ರಾಜ್ಯ ಸುದ್ದಿ

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸೇರಿ ನಾಲ್ವರು ಜಿಲ್ಲಾಧಿಕಾರಿಗಳ ವರ್ಗಾವಣೆ

ಹಾಸನ: ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರು ಕೊನೆಗೂ ಹಾಸನದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಎ. ಮಂಜು ಒತ್ತಾಯದ ಮೇರೆಗೆ ಅವರನ್ನು ಅವಧಿಗೆ ಮುನ್ನ ಹಾಸನದಿಂದ ರೋಹಿಣಿ ಅವರನ್ನು ವರ್ಗಾವಣೆ ಮಾಡಿಸಲಾಗಿತ್ತು. ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಸಿಂಧೂರಿ ಕೆಎಟಿ ಹಾಗೂ ಹೈಕೋರ್ಟ್ ಮೆಟ್ಟಿಲೇರಿದ್ದರು. ಆ ವೇಳೆ ರೇವಣ್ಣ ಸಿಂಧೂರಿ ಪರವಾಗಿ ನಿಂತಿದ್ದರು. ವರ್ಗಾವಣೆ ವಿರುದ್ಧ ತಡೆ ಆದೇಶ ನೀಡಲಾಗಿತ್ತು. ಮೈತ್ರಿ ಸರ್ಕಾರ ರಚನೆ ಬಳಿಕ ತಾವು ಈ ಹಿಂದೆ ಬೆಂಬಲಿಸಿದ್ದ ಜಿಲ್ಲಾಧಿಕಾರಿಯೇ ಜಿಲ್ಲಾ ಉಸ್ತುವಾರಿ ಸಚಿವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದರು. ಅನೇಕ ಕಾರ್ಯಕ್ರಮಗಳಲ್ಲಿ ಇವರ ನಡುವಿನ ವಾಗ್ವಾದ ಕೂಡ ಬಹಿರಂಗಗೊಂಡಿತ್ತು. ರೋಹಿಣಿ ಸಿಂಧೂರಿ ಸೇರಿದಂತೆ ಡಾ. ಎಂವಿ ವೆಂಕಟೇಶ್, ಕೃಷ್ಣ ಬಾಜಪೇಯಿ, ಅಕ್ರಂ ಪಾಷಾರನ್ನು ವರ್ಗಾವಣೆ ಮಾಡಲಾಗಿದೆ.

About the author

ಕನ್ನಡ ಟುಡೆ

Leave a Comment