ಸಿನಿ ಸಮಾಚಾರ

ಐಂದ್ರಿತಾ ರೇ, ದಿಗಂತ್‌ಗೆ ಇಂದು ಅರಿಶಿಣ ಶಾಸ್ತ್ರ; ನಿಸರ್ಗದ ಮಡಿಲಲ್ಲಿ ಮದುವೆ

ಮತ್ತೊಂದು ತಾರಾ ಜೋಡಿಯ ಮದುವೆಗೆ ಸಾಕ್ಷಿಯಾಗುತ್ತಿದೆ ಸ್ಯಾಂಡಲ್‌ವುಡ್‌. ಈಗಾಗಲೇ ಸಿಂಪಲ್‌ ಆಗಿ ನಿಶ್ಚಿತಾರ್ಥ ಮುಗಿಸಿರುವ ಐಂದ್ರಿತಾ ರೇ ಮತ್ತು ದಿಗಂತ್‌, ಮದುವೆಯನ್ನೂ ಅಷ್ಟೇ ಸರಳವಾಗಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಬೆಂಗಳೂರಿನ ನಂದಿಬೆಟ್ಟದ ಹತ್ತಿರವಿರುವ ಖಾಸಗಿ ರೆಸಾರ್ಟ್‌ನಲ್ಲಿ ಇವರ ವಿವಾಹ ನಡೆಯಲಿದೆ.

‘ನಾನು ಮತ್ತು ದಿಗಂತ್‌ ಸಿಂಪಲ್‌ ಆಗಿ ಬದುಕುವುದಕ್ಕೆ ಇಷ್ಟಪಡುವವರು. ಆದಷ್ಟು ನಿಸರ್ಗಕ್ಕೆ ತೊಂದರೆ ಆಗದೇ ಇರುವ ರೀತಿಯಲ್ಲಿ ಜೀವನ ನಡೆಸುತ್ತಿದ್ದೇವೆ. ಮದುವೆ ಕೂಡ ಹಾಗೆಯೇ ಇರಬೇಕು ಎಂಬ ಆಸೆ ನಮ್ಮದು. ಹಾಗಾಗಿ ನಿಸರ್ಗದ ಮಧ್ಯೆಯೇ ಸತಿಪತಿಗಳಾಗುತ್ತಿದ್ದೇವೆ. ಖಾಸಗಿಯಾಗಿ ಇರಲಿ ಎನ್ನುವ ಕಾರಣಕ್ಕಾಗಿ ರೆಸಾರ್ಟ್‌ ಬುಕ್‌ ಮಾಡಿದ್ದೇವೆ. ಆದರೆ, ಮದುವೆ ಮಾತ್ರ ಇಕೋ ಫ್ರೆಂಡ್ಲಿಯಾಗಿಯೇ ಇರುತ್ತದೆ’ ಎಂದರು ಐಂದ್ರಿತಾ ರೇ. ಎರಡು ದಿನಗಳ ಕಾಲ ನಡೆಯಲಿರುವ ವಿವಾಹ ಮಹೋತ್ಸವ ವಿಭಿನ್ನತೆಯಿಂದ ಕೂಡಿದ್ದು, ಎರಡೂ ಕುಟುಂಬದ ಸದಸ್ಯರು ಮತ್ತು ಆತ್ಮೀಯ ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ವಿವಿಧ ದೇಶಗಳಲ್ಲಿರುವ ಐಂದ್ರಿತಾ ಸ್ನೇಹಿತೆಯರು ಕೂಡ ಮದುವೆ ಆಗಮಿಸುತ್ತಿದ್ದಾರೆ.

About the author

ಕನ್ನಡ ಟುಡೆ

Leave a Comment