ರಾಷ್ಟ್ರ ಸುದ್ದಿ

ಐಎನ್ಎಕ್ಸ್ ಮಾಧ್ಯಮ ಪ್ರಕರಣ: ಚಿದಂಬರಂ ವಿಚಾರಣೆ ನಡೆಸಲು ಸಿಬಿಐಗೆ ಸರ್ಕಾರ ಅನುಮತಿ

ನವದೆಹಲಿ: ಐಎನ್ ಎಕ್ಸ್ ಮಾಧ್ಯಮ ಪ್ರಕರಣದಲ್ಲಿ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರನ್ನು  ಸಿಬಿಐ ವಿಚಾರಣೆ ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಪ್ರಕರಣದಲ್ಲಿ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರನ್ನು ಈಗಾಗಲೇ  ವಿಚಾರಣೆ ನಡೆಸಲಾಗಿದ್ದು, ವಿದೇಶ ಹಾಗೂ ಭಾರತದಲ್ಲಿ ಅವರಿಗೆ ಸೇರಿದ ಸುಮಾರು 54 ಕೋಟಿ ರೂ. ಮೊತ್ತದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದುಕೊಂಡಿದೆ. ವಿಚಾರಣೆಗಾಗಿ ಚಿದಂಬರಂ ಅವರನ್ನು ಕಸ್ಟಡಿಗೆ ಪಡೆದುಕೊಳ್ಳುವ ಅಗತ್ಯವಿದೆ ಎಂದು ಸಿಬಿಐ ಹಾಗೂ ಇಡಿ ಜನವರಿ 25 ರಂದು ದೆಹಲಿ ಹೈಕೋರ್ಟ್ ನಲ್ಲಿ ಹೇಳಿಕೆ ನೀಡಿದ್ದವು.3500 ಕೋಟಿಯ ಏರ್ ಸೆಲ್ ಮ್ಯಾಕ್ಸಿಲ್  ಒಪ್ಪಂದ ಮತ್ತು ಐಎನ್ ಎಕ್ಸ್ ಮಾಧ್ಯಮ ಪ್ರಕರಣದಲ್ಲಿ 305 ಕೋಟಿ ರೂ. ತೊಡಗಿಸಿರುವ  ಸಂಬಂಧ ತನಿಖಾ ಸಂಸ್ಥೆಗಳು ಪಿ. ಚಿದಂಬರಂ ಅವರನ್ನು ವಿಚಾರಣೆ ನಡೆಸುತ್ತಿವೆ. ಪಿ. ಚಿದಂಬರಂ ವಿತ್ತ ಸಚಿವರಾಗಿದ್ದ ಸಂದರ್ಭದಲ್ಲಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಮೇ 15, 2017ರಲ್ಲಿ ಸಿಬಿಐ ಎಫ್ ಐಆರ್ ದಾಖಲಿಸಿತ್ತು.
ಕಾರ್ತಿ ಚಿದಂಬರಂ , ಐಎನ್ ಎಕ್ಸ್ ಮಾಧ್ಯಮ ಹಾಗೂ ಅದರ ನಿರ್ದೇಶಕರಾದ ಪೀಟರ್ , ಇಂದ್ರಾಣಿ ಮುಖರ್ಜಿ ವಿರುದ್ದ ಇಡಿ ಕೂಡಾ ಎಫ್ ಐಆರ್ ದಾಖಲಿಸಿತ್ತು. ನಂತರ ಕಾರ್ತಿ ಚಿದಂಬರಂ ಅವರನ್ನು ಬಂಧಿಸಲಾಗಿತ್ತಾದರೂ ಜಾಮೀನು ಪಡೆದುಕೊಂಡಿದ್ದರು. ಕಾರ್ತಿ ಚಿದಂಬರಂ 10 ಕೋಟಿ ರೂಪಾಯಿಯನ್ನು ಠೇವಣಿಯಾಗಿಟ್ಟು ವಿದೇಶಕ್ಕೆ ತೆರಳಲು  ವಾರ ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು. ಆದರೆ, ಐಎನ್ ಎಕ್ಸ್  ಮಾಧ್ಯಮ ಹಾಗೂ ಏರ್ ಸೆಲ್  ಮ್ಯಾಕ್ಸಿಸ್ ಪ್ರಕರಣದಲ್ಲಿ  ತನಿಖೆಗೆ ಸಹಕರಿಸುವಂತೆ ಸೂಚನೆ ನೀಡಿತ್ತು.

About the author

ಕನ್ನಡ ಟುಡೆ

Leave a Comment