ರಾಜಕೀಯ

ಐಟಿ ದಾಳಿ ನಡೆದಿಲ್ಲ: ಹೆಚ್‏ಸಿ ಮಹದೇವಪ್ಪ ಹೇಳಿಕೆ

ಹುಬ್ಬಳ್ಳಿ: ತಮ್ಮ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿಲ್ಲ ಎಂದು ಸಚಿವ ಹೆಚ್ ಸಿ ಮಹದೇವಪ್ಪ ಇಂದು ಸ್ಪಷ್ಟಪಡಿಸಿದ್ದಾರೆ. ಇಂದು ಬೆಳಗ್ಗೆ ಮಹದೇವಪ್ಪ ಅವರ ಮೈಸೂರು ನಿವಾಸದ ಮೇಲೆ ಕೇಂದ್ರ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿತ್ತು. ಈ ಹಿನ್ನಲೆಯಲ್ಲಿ ಇಂದು ಸ್ಪಷ್ಟನೆ ನೀಡಿರುವ ಮಹದೇವಪ್ಪ ಅವರು ತಮ್ಮ ನಿವಾಸದ ಮೇಲೆ ಯಾವುದೇ ರೀತಿಯ ಐಟಿ ದಾಳಿಯಾಗಿಲ್ಲ. ಆದರೆ ಕೆಲ ಕಂಟ್ರಾಕ್ಟರ್ ಗಳ ನಿವಾಸದ ಮೇಲೆ ಐಟಿ ದಾಳಿಯಾಗಿದೆ.

ಇದನ್ನೇ ಮಾಧ್ಯಮಗಳಲ್ಲಿ ತಪ್ಪಾಗಿ ಸುದ್ದಿ ಪ್ರಕಟ ಮಾಡಲಾಗಿದೆ ಎಂದು ಮಹದೇವಪ್ಪ ಹೇಳಿದರು. ಇದೇ ವೇಳೆ ತಾವು ಪ್ರಸ್ತುತ ಬಾದಾಮಿಗೆ ತೆರಳುತ್ತಿದ್ದು ಸಿಎಂ ಸಿದ್ದರಾಮಯ್ಯ ಅವರು ಇಂದು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ. ಹೀಗಾಗಿ ನಾನು ಕೂಡ ಅವರೊಂದಿಗೆ ತೆರಳುತ್ತಿದ್ದೇನೆ. ಅವರ ಪರ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ನಡೆಸುತ್ತೇನೆ ಎಂದು ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ.

 

About the author

ಕನ್ನಡ ಟುಡೆ

Leave a Comment