ಕ್ರೀಡೆ

ಏಷ್ಯಾ ಕಪ್ 2018: ಭಾರತ- ಅಪ್ಘಾನಿಸ್ತಾನ ನಡುವಿನ ಪಂದ್ಯ ಟೈ ನಲ್ಲಿ ಅಂತ್ಯ

ದುಬೈ: ಯುಎಇ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಏಷ್ಯಾ ಕ್ರಿಕೆಟ್ ಪಂದ್ಯಾವಳಿಯ ಸೂಪರ್ ನಾಲ್ಕು ಪಂದ್ಯದಲ್ಲಿ  ಭಾರತ- ಅಪ್ಘಾನಿಸ್ತಾನ ನಡುವಿನ ಪಂದ್ಯ ಟೈ ನಲ್ಲಿ ಅಂತ್ಯಗೊಂಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಪ್ರಾರಂಭಿಸಿದ ಅಫ್ಘಾನ್ ಪರ ಮೊಹಮ್ಮದ್ ಶೆಹ್ಜಾದ್ ಅದ್ಭುತ ಶತಕ (124) ಮೊಹಮ್ಮದ್ ನಬಿ ಅರ್ಧಶತಕ, (64) ಗಳಿಸಿ ದಾಖಲಿಸಿ ತಂಡವು ನಿಗದಿತ 50 ಓವರ್ ಗಳಲ್ಲಿ  8 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಲು ನೆರವಾದರು. ಈ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ  49.5 ಓವರ್ ಗಳಲ್ಲಿ  10 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿತು.ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಮಹೇಂದ್ರ ಸಿಂಗ್ ದೋನಿ ತಂಡವನ್ನು ಮುನ್ನಡೆಸಿದರು. ಭಾರತ ಪರ ಕೆ. ಎಲ್. ರಾಹುಲ್ 60, ಅಂಬಟ್ಟಿ ರಾಯುಡು 57, ದಿನೇಶ್ ಕಾರ್ತಿಕ್ 44 ರನ್ ಗಳಿಸಿದರು. ನಾಯಕ ದೋನಿ 8 ರನ್ ಗಳಿಸಿ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

About the author

ಕನ್ನಡ ಟುಡೆ

Leave a Comment