ಅ೦ತರಾಷ್ಟ್ರೀಯ

ಐಎಂಎಫ್ ನ ಮೊದಲ ಮಹಿಳಾ ಮುಖ್ಯ ಆರ್ಥಿಕ ತಜ್ಞರಾಗಿ ಮೈಸೂರು ಮೂಲದ ಗೀತಾ ಗೋಪಿನಾಥ್ ಅಧಿಕಾರ ಸ್ವೀಕಾರ

ವಾಷಿಂಗ್ ಟನ್: ಐಎಂಎಫ್ ನ ಮೊದಲ ಮಹಿಳಾ ಮುಖ್ಯ ಆರ್ಥಿಕ ತಜ್ಞರಾಗಿ ಮೈಸೂರು ಮೂಲದ ಗೀತಾ ಗೋಪಿನಾಥ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಜಾಗತಿಕ ಆರ್ಥಿಕತೆ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಐಎಂಎಫ್ ನ ಮುಖ್ಯ ಆರ್ಥಿಕ ತಜ್ಞರಾಗಿ  ಗೀತಾ ಗೋಪಿನಾಥ್ ಅಧಿಕಾರ ವಹಿಸಿಕೊಂಡಿದ್ದು ಅವರೆದುರು ಹಲವು ಸವಾಲುಗಳಿದ್ದು ಹೊಸ ಮುಖ್ಯಸ್ಥರ ಮೇಲೆ ನಿರೀಕ್ಷೆಗಳೂ ಹೆಚ್ಚಾಗಿಯೇ ಇವೆ. ಗೀತಾ ಗೋಪಿನಾಥ್ ಹುಟ್ಟಿದ್ದು ಡಿಸೆಂಬರ್ 8 , 1971 ರಲ್ಲಿ ನಮ್ಮ ಮೈಸೂರು ನಗರದಲ್ಲಿ. ಅಪ್ಪ -ಅಮ್ಮ ಮೂಲತಃ ಕೇರಳದವರು. ಪ್ರಾಥಮಿಕ ಶಿಕ್ಷಣ ಕೂಡ ಮೈಸೂರಿನಲ್ಲೇ! ನಂತರ ದೆಹಲಿಯ ಶ್ರೀರಾಮ್ ಕಾಲೇಜಿನಲ್ಲಿ ಪದವಿ ಪಡೆಯುತ್ತಾರೆ ಆ ನಂತರ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಮಾಸ್ಟರ್ ಡಿಗ್ರಿ  ಪಡೆದಿದ್ದಾರೆ. ಐಎಂಎಫ್ ನ ಹುದ್ದೆಗೇರುವವರೆಗೂ ಗೀತಾ ಗೋಪಿನಾಥ್ ಅವರು ಅಮೆರಿಕಾದ ಹಾರ್ವಾರ್ಡ್ ವಿಶ್ವವಿದ್ಯಾನಿಲಯದಲ್ಲಿ  ಇಂಟರ್ನ್ಯಾಷನಲ್ ಸ್ಟಡೀಸ್ ಮತ್ತು ಎಕನಾಮಿಕ್ಸ್ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದರು.
ಇದಕ್ಕೂ ಮುಂಚೆ ಅಂದರೆ ಜುಲೈ 2016 ರಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೆ ಹಣಕಾಸು ಸಲಹೆಗಾರರಾಗಿ ನೇಮಕಗೊಂಡಿದ್ದರು. ಕೇರಳದ ಎಡ ರಾಜಕೀಯ ವಲಯದಲ್ಲಿ ಲಿಬರಲ್ ಮನೋಭಾವದ ಗೀತಾರನ್ನ ನೇಮಕ ಮಾಡಿದ್ದು ಚರ್ಚೆಯ ವಿಷಯವಾಗಿತ್ತು.  ಐಎಂಎಫ್ ಸಂಸ್ಥೆಯ ಆಡಳಿತ ಮಂಡಳಿಗೆ ಭಾರತದ ಮಾಜಿ ಆರ್ ಬಿಐ ಗೌರ್ನರ್ ರಘುರಾಮ ರಾಜನ್ ಅವರು ಸಹ ಚೀಫ್ ಎಕನಾಮಿಸ್ಟ್ ಆಗಿ ಸೇವೆ ಸಲ್ಲಿಸಿದ್ದರು.

About the author

ಕನ್ನಡ ಟುಡೆ

Leave a Comment