎಂದು ಕ್ರೀಡಾ ಉಪಕರಣಗಳ ದೈತ್ಯ ಕಂಪನಿ ಅಡಿದಾಸ್  ಇಂದು ತಿಳಿಸಿದೆ. ಈ ವರ್ಷದ ಆರಂಭದಲ್ಲಿ ಇಂಡೊನೇಷ್ಯಾದಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಹೆಪ್ಟಾತೊಲನ್ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಚಿನ್ನ ಪಡೆದಿದ್ದ  ಸ್ವಪ್ನ ಬರ್ಮಾನ್ ಗೆ ಹುಟ್ಟಿನಿಂದಲೂ  ಕಾಲಿನಲ್ಲಿ ಆರು ಬೆರಳುಗಳಿವೆ.

ಜಕಾರ್ತ್ ನಲ್ಲಿ ಚಿನ್ನದ ಪದಕ ಪಡೆದ ನಂತರ ಆಕೆ ಪಡುತ್ತಿದ್ದ ಸಮಸ್ಯೆ ಬೆಳಕಿಗೆ ಬಂದಿತ್ತು. ಈ ಸಮಸ್ಯೆ ಪರಿಹಾರಕ್ಕಾಗಿ ಅಡಿದಾಸ್ ಕಂಪನಿ ಭಾರತದ ಕ್ರೀಡಾ ಪ್ರಾಧಿಕಾರ ಮತ್ತು  ಜರ್ಮನಿಯಲ್ಲಿರುವ  ಕ್ರೀಡಾ ಸೇವೆ ಪ್ರಾಯೋಗಲದ ಪ್ರಧಾನಿ ಕಚೇರಿಯಲ್ಲಿ ತೀವ್ರ ರೀತಿಯ ಕಾರ್ಯನಿರ್ವಹಿಸಿತ್ತು ಎಂದು ಮಾಧ್ಯಮ ಹೇಳಿಕೆಯಿಂದ ತಿಳಿದುಬಂದಿದೆ. ಅಡಿದಾಸ್  ನಿರಂತರ ಬೆಂಬಲದೊಂದಿಗೆ ಹೊಸ ಶೂನಲ್ಲಿ ಕ್ರೀಡೆಯಲ್ಲಿ ಸ್ಪರ್ಧಿಸಲು ತರಬೇತಿ ನಡೆಸುತ್ತಿದ್ದೇನೆ.  ಮುಂದಿನ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಚಿನ್ನ ತರುವುದೇ ತಮ್ಮ ಗುರಿಯಾಗಿದೆ ಎಂದು ಸ್ವಪ್ನಾ ಬರ್ಮಾನ್ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment