ಕ್ರೀಡೆ

ಐಎಸ್ಎಸ್ ಎಫ್ ವಿಶ್ವಕಪ್ : 10 ಮೀಟರ್ ಏರ್ ರೈಪಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ಧ ಅಪೂರ್ವಿ ಚಾಂದೆಲಾ

ನವದೆಹಲಿ:  2019 ಐಎಸ್ ಎಸ್ ಎಫ್ ವಿಶ್ವಕಪ್ ಟೂರ್ನಿಯ 10 ಮೀಟರ್ ಮಹಿಳಾ ರೈಪಲ್ ಫೈನಲ್ ಪಂದ್ಯದಲ್ಲಿ ಅಪೂರ್ವಿ ಚಾಂದೆಲಾ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದು, ಭಾರತಕ್ಕೆ ಕೀರ್ತಿ ತಂದಿದ್ದಾರೆ.ಅರ್ಹತಾ ಸುತ್ತಿನಲ್ಲಿ 629. 3ರೊಂದಿಗೆ  ನಾಲ್ಕನೇ ಹಂತವನ್ನು ಪೂರ್ಣಗೊಳಿಸಿದರು. ಅಂಜುಮ್ ಮೌದ್ಗಿಲ್ ಮತ್ತು ಇಲವೇಲ್ ವಾಲಾರಿವನ್ ಫೈನಲ್ ಪಂದ್ಯ ಆಡಲು ಆರ್ಹತೆ ಗಿಟ್ಟಿಸಲಿಲ್ಲ.

ಭಾರತದಿಂದ 23 ಸ್ಪರ್ಧಿಗಳು ಸೇರಿದಂತೆ  60 ರಾಷ್ಟ್ರಗಳ 500 ಶೂಟರ್ಸ್ ಗಳು ಈ ವಿಶ್ವಕಪ್  ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದು, ಪದಕ ಹಾಗೂ ಉತ್ತಮ ಸ್ಥಾನ ಪಡೆಯಲು ಪ್ರಬಲ ಪೈಪೋಟಿ ನೀಡುತ್ತಿದ್ದಾರೆ.

About the author

ಕನ್ನಡ ಟುಡೆ

Leave a Comment