ಸಿನಿ ಸಮಾಚಾರ

ಐಟಿ ವಿಚಾರಣೆಗೆ ಹಾಜರಾದ ನಟ ಪುನೀತ್‌ ರಾಜ್‌ಕುಮಾರ್‌

ಬೆಂಗಳೂರು: ಆದಾಯ ತೆರಿಗೆ ವಂಚನೆ ವಿಚಾರದಲ್ಲಿ ನಟ ಪುನೀತ್‌ ರಾಜ್‌ಕುಮಾರ್‌ ಬುಧವಾರ ಐಟಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾದರು. ಮಧ್ಯಾಹ್ನ 3.45ರ ಸುಮಾರಿಗೆ ಕ್ವೀನ್ಸ್‌ ರಸ್ತೆಯಲ್ಲಿರುವ ಐಟಿ ಕಚೇರಿಗೆ ತಮ್ಮ ಆಡಿಟರ್‌ ಜೊತೆಯಲ್ಲಿ ಭೇಟಿ ನೀಡಿ, ಸುಮಾರು 1 ತಾಸಿಗೂ ಹೆಚ್ಚು ಕಾಲ ವಿಚಾರಣೆ ಎದುರಿಸಿದರು.

ವಿಚಾರಣೆ ಕುರಿತು ಪತ್ರಕರ್ತರು ಕೇಳಿದಾಗ, ”ನಾನು ನಿಮಗೆ ಉತ್ತರಿಸಬೇಕಿಲ್ಲ. ಅಂದು ಅದನ್ನೇ ಹೇಳಿದ್ದೇನೆ. ಇವತ್ತು ಅದನ್ನೇ ಹೇಳುತ್ತೇನೆ. ವಿಷಯವೂ ನಿಮಗೆ ಸಂಬಂಧಿಸಿದಲ್ಲ. ನನಗೆ ಮತ್ತು ಐಟಿ ಇಲಾಖೆಗೆ ಸಂಬಂಧಿಸಿದ್ದಾಗಿದೆ. ಒಬ್ಬ ಉದ್ಯಮಿಯಾಗಿ, ಕಲಾವಿದನಾಗಿ ನಾನು ಏನು ಎದುರಿಸಬೇಕು ಎದುರಿಸುತ್ತೇನೆ. ಅದು ನಡೆಯುತ್ತಿದೆ. ಉಳಿದಂತೆ ನಂತರದ ದಿನಗಳಲ್ಲಿ ವಿಚಾರಣೆ ಕರೆಸುವುದು ಅವರಿಗೆ (ಐಟಿ) ಬಿಟ್ಟ ವಿಚಾರ” ಎಂದರು ಹೇಳಿ ಹೊರಟರು. ಮುಂದಿನ ದಿನಗಳಲ್ಲಿ ಮತ್ತೆ ವಿಚಾರಣೆ ಹಾಜರಾಗಬೇಕಾಗುತ್ತದೆ ಎಂದು ಪುನೀತ್‌ ಅವರಿಗೆ ಐಟಿ ಅಧಿಕಾರಿಗಳು ತಿಳಿಸಿದ್ದಾರೆಂದು ತಿಳಿದು ಬಂದಿದೆ.

About the author

ಕನ್ನಡ ಟುಡೆ

Leave a Comment