ಸುದ್ದಿ

ಐಪಿಎಲ್‌ನಲ್ಲಿ ಹೃತಿಕ್‌ ನೃತ್ಯ

ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (ಐಪಿಎಲ್‌) ಉದ್ಘಾಟನಾ ಕಾರ್ಯಕ್ರಮದಲ್ಲಿ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಬದಲಿಗೆ ಹೃತಿಕ್‌ ರೋಷನ್‌ ನೃತ್ಯ ಪ್ರದರ್ಶಿಸಲಿದ್ದಾರೆ.

ಫುಟ್ಬಾಲ್ ಆಡುವ ವೇಳೆ ಗಾಯಗೊಂಡು, ಭುಜದ ನೋವಿನಿಂದ ಬಳಲುತ್ತಿರುವ ರಣವೀರ್‌ ಸಿಂಗ್‌, ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ಬಿಸಿಸಿಐಗೆ ಕೆಲ ದಿನಗಳ ಹಿಂದೆಯಷ್ಟೇ ತಿಳಿಸಿದ್ದರು. ಕೂಡಲೇ ಆಯೋಜಕರು ಹೃತಿಕ್‌ ರೋಷನ್‌ ಅವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಇದಕ್ಕೆ ಹೃತಿಕ್‌ ಒಪ್ಪಿಗೆ ನೀಡಿದ್ದಾರೆ. ‘ಈಗಾಗಲೇ ನಾನು ಕೊರಿಯೊಗ್ರಾಫರ್‌ ಶೈಮಾಕ್‌ ದವರ್‌ ಅವರೊಂದಿಗೆ ತಾಲೀಮು ಆರಂಭಿಸಿದ್ದೇನೆ. ಜನರ ಮುಂದೆ ನೇರ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಕಾತರನಾಗಿದ್ದೇನೆ’ ಎಂದು ಹೃತಿಕ್‌ ಹೇಳಿದ್ದಾರೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇದೇ 7ರಂದು ಐಪಿಎಲ್‌ ಕ್ರೀಡಾಕೂಟಕ್ಕೆ ಚಾಲನೆ ದೊರೆಯಲಿದೆ. ಬಾಲಿವುಡ್‌ ನಟರಾದ ವರುಣ್‌ ಧವನ್‌, ಪರಿಣೀತಿ ಚೋಪ್ರಾ, ಜಾಕ್ವೆಲಿನ್‌  ಫರ್ನಾಂಡೀಸ್‌ ಸೇರಿದಂತೆ ಹಲವು ನಟ, ನಟಿಯರು ಈ ಅದ್ದೂರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

About the author

ಕನ್ನಡ ಟುಡೆ

Leave a Comment