ರಾಷ್ಟ್ರ ಸುದ್ದಿ

ಐಆರ್ ಸಿಟಿಸಿ ಹಗರಣ: ಮಾಜಿ ಸಿಎಂ ಲಾಲೂ ಪತ್ನಿ ರಾಬ್ರಿ ದೇವಿ, ಪುತ್ರ ತೇಜಸ್ವಿ ಗೆ ಬೇಲ್

ದೆಹಲಿ: ಐಆರ್ ಸಿಟಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ  ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್, ಪತ್ನಿ ರಾಬ್ರಿ ದೇವಿ ಹಾಗೂ ಪುತ್ರ ತೇಜಸ್ವಿ ಅವರಿಗೆ ದೆಹಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಲಾಲೂ ಕುಟುಂಬದ ವಿರುದ್ಧ ಸಿಬಿಐ ಮತ್ತು ಇಡಿ ಪ್ರಕರಣ ದಾಖಲಿಸಿತ್ತು. ನವೆಂಬರ್ 19 ರಂದು ಲಾಲೂ ಪ್ರಸಾದ್ ಅವರನ್ನು ವಿಡಿಯೋ ಕಾನ್ ಫರೆನ್ಸ್ ಮೂಲಕ ಹಾಜರು ಪಡಿಸಬೇಕೆಂದು ಸೂಚಿಸಿದೆ. ಸೆಪ್ಟಂಬರ್ 17 ರಂದು ಪ್ರಕರಣ ಸಂಬಂಧ ಲಾಲೂ ಕುಟುಂಬಕ್ಕೆ ಕೋರ್ಟ್ ಸಮನ್ಸ್ ನೀಡಿತ್ತು. ಹೆಚ್ಚುವರಿ ನ್ಯಾಯಾಧೀಶ ಅರುಣ್ ಭಾರದ್ವಾಜ್ ಜಾರ್ಜ್ ಶೀಟ್ ಪರಿಶಿಲಿಸಿ,ಅಕ್ಟೋಬರ್ 6ರಂದು ಕೋರ್ಟ್ ಗೆ ಹಾಜರಾಗುವಂತೆ ಸೂಚಿಸಿತ್ತು, ತಲಾ 1 ಲಕ್ಷ ರು ಬಾಂಡ್ ಹಾಗೂ ಇಬ್ಬರು ಶೂರಿಟಿ ನೀಡುವಂತೆ ನ್ಯಾಯಾಲಯ ಸೂಚಿಸಿದೆ.

About the author

ಕನ್ನಡ ಟುಡೆ

Leave a Comment