ಕ್ರೀಡೆ

ಐತಿಹಾಸಿಕ ಸರಣಿ ಜಯ ಭಾರತಕ್ಕೆ

ಕೇಪ್‌ಟೌನ್‌: ಆಲ್‌ರೌಂಡ್‌ ಪ್ರದರ್ಶನ ನೀಡಿದ ಭಾರತ ಮಹಿಳಾ ಕ್ರಿಕೆಟ್‌ ತಂಡ ದಕ್ಷಿಣದ ಆಫ್ರಿಕಾ ವಿರುದ್ಧ 5ನೇ ಟಿ20 ಪಂದ್ಯದಲ್ಲಿ 54 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.

ಈ ಮೂಲಕ 5 ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯಲ್ಲಿ 3-1 ಅಂತರದ ಜಯ ದಾಖಲಿಸಿದ ಹರ್ಮನ್‌ಪ್ರೀತ್‌ ಕೌರ್‌ ಪಡೆ. ದಕ್ಷಿಣ ಆಫ್ರಿಕಾ ವಿರುದ್ಧ 2 ಸರಣಿ ಗೆದ್ದ ಮೊದಲ ಭಾರತ ತಂಡ ಎಂಬ ಇತಿಹಾಸ ನಿರ್ಮಿಸಿದೆ. ಇದಕ್ಕೂ ಮುನ್ನ 3 ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿತ್ತು.

ಇಲ್ಲಿನ ನ್ಯೂಲ್ಯಾಂಡ್ಸ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ತನ್ನ ಪಾಲಿನ 20 ಓವರ್‌ಗಳಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು 166 ರನ್‌ಗಳ ಸವಾಲಿನ ಮೊತ್ತ ದಾಖಲಿಸಿತು.

ಭಾರತದ ಪರ ಆರಂಭಿಕ ಆಟಗಾರ್ತಿ ಮಿಥಾಲಿ ರಾಜ್‌, 50 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಿತ ಭರ್ಜರಿಯ 62 ರನ್‌ಗಳನ್ನು ಸಿಡಿಸಿ ಸವಾಲಿನ ಮೊತ್ತ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಉತ್ತಮ ಸಾಥ್‌ ನೀಡಿದ ಯುವ ಆಟಗಾರ್ತಿ ಜಮಿಮಾ ರೋಡ್ರಿಗಸ್‌ 34 ಎಸೆತಗಳಲ್ಲಿ 44 ರನ್‌ ನೀಡಿದರು.

ನಂತರ ಗುರಿ ಬೆನ್ನತ್ತಿದ ದಕ್ಷಿನ ಆಫ್ರಿಕಾ ತಂಡ 18 ಓವರ್‌ಗಳಲ್ಲಿ 112 ರನ್‌ಗಳಿಗೆ ಆಲ್‌ಔಟ್‌ ಆಯಿತು. ಭಾರತ ಪರ ಶಿಖಾ ಪಾಂಡೆ ಮತ್ತು ರುಮೇಲಿ ಧಾರ್‌ ತಲಾ 3 ವಿಕೆಟ್‌ ಪಡೆದು ಮಿಂಚಿದರು.

 

About the author

ಕನ್ನಡ ಟುಡೆ

Leave a Comment